logo
ಕನ್ನಡ ಸುದ್ದಿ  /  Karnataka  /  Pramod Muthalik Gets Threat Call: Rashtriya Hindu Sena Srir Ama Sena Chief Pramod Muthalik Gets Life Threat Call 4 Times

Pramod Muthalik gets threat call: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ಗೆ ಜೀವ ಬೆದರಿಕೆ; ಹುಕ್ಕೇರಿ ಠಾಣೇಲಿ ಪ್ರಕರಣ ದಾಖಲು

HT Kannada Desk HT Kannada

Nov 04, 2022 03:22 PM IST

: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Pramod Muthalik gets threat call: ಶ್ರೀರಾಮ ಸೇನೆ (Sri Rama Sene) ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವನ್ನು ಪ್ರಮೋದ್‌ ಮುತಾಲಿಕ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. 

: ಶ್ರೀರಾಮ ಸೇನೆ  ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (SM)

ಬೆಂಗಳೂರು: ಹಿಂದು ಸಂಘಟನೆ ನೇತಾರ ಪ್ರಮೋದ್‌ ಮುತಾಲಿಕ್‌ ಅವರಿಗೆ ಜೀವಬೆದರಿಕೆ ಕರೆ (Pramod Muthalik gets threat call) ಬಂದಿದ್ದು, ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀರಾಮ ಸೇನೆ (Sri Rama Sene) ಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik), ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Mangalore News: ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ; ಮಕ್ಕಳು, ತಾಯಿ ಸುನಂದಾ ಶೆಟ್ಟಿ ಸಾಥ್

ಕರ್ನಾಟಕ ಹವಾಮಾನ ಏಪ್ರಿಲ್ 28: ತಗ್ಗಿದ ಮಳೆ, ಮುಂದುವರಿದ ತಾಪಮಾನ; ಕೋಲಾರ, ಚಿಕ್ಕಬಳ್ಳಾಪುರ ಸೇರಿ 15 ಜಿಲ್ಲೆಗಳಿಗೆ ಶಾಖದ ಅಲೆಯ ಎಚ್ಚರಿಕೆ

Sankey Tank Lake: ಮಳೆ ಕೊರತೆ, ತಾಪಮಾನ ಹೆಚ್ಚಳ; ಬತ್ತುವ ಹಂತಕ್ಕೆ ಬಂದಿದೆಯಾ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ಯಲ್ಲಿದ್ದಾಗ ಗುರುವಾರ ರಾತ್ರಿ ಬಂದಿರುವ 4 ಕರೆ ಬಂದಿದ್ದವು. ಅದರಲ್ಲಿ ಎರಡು ಕರೆಗಳನ್ನು ನಾನೇ ಸ್ವೀಕರಿಸಿದ್ದೆ. ಕೊಚ್ಚಿ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೊಂಡಿದ್ದಾರೆ.

ನಾಲ್ಕು ಫೋನ್‌ ಕರೆಗಳು ಕೂಡ ಬೇರೆ ಬೇರೆ ನಂಬರ್‌ಗಳಿಂದ ಬಂದಿವೆ. ಬೆದರಿಕೆ ಕರೆ ಮಾಡಿದವರು ಮಂಗಳೂರಿನ ಉರ್ದು ಮಿಶ್ರಿತ ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದಾರೆ. ಶುಕ್ರವಾರ ಬೆಳಗ್ಗೆಯೂ ಕೊಲೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕೊಲೆ ಬೆದರಿಕೆಗೆ ಹೆದರುವುದಿಲ್ಲ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಈ ರೀತಿ ಬೆದರಿಕೆ ಕರೆ ಬರುತ್ತಿರುವುದು ಮೊದಲ ಸಲ ಏನಲ್ಲ. ಹಿಂದೆಯೂ ಬಂದಿದ್ದವು. ಈ ರೀತಿ ಬೆದರಿಕೆ ಹಾಕುವುದನ್ನು ಬಿಟ್ಟು ನ್ಯಾಯಯುತವಾಗಿ ಬದುಕು ಸಾಗಿಸಿ. ಸಂಘಟನೆಯ ಕೆಲಸವನ್ನು ದೇಶದ ಹಿತಕ್ಕಾಗಿ ಮಾಡುತ್ತಿದ್ದೇನೆ. ನನಗೆ ಬೆದರಿಕೆ ಹಾಕುವ ಅವಶ್ಯಕತೆ ಇಲ್ಲ. ಆ ರೀತಿ ಬೆದರಿಕೆ ಹಾಕುವುದು ಬೇಕಾಗಿಲ್ಲ ಎಂದು ಮುತಾಲಿಕ್‌ ಹೇಳಿಕೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು