logo
ಕನ್ನಡ ಸುದ್ದಿ  /  ಕರ್ನಾಟಕ  /  ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು

ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು

Prasanna Kumar P N HT Kannada

Nov 12, 2024 07:00 AM IST

google News

ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು

    • Onion Price: ಕರ್ನಾಟಕದಲ್ಲಿ ಈರುಳ್ಳಿ ಬಡವರು, ಮಧ್ಯಮವರ್ಗದವರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 20-30 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಕೆಜಿ ಈರುಳ್ಳಿ ಬೆಲೆ 80 ರೂಪಾಯಿ ಆಗಿದೆ. ಶೀಘ್ರದಲ್ಲೇ ಶತಕ ಬಾರಿಸುವ ಸಾಧ್ಯತೆ ಇದೆ.
ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು
ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಈರುಳ್ಳಿ ಬೆಲೆ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ. ಈ ಬಾರಿ ಇಳುವರಿ ಕಡಿಮೆಯಾಗಿರುವುದು, ಅಕಾಲಿಕ ಮಳೆ, ಗುಣಮಟ್ಟದ ಈರುಳ್ಳಿ ಕೊರತೆ ಮತ್ತು ಸರಬರಾಜಿನಲ್ಲಿ ಉಂಟಾದ ಏರುಪೇರು ಹಾಗೂ ರಫ್ತಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. ಮತ್ತೊಂದು ಕಡೆ ಆಲೂಗಡ್ಡೆಯ ಬೆಲೆಯೂ ನಿಧಾನವಾಗಿ ಏರುತ್ತಿದೆ. ಸದ್ಯಕ್ಕೆ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಮಾತ್ರ ಇಳಿಯುತ್ತಿದೆ. ಬೆಂಗಳೂರಿನಲ್ಲೂ ಈರುಳ್ಳಿ ಬೆಲೆ ಏರುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 20-30 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಕೆಜಿ ಈರುಳ್ಳಿ ಬೆಲೆ 80 ರೂಪಾಯಿ ಆಸುಪಾಸಿನಲ್ಲಿದೆ. ಈರುಳ್ಳಿ ಬೆಲೆ ಕಳೆದ 4-5 ತಿಂಗಳಿನಿಂದ ಗಗನಮುಖಿಯಾಗಿದೆ.

ಅಡುಗೆ ಮಾಡುವವರ ಕಣ್ಣಲ್ಲಿ ನೀರು ತರಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ದರ 100 ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ. ರಾಜ್ಯದಲ್ಲೂ ಬೆಲೆ ಏರಿಕೆಗೆ ಅಕಾಲಿಕ ಮಳೆ, ಬೆಳೆ ಹಾನಿ ಪ್ರಮುಖ ಕಾರಣ ಎನ್ನಲಾಗಿದೆ. ಒಂದು ಕಡೆ ಅಗತ್ಯ ವಸ್ತುಗಳ‌ ಬೆಲೆ‌ ದಿನದಿಂದ ದುಬಾರಿಯಾಗುತ್ತಿದ್ದು ಬಡವರು, ಮಧ್ಯಮವರ್ಗದವರು ಜೀವನ ನಡೆಸುವುದು ಕಷ್ಟವಾಗಿ ಹೋಗಿದೆ. ಈರುಳ್ಳಿಯ ಪ್ರಮುಖ ಮಾರುಕಟ್ಟೆಯಾಗಿರುವ ನಾಸಿಕ್​​ನಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ದಿಢಿರ್‌ ಎಂದು ಏರಿಕೆಯಾಗಿದೆ. ಈರುಳ್ಳಿ ಬೆಳೆಯುವ ರಾಜಸ್ತಾನ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಸೆಪ್ಟಂಬರ್​​ನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಬೆಳೆ ನಾಶವಾಗಿತ್ತು. ಖಾರಿಫ್‌ ಉತ್ಪಾದನೆಯೂ ಕುಸಿದಿತ್ತು.

ಆಮದು ಶುಲ್ಕ ರದ್ದು, ರಫ್ತು ಶುಲ್ಕ ಕಡಿಮೆ

ಈ ಸಮಸ್ಯೆಗಳ ಜೊತೆಗೆ ದೀಪಾವಳಿ ರಜೆಯಿಂದಾಗಿ ದೇಶದ ಬಹುತೇಕ ಸಗಟು ಈರುಳ್ಳಿ ಮಾರುಕಟ್ಟೆಗಳು ಬಂದ್‌ ಆಗಿದ್ದವು. ಇದರಿಂದ ಈರುಳ್ಳಿ ಸರಬರಾಜಿಗೆ ಅಡಚಣೆ ಉಂಟಾಗಿ ಬೆಲೆ ಏರಿಕೆಗೆ ಕಾರಣವಾಗಿತ್ತು. ಇದೊಂದೇ ಕಾರಣಕ್ಕೆ ಈರುಳ್ಳಿ ಬೆಲೆ ಶೇ.30-35ರಷ್ಟು ಹೆಚ್ಚಳವಾಗಿತ್ತು ಎಂದು ವ್ಯಾಪಾರಿಗಳು ಹೇಳುತ್ತಾರೆ. ದೇಶೀಯ ಸಮಸ್ಯೆಗಳ ಜೊತೆಗೆ ರಫ್ತಿಗೂ ಬೇಡಿಕೆ ಹೆಚ್ಚಿತ್ತು. ಇತ್ತೀಚೆಗೆ ಬಾಂಗ್ಲಾದೇಶ ಈರುಳ್ಳಿ ಮೇಲಿನ ಆಮದು ಶುಲ್ಕವನ್ನು ಜನವರಿ 15 ರವರೆಗೆ ರದ್ದುಗೊಳಿಸಿದೆ. ಇದರಿಂದ ಬಾಂಗ್ಲಾದೇಶಕ್ಕೆ ರಫ್ತಾಗುವ ಪ್ರಮಾಣ ಹೆಚ್ಚಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಫ್ತು ಶುಲ್ಕವನ್ನು ಶೇಕಡಾ 20ರಷ್ಟು ಕಡಿಮೆ ಮಾಡಿದೆ. ರೈತರು ಈರುಳ್ಳಿ ರಫ್ತು ಮೇಲೆ ವಿಧಿಸಿದ್ದ ನಿರ್ಬಂಧವನ್ನು ವಿರೋಧಿಸಿದ್ದರು.

ಆಲೂಗಡ್ಡೆ ಬೆಲೆಯೂ ಏರಿಕೆ

ಇದರಿಂದ ಈರುಳ್ಳಿ ರಫ್ತು ಪ್ರಮಾಣ ಹೆಚ್ಚಳವಾಗಿದ್ದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಅಕಾಲಿಕ ಮಳೆಯ ಕಾರಣಕ್ಕೆ ಈರುಳ್ಳಿ ಗುಣಮಟ್ಟ ಹಾಳಾಗಿದೆ. ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಈ ಕಾರಣಕ್ಕೂ ಬೆಲೆ ಏರುತ್ತಲೇ ಇದೆ. ಇನ್ನು ಆಲೂಗಡ್ಡೆ ಬೆಲೆಯೂ ನಿಧಾನವಾಗಿ ಏರುತ್ತಲೇ ಇದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಆಲೂ ಬೆಲೆ ಏರಿಕೆಯಾಗಿದ್ದು, 50 ರೂ.ಗಳಿಗೆ ಮಾರಾಟವಾಗುತಿದೆ. ಕಳೆದ ವರ್ಷ ಹೋಲ್‌ ಸೇಲ್‌ ಮಾರುಕಟ್ಟೆಯಲ್ಲಿ 30 ರೂ ಇದ್ದು ಮಾರುಕಟ್ಟೆಯಲ್ಲಿ 40 ರೂಗೆ ಮಾರಾಟವಾಗುತ್ತಿತ್ತು. ಮತ್ತೆ ಮಳೆಯ ಕಾರಣಕ್ಕೆ ಆಲೂಗಡ್ಡೆ ಬೆಳೆಯುವ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಇಳುವರಿ ಕಡಿಮೆಯಾಗಿದೆ. ಕರ್ನಾಟಕದ ಆಲೂಗಡ್ಡೆ ಕಣಜವಾದ ಹಾಸನದಲ್ಲಿ ಅಕಾಲಿಕ ಮಳೆಯಿಂದಾಗಿ ಆಲೂಗಡ್ಡೆ ಬೆಳೆ ಹಾಳಾಗಿದೆ. ಇದ್ದುದರಲ್ಲಿ ಟೊಮೆಟೊ ಅಡುಗೆಮನೆಯನ್ನು ರಕ್ಷಿಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ