ನವೆಂಬರ್ 19ರಿಂದ ಜನವರಿ 15ರ ತನಕ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು; ಸಮಯ, ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ
Nov 17, 2024 10:19 AM IST
ನವೆಂಬರ್ 19ರಿಂದ ಜನವರಿ 15ರ ತನಕ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು; ಸಮಯ, ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ
- Special Trains for Sabarimala: ಶಬರಿಮಲೆ ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕದ ಹುಬ್ಬಳ್ಳಿಯಿಂದ ಕೇರಳದ ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.
ಬೆಂಗಳೂರು: ಶಬರಿಮಲೆ ಭಕ್ತರಿಗೆ (Sabarimala Pilgrimage) ಮತ್ತು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಶುಭ ಸುದ್ದಿ ನೀಡಿದೆ. ಭಕ್ತರ ಮತ್ತು ಜನರ ಅನುಕೂಲಕ್ಕೆ ಮತ್ತು ಶಬರಿಮಲೆ ತೀರ್ಥೋದ್ಭವದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸಲು ನೈಋತ್ಯ ರೈಲ್ವೆಯು ಕೇರಳದ ಕೊಟ್ಟಾಯಂ ಮತ್ತು ಕರ್ನಾಟಕದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ (Hubballi-Kottayam special train) ನಡುವೆ ವಿಶೇಷ ರೈಲುಗಳಿಗೆ ಸೂಚನೆ ನೀಡಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ. ಹುಬ್ಬಳ್ಳಿ-ಕೊಟ್ಟಾಯಂ ನಿಲ್ದಾಣಗಳ ನಡುವೆ ಒಟ್ಟು 9 ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ವಾರಕ್ಕೊಮ್ಮೆ ಹೆಚ್ಚುವರಿ ರೈಲು ಸಂಚರಿಸಲಿದೆ.
1. ಹುಬ್ಬಳ್ಳಿಯಿಂದ ನಿರ್ಗಮನ ಸಮಯ
ರೈಲು ಸಂಖ್ಯೆ 07371 ಹುಬ್ಬಳ್ಳಿ - ಕೊಟ್ಟಾಯಂ ಸಾಪ್ತಾಹಿಕ ವಿಶೇಷ ರೈಲು ನವೆಂಬರ್ 19 ರಿಂದ ಜನವರಿ 14ರ ತನಕ ಸಂಚಾರ ಮಾಡಲಿದೆ. ನವೆಂಬರ 19, 26, ಡಿಸೆಂಬರ್ 3, 10, 17, 24, 31, ಜನವರಿ 7 ಮತ್ತು 14ರಂದು ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿಯಿಂದ ಬಿಡಲಿದೆ. ಮರುದಿನ ಮಧ್ಯಾಹ್ನ 12 ಗಂಟೆಗೆ ಕೊಟ್ಟಾಯಂ ತಲುಪಲಿದೆ. ಒಟ್ಟು 9 ಟ್ರಿಪ್ಗಳು.
2. ಕೇರಳದಿಂದ ನಿರ್ಗಮನ ಸಮಯ
ರೈಲು ಸಂಖ್ಯೆ 07372 ಕೊಟ್ಟಾಯಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ರೈಲು ನವೆಂಬರ್ 20, 27, ಡಿಸೆಂಬರ್ 4, 11, 18, 25, ಜನವರಿ 1, 8 ಮತ್ತು 15 (ಬುಧವಾರ)ರಂದು ಮಧ್ಯಾಹ್ನ 3 ಗಂಟೆಗೆ ಕೊಟ್ಟಾಯಂನಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 12:50ಕ್ಕೆ ಹುಬ್ಬಳ್ಳಿ ಜಂಕ್ಷನ್‌ಗೆ ತಲುಪಲಿದೆ. ಈ ರೈಲಿಗೆ ತಮಿಳುನಾಡಿನ ಸೇಲಂ, ಈರೋಡ್, ತಿರುಪುರ್ ಮತ್ತು ಪೊದನೂರಿನಲ್ಲಿ ನಿಲುಗಡೆ ಇರುತ್ತದೆ. ಇದು ಕೂಡ 9 ಟ್ರಿಪ್ಗಳು ಇರಲಿದ್ದು, ನವೆಂಬರ್ 20ರಿಂದ ಜನವರಿ 15ರ ತನಕ ಸಂಚಾರ ಮಾಡಲಿದೆ.
3. ಬುಕಿಂಗ್ ಪ್ರಾರಂಭ
ಕೋಚ್ ಸಂಯೋಜನೆಯು 2 ಎಸಿ ಟು-ಟೈರ್ ಕೋಚ್‌ಗಳು, 2 ಎಸಿ ತ್ರೀ-ಟೈರ್ ಕೋಚ್‌ಗಳು, 6 ಸ್ಲೀಪರ್ ಕ್ಲಾಸ್ ಕೋಚ್‌ಗಳು, 6 ಸಾಮಾನ್ಯ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಕೋಚ್‌ಗಳು (ಅಂಗವಿಕಲರಿಗೆ ಸ್ನೇಹಿ) ಇರಲಿವೆ. ವಿಶೇಷ ರೈಲುಗಳಿಗೆ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.
ನಿಲ್ದಾಣಗಳು ಎಲ್ಲೆಲ್ಲಿ?
ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಎಟ್ಟುಮನೂರ್, ಕೊಟ್ಟಾಯಂ.