logo
ಕನ್ನಡ ಸುದ್ದಿ  /  ಕರ್ನಾಟಕ  /  Hsrp Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಇಂದೇ ಕೊನೆ ದಿನ; 3 ದಿನ ಉಂಟು ರಿಲಾಕ್ಸ್‌, ಏನು ಕಾರಣ

HSRP Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಇಂದೇ ಕೊನೆ ದಿನ; 3 ದಿನ ಉಂಟು ರಿಲಾಕ್ಸ್‌, ಏನು ಕಾರಣ

Umesha Bhatta P H HT Kannada

Sep 15, 2024 08:12 AM IST

google News

ವಾಹನಗಳಿಗೆ ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಹಾಗೂ ನೋಂದಣಿಗೆ ಭಾನುವಾರ ಅಂತಿಮ ದಿನ.

  • HSRP Updates ನಿಮ್ಮ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಇಲಾಖೆ ನೀಡಿರುವ ಮೂರು ದಿನಗಳ ಗಡುವು ಭಾನುವಾರಕ್ಕೆ ಮುಕ್ತಾಯವಾಗಲಿದೆ. 

ವಾಹನಗಳಿಗೆ ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಹಾಗೂ ನೋಂದಣಿಗೆ ಭಾನುವಾರ ಅಂತಿಮ ದಿನ.
ವಾಹನಗಳಿಗೆ ಎಚ್‌ಎಸ್‌ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಹಾಗೂ ನೋಂದಣಿಗೆ ಭಾನುವಾರ ಅಂತಿಮ ದಿನ.

ಬೆಂಗಳೂರು: ನಿಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್( HSRP) ಅಳವಡಿಸಿಕೊಂಡಿಲ್ಲವೇ, ಕರ್ನಾಟಕ ಸಾರಿಗೆ ಇಲಾಖೆ ನೀಡಿದ ಗಡುವು ಸೆಪ್ಟೆಂಬರ್ 15ರ ಭಾನುವಾರ ಅಂತ್ಯಗೊಳ್ಳಲಿದೆ. ಇಂದು ನೋಂದಣಿ ಮಾಡಿಸಿಕೊಂಡವರಿಗೆ ಮುಂದೆ ದಂಡ ಬೀಳುವುದಿಲ್ಲ. ಇನ್ನು ಮುಂದೆ ವಿಸ್ತರಣೆ ಇಲ್ಲ. ಸೋಮವಾರದಿಂದ ದಂಡ ವಿಧಿಸಿವುದಾಗಿ ಈಗಾಗಲೇ ಕರ್ನಾಟಕ ಸಾರಿಗೆ ಇಲಾಖೆ ಈಗಾಗಲೇ ಘೋಷಣೆ ಕೂಡ ಮಾಡಿದೆ. ಕರ್ನಾಟಕ ಪೊಲೀಸ್‌ ಇಲಾಖೆ ಸಂಚಾರ ವಿಭಾಗ, ಸಾರಿಗೆ ಇಲಾಖೆಯವರೂ ಹಳೆ ನಂಬರ್‌ ಪ್ಲೇಟ್‌ ಇದ್ದ ವಾಹನದವರಿಗೆ ದಂಡವನ್ನು ವಿಧಿಸಲು ಆರಂಭಿಸಲಿದ್ದಾರೆ. ಆದರೆ ಮೂರು ದಿನದವರೆಗೆ ಕೊಂಚ ರಿಲಾಕ್ಸ್‌ ಇರಲಿದೆ. ಅಂದರೆ ನಂಬರ್‌ ಪ್ಲೇಟ್‌ ಅಳವಡಿಕೆ ಕುರಿತ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿದ್ದು, ಅಲ್ಲಿಯವರೆಗೂ ಬಲವಂತದ ದಂಡ ಇರುವುದಿಲ್ಲ ಎನ್ನುವುದು ಸಾರಿಗೆ ಇಲಾಖೆ ನೀಡಿರುವ ಸ್ಪಷ್ಟನೆ.

ಈಗಾಗಲೇ ಕರ್ನಾಟದಲ್ಲಿ ಎಲ್ಲಾ ರೀತಿಯ ವಾಹನಗಳಿಗೆ ನಂಬರ್‌ಪ್ಲೇಟ್‌ ಅಳವಡಿಸಿಕೊಳ್ಳಲು ಮೂರು ಬಾರಿ ಗಡುವು ವಿಸ್ತರಣೇ ಮಾಡಲಾಗಿದೆ. ಈ ಬಾರಿಯೂ ಭಾನುವಾರದವರೆಗೂ ನೋಂದಣಿಗೆ ಅವಕಾಶವಿದೆ.

ನಿಯಮದ ಪ್ರಕಾರ, ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ಸೆಪ್ಟೆಂಬರ್ 16ರಿಂದ 500 ರೂ. ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಾರಿಗೆ ನೀಡುವುದಾಗಿ ಸಾರಿಗೆ ಇಲಾಖೆ ಈಗಾಗಲೇ ಹೇಳಿಕೆ ನೀಡಿತ್ತು.

ಆದರೆ ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್‌ ಹೇಳಿದ್ದಾರೆ.

ಬುಧವಾರದ ಕೋರ್ಟ್‌ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನವನ್ನು ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಪ್ರಕಟಿಸಲಿದೆ. ಇದರಿಂದ ಮೂರು ದಿನ ದಂಡ ಪ್ರಯೋಗದಿಂದ ವಿನಾಯಿತಿ ಸಿಗಲಿದೆ.

ಸಾರಿಗೆ ಇಲಾಖೆಯು 2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್​​ನಲ್ಲಿ ಹೊರಡಿಸಿತ್ತು. ಆರಂಭದಲ್ಲಿ 2023 ರ ನವೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿತ್ತು.

ನಿಧಾನಗತಿಯ ಅಳವಡಿಕೆಯ ಕಾರಣ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.ಸಾರಿಗೆ ಇಲಾಖೆ ಅಂಕಿಅಂಶ ಪ್ರಕಾರ, ರಾಜ್ಯದಲ್ಲಿರುವ ಹಳೆಯ ಎರಡು ಕೋಟಿ ವಾಹನಗಳ ಪೈಕಿ ಶೇ 26ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ವಾಹನ ಮಾಲೀಕರ ನೀರಸ ಪ್ರತಿಕ್ರಿಯೆಯಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ಈ ಹಿಂದೆ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ.

ಗಡುವು ಮುಕ್ತಾಯದ ನಂತರವೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಮಾಲೀಕರು 500 ರೂ. ದಂಡ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 16 ರಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕರ್ನಾಟಕದಾದ್ಯಂತ, ವಿಶೇಷವಾಗಿ ಹೆಚ್ಚಿನ ಪ್ರಮಾಣದ ವಾಹನಗಳಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಆದಾಗ್ಯೂ, ಸೆಪ್ಟೆಂಬರ್ 18ರ ವರೆಗೆ ವಾಹನ ಮಾಲೀಕರು ತುಸು ನಿರಾಳವಾಗಿರಬಹುದಾಗಿದೆ ಎನ್ನುವುದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ ದಕ್ಷಿಣ) ಮಲ್ಲಿಕಾರ್ಜುನ ಸಿ ವಿವರಣೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ