ಮದುವೆಯಾಗಲು ಹೋಗ್ತಾ ಇದ್ದೇನೆ, ಸರೈಘಾಟ್ ಎಕ್ಸ್‌ಪ್ರೆಸ್ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರ; ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮದುವೆಯಾಗಲು ಹೋಗ್ತಾ ಇದ್ದೇನೆ, ಸರೈಘಾಟ್ ಎಕ್ಸ್‌ಪ್ರೆಸ್ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರ; ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ

ಮದುವೆಯಾಗಲು ಹೋಗ್ತಾ ಇದ್ದೇನೆ, ಸರೈಘಾಟ್ ಎಕ್ಸ್‌ಪ್ರೆಸ್ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರ; ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ

ಬದುಕಿನಲ್ಲಿ ಕೂಡ ಸಿನಿಮೀಯ ಘಟನೆಗಳು ಕೆಲವೊಮ್ಮೆ ನಡೆದುಬಿಡುತ್ತವೆ. ಅಂಥದ್ದೇ ಒಂದು ಘಟನೆ ಇದು. ಮದುವೆಯಾಗಲು ಹೋಗ್ತಾ ಇದ್ದೇನೆ, ಸರೈಘಾಟ್ ಎಕ್ಸ್‌ಪ್ರೆಸ್ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರ. ಅದಕ್ಕೆ ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ ನೋಡಿ.

ಮದುವೆಯಾಗಲು ಹೋಗ್ತಾ ಇದ್ದೇನೆ, ಸರಾಯ್‌ಘಾಟ್‌ ಎಕ್ಸ್‌ಪ್ರೆಸ್‌ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರನ ಬೇಡಿಕೆಗೆ ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ ನೋಡಿ. ವರ ಚಂದ್ರಶೇಖರ್ ವಾಘಾ (ಬಲ ಚಿತ್ರ).
ಮದುವೆಯಾಗಲು ಹೋಗ್ತಾ ಇದ್ದೇನೆ, ಸರಾಯ್‌ಘಾಟ್‌ ಎಕ್ಸ್‌ಪ್ರೆಸ್‌ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದ ವರನ ಬೇಡಿಕೆಗೆ ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ ನೋಡಿ. ವರ ಚಂದ್ರಶೇಖರ್ ವಾಘಾ (ಬಲ ಚಿತ್ರ).

ಕೋಲ್ಕತ: ರೈಲು ಪ್ರಯಾಣ ಒಂದು ರೀತಿಯ ಖುಷಿ ಕೊಡುವಂಥದ್ದು. ರೈಲು ಪ್ರಯಾಣ ಅಂದರೆ ಅದು ಹೊರಡುವ ಸಮಯ ಮತ್ತು ತಲುಪುವ ಸಮಯ ನಿಗದಿತವಾಗಿದ್ದರೂ, ಅದರ ಪಾಲನೆ ಮಾತ್ರ ಈ ಹಿಂದೆ ಕಡಿಮೆ ಇತ್ತು. ಆದರೆ ಈಗ ಇದರಲ್ಲಿ ಸುಧಾರಣೆ ಕಂಡುಬಂದರೂ, ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗಿ ರೈಲು ಪ್ರಯಾಣ ವಿಳಂಬವಾಗುತ್ತಿರುವುದು ಕೂಡ ಮುಂದುವರಿದಿದೆ. ಆದಾಗ್ಯೂ, ಭಾರತೀಯ ರೈಲ್ವೆ ಹಿಂದಿನಂತೆ ಈಗಿಲ್ಲ. ಪ್ರಯಾಣಿಕರ ಸೇವೆಯಲ್ಲಿ ಹೊಸತನ ತುಂಬಿಕೊಂಡಿದ್ದು, ಕ್ಷಿಪ್ರವಾಗಿ ಸ್ಪಂದಿಸುತ್ತಿದೆ ಕೂಡ. ನಿತ್ಯವೂ ಪ್ರಯಾಣಿಕರ ವಿವಿಧ ರೀತಿಯ ಬೇಡಿಕೆಗಳಿಗೆ ಭಾರತೀಯ ರೈಲ್ವೆ ಸ್ಪಂದಿಸುತ್ತಿರುವುದು ಕೂಡ ಗಮನಸೆಳೆದಿದೆ. ಅಂತಹ ಒಂದು ಘಟನೆ ಇದಾಗಿದ್ದರೂ, ಸ್ವಲ್ಪ ವಿಶೇಷವಾದುದು. "ಮದುವೆಯಾಗಲು ಹೋಗ್ತಾ ಇದ್ದೇನೆ, ಸರೈಘಾಟ್ ಎಕ್ಸ್‌ಪ್ರೆಸ್ ತಪ್ಪಿಹೋಗ್ತಿದೆ, ಸಹಾಯ ಮಾಡಿ ಎಂದು ವರನೊಬ್ಬ ಕೇಳಿಕೊಂಡ ಕೂಡಲೇ ಭಾರತೀಯ ರೈಲ್ವೆ ಸ್ಪಂದಿಸಿದ್ದು ಹೀಗೆ.

ಮದುವೆಯಾಗಲು ಹೊರಟ ವರ ಮತ್ತು ಕುಟುಂಬ ಸದಸ್ಯರಿಗೆ ಎದುರಾಯಿತು ಸಂಕಷ್ಟ

ಇತ್ತೀಚೆಗೆ, ಚಂದ್ರಶೇಖರ್ ವಾಘ್ ಎಂಬುವವರು ತನ್ನ ಮದುವೆಗಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿ ಹೋಗಿ ಹೌರಾದಿಂದ ಸರೈಘಾಟ್ ಎಕ್ಸ್‌ಪ್ರೆಸ್ ಏರಿ ಗುವಾಹಟಿ ತಲುಪುವುದಕ್ಕೆ ಯೋಜನೆ ರೂಪಿಸಿಕೊಂಡಿದ್ದರು. ಆದರೆ, ಗೀತಾಂಜಲಿ ಎಕ್ಸ್‌ಪ್ರೆಸ್ ವಿಳಂಬವಾದ ಕಾರಣ ಸರೈಘಾಟ್ ಎಕ್ಸ್‌ಪ್ರೆಸ್ ರೈಲು ತಪ್ಪಿ ಹೋಗುವ ಆತಂಕ ಎದುರಾಯಿತು. ಅದು ತಪ್ಪಿ ಹೋದರೆ ತನ್ನ ಮದುವೆ ನಡೆಯೋದಿಲ್ಲ ಎಂಬುದು ಖಚಿತವಾದ ಕೂಡಲೇ ಎಕ್ಸ್‌ ಖಾತೆ ಮೂಲಕ ಭಾರತೀಯ ರೈಲ್ವೆ ಮತ್ತು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಸಹಾಯ ಕೋರಿದರು.

“ತುರ್ತು ಸಹಾಯ ಬೇಕು. ನಮ್ಮದು 35 ಜನರ ಗುಂಪು. ನನ್ನ ಮದುವೆಗಾಗಿ ಗೀತಾಂಜಲಿ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದೇವೆ. ಆ ರೈಲು 3.5 ಗಂಟೆ ತಡವಾಗಿದೆ, ಸರೈಘಾಟ್ ಎಕ್ಸ್‌ಪ್ರೆಸ್ ಅನ್ನು ಸಂಜೆ 4:00 ಕ್ಕೆ ಹಿಡಿಯಬೇಕು ಅದು ಕಷ್ಟಕರವೆಂದು ತೋರುತ್ತದೆ. ದಯವಿಟ್ಟು ಸಹಾಯ ಮಾಡಿ.” ಎಂದು ಚಂದ್ರಶೇಖರ್ ವಾಘ್‌ ತಮ್ಮ ಟಿಕೆಟ್ ಫೋಟೋ ಸಹಿತ ನವೆಂಬರ್ 15ರ ಮಧ್ಯಾಹ್ನ 12 .15ಕ್ಕೆ ಟ್ವೀಟ್ ಮಾಡಿದ್ದರು. ಅದಾಗಿ ಸಂಜೆ 5.30ಕ್ಕೆ ಅದೇ ಟ್ವೀಟ್‌ ಮುಂದುವರಿಸಿದ ಚಂದ್ರಶೇಖರ್ ವಾಘ್‌, “ಮೇಲಿನ ಟ್ವೀಟ್‌ಗಳಿಗೆ ಸಂಬಂಧಿಸಿ, ನಾವೆಲ್ಲರೂ ಸರೈಘಾಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವುದು ಸಾಧ್ಯವಾಗಿದೆ ಎಂದು ತಿಳಿಸಲು ಬಯಸುತ್ತೇನೆ. ಈ ನೆರವು ಒದಗಿಸುವಲ್ಲಿ ಭಾಗಿಯಾಗಿರುವ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಹೇಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ರೈಲ್ವೆಗೆ ಧನ್ಯವಾದ ಹೇಳಿದ ಚಂದ್ರಶೇಖರ್ ವಾಘ್‌'

ಶೀಘ್ರವಾಗಿ ಸ್ಪಂದಿಸಿದ ಭಾರತೀಯ ರೈಲ್ವೆಗೆ ಚಂದ್ರಶೇಖರ್ ವಾಘ್‌ ಕೃತಜ್ಞತೆ ಸಲ್ಲಿಸಿ ವಿಡಿಯೋವನ್ನೂ ಕೂಡ ಶೇರ್ ಮಾಡಿದ್ದರು. ಇದನ್ನು ಭಾರತೀಯ ರೈಲ್ವೆಯ ಪೂರ್ವ ವಲಯದ ಯೂಟ್ಯೂಬ್‌ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ಎಕ್ಸ್‌ ಖಾತೆಯಲ್ಲೂ ಶೇರ್ ಮಾಡಿಕೊಳ್ಳಲಾಗಿದೆ.

“ಚಂದ್ರಶೇಖರ್ ವಾಘ್ ಮತ್ತು ಅವರ 35 ಜನ ಗುಂಪು ಚಂದ್ರ ಶೇಖರ್ ವಾಘ್‌ ಅವರ ಮದುವೆಗಾಗಿ ಹೌರಾದಿಂದ ಸರೈಘಾಟ್ ಎಕ್ಸ್‌ಪ್ರೆಸ್ ಅನ್ನು ಹತ್ತಲು ಸಹಾಯ ಮಾಡಿದ್ದಕ್ಕಾಗಿ ರೈಲ್ವೆಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಹೌರಾ ನಿಲ್ದಾಣದಿಂದ 12345 ಯುಪಿ ಹತ್ತಲು ಭಾರತೀಯ ರೈಲ್ವೆ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ” ಎಂದು ಹೇಳಿಕೊಂಡಿದೆ.

ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೀಗೆ

ಭಾರತದ ರೈಲ್ವೆ ಸಚಿವರ ಕಡೆಯಿಂದ ಕೂಡಲೇ ಸ್ಪಂದನೆ ಸಿಕ್ಕಿದ್ದು, ಅವರು ಪೂರ್ವ ರೈಲ್ವೇಯ ಜನರಲ್ ಮ್ಯಾನೇಜರ್ ನಿರ್ದೇಶನದ ಅಡಿಯಲ್ಲಿ ಮತ್ತು ಹೌರಾದ ವಿಭಾಗೀಯ ರೈಲ್ವೇ ಮ್ಯಾನೇಜರ್ ಮತ್ತು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ ಸಂಘಟಿತ ಪ್ರಯತ್ನಕ್ಕೆ ಸೂಚನೆ ನೀಡಿದ್ದರು. ಇದರಂತೆ, ಗೀತಾಂಜಲಿ ಎಕ್ಸ್‌ಪ್ರೆಸ್‌ನ ಪೈಲಟ್‌ಗೆ ಪರಿಸ್ಥಿತಿಯ ಮಾಹಿತಿ ನೀಡಿದ್ದು, ಬೇಗ ಹೌರಾ ತಲುಪಲು ಸೂಚನೆ ನೀಡಲಾಗಿತ್ತು. ಇನ್ನೊಂದೆಡೆ, ಸರೈಘಾಟ್ ಎಕ್ಸ್‌ಪ್ರೆಸ್ ನಿರ್ಗಮನವನ್ನು ಸ್ವಲ್ಪ ಕಾಲ ತಡೆಹಿಡಿಯಲಾಗಿತ್ತು. ಗೀತಾಂಜಲಿ ಎಕ್ಸ್‌ಪ್ರೆಸ್ ಬಂದು ಚಂದ್ರಶೇಖರ್ ವಾಘ್ ಕುಟುಂಬ ಸರೈಘಾಟ್ ಎಕ್ಸ್‌ಪ್ರೆಸ್ ಏರಿದ ಬಳಿಕ ಅದು ಮುಂದೆ ಚಲಿಸಿತು. ಭಾರತೀಯ ರೈಲ್ವೆ ಪರಿಸ್ಥಿತಿಯನ್ನು ನಿಭಾಯಿಸಿದ ಕ್ರಮ ಪ್ರಶಂಸೆಗೆ ಒಳಗಾಯಿತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.