Campaign against Love jihad: ರಾಜ್ಯದಲ್ಲಿ ಲವ್‌ ಜಿಹಾದ್‌ ವಿರುದ್ಧ ವಿಹಿಂಪ ಅಭಿಯಾನ; ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Campaign Against Love Jihad: ರಾಜ್ಯದಲ್ಲಿ ಲವ್‌ ಜಿಹಾದ್‌ ವಿರುದ್ಧ ವಿಹಿಂಪ ಅಭಿಯಾನ; ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ

Campaign against Love jihad: ರಾಜ್ಯದಲ್ಲಿ ಲವ್‌ ಜಿಹಾದ್‌ ವಿರುದ್ಧ ವಿಹಿಂಪ ಅಭಿಯಾನ; ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ

Campaign against Love jihad: ಲವ್‌ ಜಿಹಾದ್‌ಗೆ ಒಳಗಾಗಿ ಇಸ್ಲಾಂಗೆ ಮತಾಂತರವಾದ ಹಿಂದು ಹುಡುಗಿಯರು ಶವವಾಗಿ, ಆ ಶವ ಗುರುತೇ ಸಿಗದಂತೆ ತುಂಡುತುಂಡುಗಳಾಗಿ ವಿಲೇವಾರಿ ಆಗುತ್ತಿರುವ ಸುದ್ದಿ ಹಿಂದು ಸಮಾಜದಲ್ಲಿ ಕಳವಳ ಮೂಡಿಸಿದೆ. ಇದೇ ಕಾರಣಕ್ಕೆ ಹಿಂದು ಸಂಘಟನೆಗಳು ಜಾಗೃತಿ ಅಭಿಯಾನ ಆರಂಭಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಕೆಲವೆಡೆ ಕಾಲೇಜುಗಳ ಎದುರು ಮತ್ತು ಪ್ರಮುಖ ಸ್ಥಳಗಳಲ್ಲಿ ಹಿಂದು ಜಾಗರಣ ವೇದಿಕೆ ಈ ರೀತಿ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಕೆಲವೆಡೆ ಕಾಲೇಜುಗಳ ಎದುರು ಮತ್ತು ಪ್ರಮುಖ ಸ್ಥಳಗಳಲ್ಲಿ ಹಿಂದು ಜಾಗರಣ ವೇದಿಕೆ ಈ ರೀತಿ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸಿದೆ. (Dhanvi )

ಮಂಗಳೂರು: ರಾಜ್ಯದಾದ್ಯಂತ ಲವ್‌ ಜಿಹಾದ್‌ ವಿರುದ್ಧ ಜಾಗೃತಿ ಅಭಿಯಾನವನ್ನು ವಿಶ್ವ ಹಿಂದು ಪರಿಷದ್‌, ಹಿಂದು ಜಾಗರಣ ವೇದಿಕೆಗಳು ನಡೆಸುತ್ತಿವೆ. ವಿಶ್ವ ಹಿಂದು ಪರಿಷದ್‌ ಈ ತಿಂಗಳ ಆರಂಭದಲ್ಲೇ ದೇಶದಾದ್ಯಂತ ಈ ಅಭಿಯಾನ ಶುರುಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಈ ಅಭಿಯಾನ ಚುರುಕಾಗಿದೆ.

ಹಿಂದು ಹುಡುಗಿಯರು ಮುಸ್ಲಿಂ ಹುಡುಗರ ಪ್ರೇಮಪಾಶಕ್ಕೆ ಬೀಳುತ್ತಿರುವ ಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹಿಂದು ಹುಡುಗಿಯರನ್ನು ಅವರ ಪಾಲಕರ ಗಮನಕ್ಕೆ ಬಾರದಂತೆ ಈ ರೀತಿ ಬಲೆಗೆ ಬೀಳಿಸುವ ಕೆಲಸ ಒಂದೆಡೆ ಸಾಗುತ್ತಿದೆ ಎಂಬ ವಾದ ಒಂದೆಡೆ. ಹಿಂದು ಹುಡುಗಿಯರೇ ವಿವೇಚನೆ ಇಲ್ಲದೆ ಮುಸ್ಲಿಂ ಹುಡುಗರ ಸಹವಾಸ ಮಾಡುತ್ತಿದ್ದಾರೆ ಎಂಬ ವಾದ ಇನ್ನೊಂದೆಡೆ. ಸರಿ ತಪ್ಪುಗಳ ವಿವೇಚನೆ ಸದ್ಯದ ಅವಶ್ಯಕತೆ ಎಂಬುದು ವಾಸ್ತವ.

ಈ ನಡುವೆ, ಲವ್‌ ಜಿಹಾದ್‌ಗೆ ಒಳಗಾಗಿ ಇಸ್ಲಾಂಗೆ ಮತಾಂತರವಾದ ಹಿಂದು ಹುಡುಗಿಯರು ಶವವಾಗಿ, ಆ ಶವ ಗುರುತೇ ಸಿಗದಂತೆ ತುಂಡುತುಂಡುಗಳಾಗಿ ವಿಲೇವಾರಿ ಆಗುತ್ತಿರುವ ಸುದ್ದಿ ಹಿಂದು ಸಮಾಜದಲ್ಲಿ ಕಳವಳ ಮೂಡಿಸಿದೆ. ಇದೇ ಕಾರಣಕ್ಕೆ ವಿಶ್ವ ಹಿಂದು ಪರಿಷದ್‌, ಹಿಂದು ಜಾಗರಣ ವೇದಿಕೆ ಮುಂತಾದ ಹಿಂದು ಸಂಘಟನೆಗಳು ಜಾಗೃತಿ ಅಭಿಯಾನ ಆರಂಭಿಸಿವೆ ಎಂದು ಹಿಂದು ಸಂಘಟನೆ ಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.

ವಿಶ್ವ ಹಿಂದು ಪರಿಷದ್‌ ಕರ್ನಾಟಕದ ಫೇಸ್‌ಬುಕ್‌ ಸ್ಟೇಟಸ್‌

ಲವ್‌ ಜಿಹಾದ್‌ ವಿರುದ್ಧ ಹೋರಾಟದ ಅಭಿಯಾನ ಶುರುಮಾಡಿರುವುದಾಗಿ ವಿಶ್ವ ಹಿಂದು ಪರಿಷದ್‌ ಕರ್ನಾಟಕ ಫೇಸ್‌ಬುಕ್‌ನಲ್ಲಿ ಘೋಷಿಸಿದೆ. ವಿಹಿಂಪ ಫೇಸ್‌ಬುಕ್‌ನಲ್ಲಿ ಕೊಟ್ಟಿರುವ ಜಾಗೃತಿ ಮಾಹಿತಿ ಹೀಗಿದೆ -

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ.
  • ನಮ್ಮ ಮನೆ, ನೆರೆಹೊರೆ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ.
  • ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಹೆಚ್ಚು, ಹಾಗಾಗಿ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ.
  • ಹೆತ್ತವರು / ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಿ.
  • ಲವ್ ಜಿಹಾದ್ ಪ್ರಕರಣಗಳ ವಿವರ / ಫೋಟೋ ಇತ್ಯಾದಿ ವಾಟ್ಸಪ್ಪ್ ಮೂಲಕ ಕಳುಹಿಸಬಹುದು.
  • ಲವ್ ಜಿಹಾದ್ ಗೆ ಸಂಬಂಧಪಟ್ಟ ಯಾವುದೇ ಸಲಹೆ, ದೂರುಗಳನ್ನು Email ಮೂಲಕ ಕೂಡ ಕಳುಹಿಸಬಹುದು.
  • ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುವುದು. ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ.

ಇಷ್ಟು ಅಂಶಗಳನ್ನು ವಿಹಿಂಪ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು, ಲವ್‌ ಜಿಹಾದ್‌ ವಿರುದ್ಧ ಹೋರಾಟದ ಹೆಲ್ಪ್‌ ಲೈನ್‌ ಮತ್ತು ಇಮೇಲ್‌ ಐಡಿಗಳನ್ನು ಶೇರ್‌ ಮಾಡಿದೆ.

ಗಮನಿಸಬಹುದಾದ ವಿಚಾರಗಳು

Dakshin Kannada News: SC,ST ಫಲಾನುಭವಿಗಳಿಂದ ಸೌಲಭ್ಯ ಪಡೆದರೆ ಕ್ರಿಮಿನಲ್‌ ಕೇಸ್; ಮಂಗಳೂರಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಾರ್ನಿಂಗ್

Dakshin Kannada News: ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಒಂದು ಗುಡ್‌ನ್ಯೂಸ್‌. ನೀವು ಯಾವುದಾದರೂ ಸರ್ಕಾರಿ ಯೋಜನೆಯ ಫಲಾನುಭವಿಗಳಾಗಿದ್ದು, ಅಧಿಕಾರಿಗಳು ನಿಮ್ಮಿಂದ ಸಾರಿಗೆ ಸೌಲಭ್ಯ ಅಥವಾ ಇನ್ಯಾವುದೇ ಸೌಲಭ್ಯ ಪಡೆದರೆ ಜಿಲ್ಲಾಧಿಕಾರಿಗೆ ದೂರು ನೀಡಬಹುದು. ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗುತ್ತೆ. ಈ ಸುದ್ದಿಯ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ

Whats_app_banner