Karnataka News Live December 21, 2024 : ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದ ಐಐಎಸ್‌ಸಿ ಅಧ್ಯಯನ, ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ
Dec 21, 2024 11:27 AM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Bengaluru Tunnel Road: ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ ಈಗ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಸದ್ಯ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಖಾಸಗಿ ವಾಹನ ಬಳಕೆ ಕಡಿಮೆಯಾದರೆ ಸಮಸ್ಯೆ ಬಹುಪಾಲು ಕಡಿಮೆಯಾದೀತು ಎಂಬ ಅಭಿಯಾನ ಶುರುವಾಗಿದೆ. ಇಲ್ಲಿದೆ ಪ್ರಸಕ್ತ ವಿದ್ಯಮಾನದ ವಿವರ.
- ದೆಹಲಿ CEO ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಕನ್ನಡ ಮಾತನಾಡಲು ಬರೋದಿಲ್ವಾ? ಹಾಗಾದರೆ ದೆಹಲಿಗೆ ಬನ್ನಿ ಎಂಬುದಾಗಿ ನೇಮಕಾತಿ ಪೋಸ್ಟ್ ಹಂಚಿಕೊಂಡಿದ್ದಾರೆ.
- ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿದ್ದು, ಡಿಸೆಂಬರ್ 21ರ ಶನಿವಾರ ಮೋಡ ಕವಿದ ವಾತಾವರಣ ಇದೆ. ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕದ ಹವಾಮಾನ ವರದಿ ಹೀಗಿದೆ.
ಸಿಟಿ ರವಿ ಬಂಧನ ವಿಚಾರ ಚರ್ಚೆಗೆ ಒಳಗಾಗಿದೆ. ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ನೆಲೆಯಲ್ಲಿ ಚರ್ಚೆ ನಡೆಯುತ್ತಿರುವ ಕಾರಣ, ಮಾಜಿ ಸ್ಪೀಕರ್‌ಗಳು ಹಳೆ ಪ್ರಕರಣಗಳನ್ನು ನೆನಪಿಸಿಕೊಟ್ಟಿದ್ದಾರೆ. ಆ ವಿವರ ಇಲ್ಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Praveen Nettaru murder case: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮತ್ತೋರ್ವ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)