logo
ಕನ್ನಡ ಸುದ್ದಿ  /  ಕರ್ನಾಟಕ  /  Koppal News: ಮಗಳಿಗೆ 'ದೇವರ ಶಾಪ'ವೆಂದು ದೇವದಾಸಿಯಾಗಿಸಿದ ಪೋಷಕರ ಬಂಧನ!

Koppal News: ಮಗಳಿಗೆ 'ದೇವರ ಶಾಪ'ವೆಂದು ದೇವದಾಸಿಯಾಗಿಸಿದ ಪೋಷಕರ ಬಂಧನ!

HT Kannada Desk HT Kannada

Dec 31, 2022 06:35 PM IST

google News

ಸಾಂದರ್ಭಿಕ ಚಿತ್ರ

    • ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರಿಗೆ ದೂರು ಬಂದ ಬಳಿಕ, ಪೋಷಕರಾದ ಯಮನೂರಪ್ಪ ಮುಂಡಲಮನಿ, ಹುಲಿಗೆವ್ವ ಮುಂಡಲಮನಿ ಹಾಗೂ ಮೂಕವ್ವ ಹರಿಜನ, ಹನುಮಪ್ಪ ಹರಿಜನ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Getty Images)

ಕೊಪ್ಪಳ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹೆತ್ತ ಪೋಷಕರೇ ತಮ್ಮ 21 ವರ್ಷದ ಮಗಳನ್ನು ದೇವದಾಸಿ ಪದ್ಧತಿಗೆ ತಳ್ಳಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರಿಗೆ ದೂರು ಬಂದ ಬಳಿಕ, ಪೋಷಕರಾದ ಯಮನೂರಪ್ಪ ಮುಂಡಲಮನಿ, ಹುಲಿಗೆವ್ವ ಮುಂಡಲಮನಿ ಹಾಗೂ ಮೂಕವ್ವ ಹರಿಜನ, ಹನುಮಪ್ಪ ಹರಿಜನ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, ಏಳು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಯುವತಿಯ ಅನಾರೋಗ್ಯದ ಕಾರಣ ಹುಲಿಗೆಮ್ಮ ದೇವಸ್ಥಾನದಲ್ಲಿ ದೇವದಾಸಿಯಾಗುವಂತೆ ಪೋಷಕರು ಒತ್ತಾಯಿಸಿದ್ದಾರೆ. ಅನಾರೋಗ್ಯದಿಂದ ಇದ್ದ ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ಪೋಷಕರು, ಅವಳನ್ನು ದೇವದಾಸಿ ಪದ್ಧತಿಗೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಹಂತದಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಗೆ ತೆರಳಿ ಯುವತಿ ದೂರು ನೀಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಕೊಪ್ಪಳ ಎಸ್ಪಿ ಅರುಣಾಂಗಶು ಗಿರಿ, ದೇವದಾಸಿ ಪದ್ಧತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಯುವತಿಯನ್ನು ಹಳೆಯ ಕಾಲದ ಪದ್ಧತಿಗೆ ಬಲವಂತಪಡಿಸಿರುವುದು ತಿಳಿದುಬಂದಿದೆ. ಹೀಗಾಗಿ ಯುವತಿಯ ಪೋಷಕರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪೋಲೀಸರ ಪ್ರಕಾರ, 21 ವರ್ಷದ ಯುವತಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಹೀಗಾಗಿ ಆಕೆಯ ಪೋಷಕರು, ಇದು "ದೇವರ ಶಾಪ" ಎಂಬ ಮೂಢನಂಬಿಕೆಗೆ ಅವರು ಬಂದಿದ್ದಾರೆ. ಇದಕ್ಕೆ ಪರಿಹಾರವಾಗಿ ಆಕೆಯನ್ನು ದೇವರ ಸೇವಕಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಅದರ ಪರಿಣಾಮವಾಗಿ ಅವಳನ್ನು ದೇವದಾಸಿ ಪದ್ಧತಿಗೆ ಒಳಗಾಗುವಂತೆ ಒತ್ತಾಯಿಸಿದ್ದಾರೆ.

ಏಳು ತಿಂಗಳ ಹಿಂದೆ ಹುಲಿಗೆಮ್ಮನ ದೇವಸ್ಥಾನಕ್ಕೆ ಮಗಳನ್ನು ಕರೆದೊಯ್ದು ದೇವದಾಸಿ ಪದ್ಧತಿಗೆ ಒತ್ತಾಯಿಸಿದ ಪೋಷಕರು, ಆಕೆಯು ತನ್ನ ಜೀವನದುದ್ದಕ್ಕೂ ದೇವಾಲಯದ ದೇವರ ಪೂಜೆ ಮತ್ತು ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಡುವಂತೆ ಹೇಳಿದ್ದಾರೆ. ಅದರಂತೆಯೇ ದೇವದಾಸಿ ಪದ್ಧತಿಯನ್ನು ಯುವತಿ ಪಾಲಿಸುತ್ತಾ ಬಂದಿದ್ದಾಳೆ.

ಇದನ್ನು ಗಮನಿಸಿದ ಗ್ರಾಮಸ್ಥರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ದಲಿತ ಸಮುದಾಯದ ಮುಖಂಡರು ಸಭೆಯಲ್ಲೂ ತಮ್ಮ ಗಮನಕ್ಕೆ ತಂದರು.

ದೇವದಾಸಿ ಪುನರ್ವಸತಿ ಯೋಜನೆಯ ಪ್ರಭಾರಿ ಜಿಲ್ಲಾ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ಗ್ರಾಮ ಹಾಗೂ ದೇವದಾಸಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಯುವತಿ ದೇವದಾಸಿ ಪದ್ಧತಿಗೆ ಒಳಗಾಗಿದ್ದಾಳೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿದ್ದಾರೆ. ಸದ್ಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿಗಳು

ರಾಜ್ಯದಲ್ಲಿ ಲವ್‌ ಜಿಹಾದ್‌ ವಿರುದ್ಧ ವಿಹಿಂಪ ಅಭಿಯಾನ; ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ

ರಾಜ್ಯದಾದ್ಯಂತ ಲವ್‌ ಜಿಹಾದ್‌ ವಿರುದ್ಧ ಜಾಗೃತಿ ಅಭಿಯಾನವನ್ನು ವಿಶ್ವ ಹಿಂದು ಪರಿಷದ್‌, ಹಿಂದು ಜಾಗರಣ ವೇದಿಕೆಗಳು ನಡೆಸುತ್ತಿವೆ. ವಿಶ್ವ ಹಿಂದು ಪರಿಷದ್‌ ಈ ತಿಂಗಳ ಆರಂಭದಲ್ಲೇ ದೇಶದಾದ್ಯಂತ ಈ ಅಭಿಯಾನ ಶುರುಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಈ ಅಭಿಯಾನ ಚುರುಕಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ