logo
ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Raghavendra M Y HT Kannada

Apr 27, 2024 09:37 PM IST

ರಣ ಬಿಸಿಲಿನ ಪರಿಣಾಮ ಉತ್ತರ ಕನ್ನಡದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ

    • ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಪೈಕಿ ರಷ್ಯಾ ದೇಶದವರು ಜಾಸ್ತಿ. ಅಲ್ಲಿನ ಯುದ್ಧ ಪ್ರವಾಸಕ್ಕೂ ತಟ್ಟಿದೆ. ಗೋಕರ್ಣ ಸೇರಿ ಈ ಭಾಗದ ಬೀಚ್‌ಗಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ರಣ ಬಿಸಿಲು ಕೂಡ ಕಾರಣವಾಗಿದೆ. (ವರದಿ: ಹರೀಶ್ ಮಾಂಬಾಡಿ)
ರಣ ಬಿಸಿಲಿನ ಪರಿಣಾಮ ಉತ್ತರ ಕನ್ನಡದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ
ರಣ ಬಿಸಿಲಿನ ಪರಿಣಾಮ ಉತ್ತರ ಕನ್ನಡದ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ

ಕಾರವಾರ (ಉತ್ತರ ಕನ್ನಡ): ಗೋವಾ ಬೀಚ್ (Goa Beach) ಬಳಿಕ ಗೋಕರ್ಣದ ಓಂ ಬೀಚ್ (Gokarna Om Beach) ಸಹಿತ ಉತ್ತರ ಕನ್ನಡದ (Uttara Kannada Beaches) ಕಡಲ ಕಿನಾರೆಯಲ್ಲಿ ವಿಹರಿಸುತ್ತಿದ್ದ ವಿದೇಶಿ ಜೋಡಿಗಳು, ವಿದೇಶಿ ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗಿದೆ. ಉರಿಸೆಖೆ, ಉಷ್ಣಗಾಳಿಯ ಪರಿಣಾಮ ಹಾಗೂ ನಾನಾ ಕಾರಣಗಳಿಂದ ಗೋವಾದಲ್ಲೂ ಪ್ರವಾಸಿಗರು ಕಡಿಮೆಯಾಗಿರುವುದರ ಪರಿಣಾಮ ಉತ್ತರ ಕನ್ನಡಕ್ಕೂ ತಟ್ಟಿದೆ. ಹೀಗಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಈ ವರ್ಷವಂತೂ ಗಣನೀಯವಾಗಿ ಇಳಿಮುಖವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಕರ್ನಾಟಕ ಹವಾಮಾನ ಮೇ 10; ಮೈಸೂರು, ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ತುಮಕೂರು ಸೇರಿ 6 ಜಿಲ್ಲೆಗಳಲ್ಲಿ ಒಣಹವೆ

ಬೆಂಗಳೂರು ಗುಡ್‌ಗಿಂಗ್ ಅಂಡ್ ಮಿಂಚಿಂಗ್ ಹೆವಿಲಿ: ಮಳೆ ಕಂಡು ಖುಷಿಯಾದ ನೆಟ್ಟಿಗರು ಹಂಚಿಕೊಂಡ ಖುಷಿ ವಿಡಿಯೊಗಳು ಇಲ್ಲಿವೆ

ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಪೈಕಿ ರಷ್ಯಾ ದೇಶದವರು ಜಾಸ್ತಿ. ಇದೀಗ ಯುದ್ಧಗಳ ಪರಿಣಾಮ ಪ್ರವಾಸಕ್ಕೂ ತಟ್ಟಿದೆ. ಗೋಕರ್ಣಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಪೈಕಿ ಯುದ್ಧಬಾಧಿತ ದೇಶಗಳವರೂ ಇರುವ ಕಾರಣ ಕಡಿಮೆಯಾಗಿದೆ. ಸೆಖೆ, ಉಷ್ಣ ವಾತಾವರಣ ಇದಕ್ಕೆ ಪೂರಕ ಕೊಡಗೆ ನೀಡಿದೆ. ಭಾರತದ ಚುನಾವಣೆ ಎಂದರೆ ವಿದೇಶಿಯರಿಗೆ ಆತಂಕ ಇದ್ದೇ ಇದೆ. ಬಿಸಿಗಾಳಿಯ ಜೊತೆಗೆ ಚುನಾವಣೆ ಇರುವ ಕಾರಣ ಇಲ್ಲಿ ಹೇಗಾಗಬಹುದು ಎಂಬ ಊಹೆಯಲ್ಲಿ ಪ್ರವಾಸಿಗರ ಆಗಮನ ಕಡಿಮೆಯಾಗಲು ಒಂದು ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

ದೇಶಿ ಪ್ರವಾಸಿಗರ ಸಂಖ್ಯೆಯೂ ಇಳಿಮುಖ

ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಗೋಕರ್ಣ ಬೀಚ್‌ಗೆ ಆಗಮಿಸುವವರು ಹಾಗೆಯೇ ಭಾರತದ ಇತರ ಭಾಗಗಳಿಂದ ಆಗಮಿಸುವವರೂ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದಾರೆ. ಚುನಾವಣೆ, ಬಿಸಿಗಾಳಿಯ ಪ್ರಭಾವದಿಂದ ಸ್ಥಳೀಯ ಪ್ರವಾಸಿಗರೂ ಕಾಣಿಸುತ್ತಿಲ್ಲ. ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಇರುವ ಕಾರಣ ಸಹಜವಾಗಿಯೇ ಕಡಿಮೆ ಇದ್ದರೂ ಈ ಬಾರಿ ಅದಕ್ಕಿಂತಲೂ ಜಾಸ್ತಿ ಕೊರತೆ ಕಾಣಸಿಗುತ್ತಿದೆ. ಗೋಕರ್ಣಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರನ್ನು ನೋಡುವುದಕ್ಕಾಗಿಯೇ ಊರ ಪ್ರವಾಸಿಗರು ಆಗಮಿಸಿದುಂಟು. ಈಗ ಅವರಿಗೂ ನಿರಾಶೆ ಕಾದಿದೆ. ವಾರಾಂತ್ಯದಲ್ಲಿ ಮಾತ್ರ ಆಗಮಿಸುವ ದೇಶಿಯ ಪ್ರವಾಸಿಗರು, ತಿರುಗಾಟ ನಡೆಸಿ ಮರಳುತ್ತಾರೆ. ಉಳಿದ ದಿನಗಳಲ್ಲಿ ಗೋಕರ್ಣದ ಓಂ ಬೀಚ್ ಖಾಲಿ ಖಾಲಿ ಇರುತ್ತದೆ.

ಸ್ಥಗಿತಗೊಂಡ ಸ್ಕೂಬಾ ಡೈವಿಂಗ್

ಗಾಯದ ಮೇಲೆ ಬರೆ ಎಳೆದಂತೆ ಮುರುಡೇಶ್ವರದಲ್ಲಿ ಸ್ಥಾಪಿಸಲಾಗಿದ್ದ ಸ್ಕೂಬಾ ಡೈವಿಂಗ್ ಇದೀಗ ಸಕಾಲಕ್ಕೆ ಟೆಂಡರ್ ಪ್ರಕ್ರಿಯೆಗಳು ಆಗದೇ ಇರುವುದರಿಂದ ಬೇಸಗೆಯಲ್ಲಿ ಜಲಸಾಹಸ ನಡುವವರು ಆಗಮಿಸುತ್ತಾರೆ. ಆದರೆ ಜಲಸಾಹಸಿಗರಿಗೆ ಸ್ಕೂಬಾ ಡೈವಿಂಗ್ ಇಲ್ಲದೇ ಇದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಸಂಬಂಧಪಟ್ಟವವರುು ಎಚ್ಚೆತ್ತುಕೊಂಡು ಸ್ಥಗಿತಗೊಂಡಿರುವ ಸ್ಕೂಬಾ ಡೈವಿಂಗ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕಿದೆ (ವರದಿ: ಹರೀಶ್ ಮಾಂಬಾಡಿ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು