ಹುಷಾರ್ ಕಣ್ರಪ್ಪ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ಬೇಡಿ; ಒಂದಿನದಲ್ಲಿ 2670 ಡೆಲಿವರಿ ಬಾಯ್​ಗಳ ವಿರುದ್ಧ ಕೇಸ್, ದಂಡವೆಷ್ಟು?
ಕನ್ನಡ ಸುದ್ದಿ  /  ಕರ್ನಾಟಕ  /  ಹುಷಾರ್ ಕಣ್ರಪ್ಪ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ಬೇಡಿ; ಒಂದಿನದಲ್ಲಿ 2670 ಡೆಲಿವರಿ ಬಾಯ್​ಗಳ ವಿರುದ್ಧ ಕೇಸ್, ದಂಡವೆಷ್ಟು?

ಹುಷಾರ್ ಕಣ್ರಪ್ಪ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ಬೇಡಿ; ಒಂದಿನದಲ್ಲಿ 2670 ಡೆಲಿವರಿ ಬಾಯ್​ಗಳ ವಿರುದ್ಧ ಕೇಸ್, ದಂಡವೆಷ್ಟು?

Bangalore Traffic Rules: ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 2670 ಇ-ಕಾಮರ್ಸ್ ಉತ್ಪನ್ನ ವಿತಕರ ವಿರುದ್ಧ ಕೇಸ್ ದಾಖಲಾಗಿದೆ. ದಂಡ ವಸೂಲಿಯಾಗಿದ್ದು 13.7 ಲಕ್ಷ.

ಸಂಚಾರ ನಿಯಮ ಉಲ್ಲಂಘನೆ; ಒಂದೇ ದಿನದಲ್ಲಿ 2670 ಇ-ಕಾಮರ್ಸ್ ಉತ್ಪನ್ನ ವಿತಕರ ವಿರುದ್ಧ ಕೇಸ್, ದಂಡ ವಸೂಲಿಯಾಗಿದ್ದೆಷ್ಟು?
ಸಂಚಾರ ನಿಯಮ ಉಲ್ಲಂಘನೆ; ಒಂದೇ ದಿನದಲ್ಲಿ 2670 ಇ-ಕಾಮರ್ಸ್ ಉತ್ಪನ್ನ ವಿತಕರ ವಿರುದ್ಧ ಕೇಸ್, ದಂಡ ವಸೂಲಿಯಾಗಿದ್ದೆಷ್ಟು?

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ (Bangalore Traffic Rules violations) ಪ್ರಕರಣಗಳು ದಿನೇ ದಿನೇ ದುಪ್ಪಟ್ಟುಗೊಳ್ಳುತ್ತಿವೆ. ಅದರಲ್ಲೂ ಇ-ಕಾಮರ್ಸ್ ಉತ್ಪನ್ನ ತಲುಪಿಸುವ ಡೆಲಿವರಿ ಬಾಯ್​ಗಳು ಮಾಡುತ್ತಿರುವ ಉಲ್ಲಂಘನೆಗಳೇ ಹೆಚ್ಚು. ಈ ದ್ವಿಚಕ್ರ ವಾಹನ ಚಾಲಕರ ವಿರುದ್ಧ ನವೆಂಬರ್ 10ರಂದು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಈ ಪೈಕಿ 2,670 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು 13.7 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ.

ನವೆಂಬರ್​ 10ರ ಭಾನುವಾರ ಸಂಚಾರ ನಿಯಮ ಉಲ್ಲಂಘಿಸಿದ 2,670 ಪ್ರಕರಣಗಳ ಪೈಕಿ 1400 ಮಂದಿ ಹೆಲ್ಮೆಟ್ ಧರಿಸದ ಪ್ರಕರಣಗಳು. ಒನ್​ವೇ ಟ್ರಾಫಿಕ್​ನಲ್ಲಿ, ನೋ ಪಾರ್ಕಿಂಗ್, ಟ್ರಾಫಿಕ್ ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಹಲವು ಪ್ರಕರಣಗಳು ಪತ್ತೆಯಾಗಿವೆ. ಈ ಕಾರ್ಯಾಚರಣೆ ಜಾಗೃತಿ ಮೂಡಿಸಲು, ಸುರಕ್ಷತೆಯ ಆದ್ಯತೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ. ಇಲ್ಲಿ ಶಿಕ್ಷೆ ಅಥವಾ ದಂಡ ವಸೂಲಿಗಿಂತ ತಡೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಹೇಳಿದ್ದಾರೆ.

ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‌ನರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ವಿನಯ್ ಸಾರಥಿ ಅವರು, ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನೈಜ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇ-ಕಾಮರ್ಸ್ ವಿತರಕರನ್ನು ಗುರಿಯಾಗಿಸುವ ಈ ಅಭಿಯಾನಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಕಂಪನಿಗಳು ವಿಧಿಸಿರುವ ಅವಾಸ್ತವಿಕ ಡೆಡ್​ಲೈನ್​ಗಳೇ ಸಂಚಾರಿ ನಿಯಮಗಳ ಉಲ್ಲಂಘನೆಗೆ ಕಾರಣ ಎಂದಿದ್ದಾರೆ. 10 ನಿಮಿಷದ ಡೆಲಿವರಿ, 30-ನಿಮಿಷ ಡೆಲಿವರಿ ಮಾಡಬೇಕು ಎಂಬುದು ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಯಾವ್ಯಾವ ಪ್ರಕರಣಗಳು ದಾಖಲಾಗಿವೆ?

ಹೆಲ್ಮೆಟ್ ರಹಿತ ಚಾಲನೆ 1400

ಸವಾರಿ ವೇಳೆ ಮೊಬೈಲ್ ಬಳಕೆ 26

ಸಿಗ್ನಲ್ ಜಂಪ್ - 45

ನೋ ಎಂಟ್ರಿ - 404

ಟ್ರಿಪಲ್ ರೈಡಿಂಗ್ - 52

ನೋ ಪಾರ್ಕಿಂಗ್ - 105

ಒನ್​ ವೇ - 319

ಫುಟ್​ಪಾತ್ ಪಾರ್ಕಿಂಗ್ - 34

ನೋಂದಣಿ ಫಲಕ ಇಲ್ಲದೆ ವಾಹನ ಚಾಲನೆ - 25 ಮತ್ತು ಇತರೆ ಸಂಚಾರ ನಿಯಮಗಳ ಉಲ್ಲಂಘನೆ ಸೇರಿ ಒಟ್ಟು 2670 ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು.

ಪರವಾನಗಿ ಅಮಾನತುಗೊಳಿಸಿದ್ದ ಪೊಲೀಸರು

ಆಗಸ್ಟ್​ನಲ್ಲಿ ಮದ್ಯ ಸೇವನೆ, ವೀಲಿಂಗ್‌ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಚಾಲಕರ ವಿರುದ್ಧ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದರು. ಜನವರಿಯಿಂದ ಜುಲೈ ತಿಂಗಳ ತನಕ 6939 ಪ್ರಕರಣ ದಾಖಲಿಸಿದ್ದ ಪೊಲೀಸರು, 1390 ಡಿಎಲ್‌ ಅಮಾನತುಗೊಳಿಸಿ ಬಿಸಿ ಮುಟ್ಟಿಸಿದ್ದರು. 2023ರಲ್ಲಿ ವೀಲಿಂಗ್‌, ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ ಒಟ್ಟು 8,156 ಪ್ರಕರಣ ದಾಖಲಾಗಿತ್ತು. ಅಲ್ಲದೆ, 1663 ಡಿಎಲ್‌ ಅಮಾನತುಗೊಳಿಸಲಾಗಿತ್ತು. ಅಚ್ಚರಿ ಸಂಗತಿ ಏನೆಂದರೆ ಬೆಂಗಳೂರಿನಲ್ಲಿ ಸಿಗ್ನಲ್ ಜಂಪ್ ಮತ್ತು ಒನ್​ವೇ ನಲ್ಲಿ ಬರುವವರ ಸಂಖ್ಯೆಯೇ ಅಧಿಕವಾಗಿದೆ.

Whats_app_banner