Honda X Blade: ಹೋಂಡಾ ಬೈಕ್ ಪ್ರಿಯರಿಗೆ ಬಿಗ್ ಶಾಕ್: 160 ಸಿಸಿಯ ಈ ಬೈಕ್ ಮಾರಾಟ ದಿಢೀರ್ ಸ್ಥಗಿತ
ಕನ್ನಡ ಸುದ್ದಿ  /  ಜೀವನಶೈಲಿ  /  Honda X Blade: ಹೋಂಡಾ ಬೈಕ್ ಪ್ರಿಯರಿಗೆ ಬಿಗ್ ಶಾಕ್: 160 ಸಿಸಿಯ ಈ ಬೈಕ್ ಮಾರಾಟ ದಿಢೀರ್ ಸ್ಥಗಿತ

Honda X Blade: ಹೋಂಡಾ ಬೈಕ್ ಪ್ರಿಯರಿಗೆ ಬಿಗ್ ಶಾಕ್: 160 ಸಿಸಿಯ ಈ ಬೈಕ್ ಮಾರಾಟ ದಿಢೀರ್ ಸ್ಥಗಿತ

ಕಂಪನಿಯು ಅಧಿಕೃತ ವೆಬ್‌ಸೈಟ್‌ನಿಂದ ಎಕ್ಸ್-ಬ್ಲೇಡ್ ಬೈಕ್ ಅನ್ನು ತೆಗೆದುಹಾಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಮತ್ತು ಅಪಾಚೆಯಂತಹ ಪ್ರಬಲ ಬೈಕ್‌ಗಳ ಎದುರು ಎಕ್ಸ್-ಬ್ಲೇಡ್ ಯಾವುದೇ ವಿಶೇಷ ಪ್ರಭಾವ ಬೀರಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಂಡಿದೆ. (ಬರಹ: ವಿನಯ್ ಭಟ್)

ಹೋಂಡಾ ತನ್ನ 160ಸಿಸಿಯ ಎಕ್ಸ್ ಬ್ಲೇಡ್ ಬೈಕ್ ಮಾರಾಟವನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ.
ಹೋಂಡಾ ತನ್ನ 160ಸಿಸಿಯ ಎಕ್ಸ್ ಬ್ಲೇಡ್ ಬೈಕ್ ಮಾರಾಟವನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ.

ಭಾರತದಲ್ಲಿ 150-160 ಸಿಸಿ ಬೈಕ್​ಗಳಿಗೆ ಭರ್ಜರಿ ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಸೇಲ್ ಆಗುತ್ತಿದೆ. ಬಜಾಜ್ ಪಲ್ಸರ್ ಮತ್ತು ಟಿವಿಎಸ್ ಅಪಾಚೆಯ ಹಲವು ಮಾದರಿಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತವೆ. ಆದರೆ, ಇದೀಗ ಅಚ್ಚರಿ ಎಂಬಂತೆ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ತನ್ನ 160ಸಿಸಿಯ ಎಕ್ಸ್ ಬ್ಲೇಡ್ ಬೈಕ್ ಮಾರಾಟವನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ.

ಕಂಪನಿಯು ಅಧಿಕೃತ ವೆಬ್‌ಸೈಟ್‌ನಿಂದ ಬೈಕ್ ಅನ್ನು ತೆಗೆದುಹಾಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಮತ್ತು ಅಪಾಚೆಯಂತಹ ಪ್ರಬಲ ಬೈಕ್‌ಗಳ ಎದುರು ಎಕ್ಸ್-ಬ್ಲೇಡ್ ಯಾವುದೇ ವಿಶೇಷ ಪ್ರಭಾವ ಬೀರಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಂಡಿದೆ.

ಹೋಂಡಾ ಎಕ್ಸ್-ಬ್ಲೇಡ್ ಅನ್ನು 2018 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ, ಅಂದುಕೊಂಡ ಮಟ್ಟಿಗೆ ಈ ಬೈಕ್ ಉತ್ತಮ ಮಾರಾಟವನ್ನು ಪಡೆಯುವಲ್ಲಿ ವಿಫಲವಾಗಿದೆ. ಡೀಲರ್‌ಶಿಪ್‌ಗಳಲ್ಲಿ ಮಾರಾಟವಾಗದೆ ಉಳಿದಿರುವ ಎಕ್ಸ್-ಬ್ಲೇಡ್‌ನ ಘಟಕಗಳು ಸೇಲ್​ಗೆ ಲಭ್ಯವಿರುತ್ತದಷ್ಟೆ. ಹೀಗಾಗಿ ಕೆಲವೇ ದಿನಗಳಲ್ಲಿ, ಅತಿ ಕಡಿಮೆ ಬೆಲೆಗೆ, ಆಫರ್​ಗಳೊಂದಿಗೆ ಹೋಂಡಾ ಎಕ್ಸ್-ಬ್ಲೇಡ್ ಮಾರಾಟವಾಗುವ ನಿರೀಕ್ಷಿಸಲಾಗಿದೆ.

ಎಕ್ಸ್-ಬ್ಲೇಡ್ ಬೈಕ್ ವೈಫಲ್ಯಕ್ಕೆ ಏನು ಕಾರಣ?

ಎಕ್ಸ್-ಬ್ಲೇಡ್ ಬೈಕು CB ಹಾರ್ನೆಟ್ 160R ನ ಮೊದಲ ತಲೆಮಾರಿನ ಮಾದರಿಯನ್ನು ಆಧರಿಸಿದೆ. ಈ ಬೈಕು ತುಂಬಾ ತೀಕ್ಷ್ಣವಾದ ಮತ್ತು ಅಪಾಯಕಾರಿಯಾದ ಮುಂಭಾಗದೊಂದಿಗೆ ಬಿಡುಗಡೆ ಆಗಿತ್ತು. ಇದರ ಸೀಟ್ ಮತ್ತು ಟ್ಯಾಂಕ್ ಕೂಡ ವಿಭಿನ್ನವಾಗಿದೆ. ರಿಯರ್ ಡಿಸ್ಕ್ ಬ್ರೇಕ್ ಮತ್ತು ಸಿಬಿಎಸ್ ಆಯ್ಕೆಯು ಲಭ್ಯವಿಲ್ಲ. ಇದೇ ಕಾರಣಕ್ಕೆ ಈ ಬೈಕ್ ಭಾರತೀಯರಿಗೆ ಅಷ್ಟೊಂದು ಇಷ್ಟವಾಗಿರಲಿಲ್ಲ. ಇದು ಮುಚ್ಚುವಿಕೆಯ ಹಿಂದಿನ ದೊಡ್ಡ ಕಾರಣ ಎಂದು ನಂಬಲಾಗಿದೆ. ಆದರೆ, ಇದನ್ನು ಅಧಿಕೃತವಾಗಿ ಹೋಂಡಾ ಖಚಿತಪಡಿಸಿಲ್ಲ.

ಎಕ್ಸ್-ಬ್ಲೇಡ್ ನಾಲ್ಕು ಬಣ್ಣದ ಆಯ್ಕೆಗಳನ್ನು ಹೊಂದಿತ್ತು - ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ಸ್ಟ್ರಾಂಷಿಯಲ್ ಸಿಲ್ವರ್ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್. ಹೋಂಡಾದ 160cc ಬೈಕ್‌ಗಳಲ್ಲಿ, ನೀವು ಯುನಿಕಾರ್ನ್ 160 ಮತ್ತು SP160 ಅನ್ನು ಖರೀದಿಸಬಹುದು. ಎಕ್ಸ್-ಬ್ಲೇಡ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 162.71 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಈ ಬೈಕು RSU ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಹಿಂಭಾಗ ಮೊನೊಶಾಕ್ ಘಟಕ, ಮುಂಭಾಗ ಸಿಂಗಲ್ ಚಾನೆಲ್ ABS ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಹಿಂದಿನ ಡಿಸ್ಕ್ (ಪೆಟಲ್ ಡಿಸ್ಕ್) ಬ್ರೇಕ್ ಆಯ್ಕೆಯನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್-ಬ್ಲೇಡ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 1.15 ಲಕ್ಷ ರೂ. ಆಗಿದೆ. ಇದು ಸ್ಥಗಿತಗೊಂಡ ಪರಿಣಾಮ ಇದೀಗ 160 ಸಿಸಿ ವಿಭಾಗದಲ್ಲಿ ಹೋಂಡಾ ಮತ್ತೊಂದು ಬೈಕ್ ಅನ್ನು ತರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

Whats_app_banner