logo
ಕನ್ನಡ ಸುದ್ದಿ  /  ಕರ್ನಾಟಕ  /  ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ

ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ

Jayaraj HT Kannada

Dec 23, 2024 06:20 AM IST

google News

ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ

    • ವಿವಿಧೆಡೆ ಹಾವುಗಳನ್ನು ರಕ್ಷಿಸಿ ಅದನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಉರಗ ತಜ್ಞ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ ಅವರಿಗೆ ಡಿಆರ್‌ಎಫ್‌ಒ ಅರುಣ ಕಾಶಿ  ನೆರವಾಗಿದ್ದಾರೆ.
ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ
ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ

ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಸೆಕ್ಷನ್ ಫಾರೆಸ್ಟರ್(ಡಿಆರ್‌ಎಫ್‌ಒ) ಹಾಗೂ ಉರಗ ತಜ್ಞ ಸುನೀಲ ಹೊನ್ನಾವರ ಕಾತೂರ, ವಲಯ ಅರಣ್ಯಾಧಿಕಾರಿ ವೀರೇಶ್‌ ಅವರ ಮಾರ್ಗದರ್ಶದೊಂದಿಗೆ ವಿವಿಧ ಜಾತಿಯ 5 ಹಾವುಗಳನ್ನು ರಕ್ಷಿಸಿದ್ದಾರೆ. ಭಾನುವಾರದಿಂದ ಶನಿವಾರದವರೆಗೆ ರಕ್ಷಿಸಿದ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ನಾಗರಹಾವುಗಳಾಗಿವೆ. ಹೀಗಾಗಿ ಜನರ ಪ್ರಾಣ ರಕ್ಷಣೆಯೊಂದಿಗೆ ಅಪರೂಪದ ಹಾವುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ.

ಇಂದೂರ ಗ್ರಾಮದಲ್ಲಿ ಶರಣುರಾಜು ಅರ್ಭಟ ಎಂಬವರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವನ್ನು ರಕ್ಷಿಸಲಾಗಿದೆ. ಇದೇ ವೇಳೆ ಪಾಳಾ ಗ್ರಾಮದ ರುದ್ರಗೌಡ ಮೂಲಿಮನಿ ಎಂಬವರ ಮನೆಗೆ ಬಂದ ರ್‍ಯಾಟ್ ಸ್ನೇಕ್, ಮುಂಡಗೋಡ ಪಟ್ಟಣದ ಸುಭಾಶ್‌ ನಗರದ ಮರ್ದಾನಸಾಬ್ ಬಡಿಗೇರ ಎಂಬವರ ಮನೆ ಬಳಿ ಬಂದ ನಾಗರಹಾವು, ಶುಕ್ರವಾರ ಮುಂಡಗೋಡಿನ ಇಂದೂರ ಗ್ರಾಮದ ಇಂದಿರಾ ನಗರದ ದಿನೇಶ ಕಾಮತ್ ಅವರ ಮನೆಗೆ ಬಂದ ನಾಗರಹಾವನ್ ರಕ್ಷಿಸಲಾಗಿದೆ. ಡಿಸೆಂಬರ್‌ 21ರ ಶನಿವಾರ ಪಾಳಾ ಗ್ರಾಮದ ಯಲ್ಲಪ್ಪ ಹಂಚಿನಮನಿ ಎಂಬವರ ಮನೆಯ ಬಳಿ ಕಾಣಿಸಿಕೊಂಡ ನಾಗರಹಾವು ಸೇರಿದಂತೆ ಒಟ್ಟು ಐದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿವಿಧೆಡೆ ಹಾವು ರಕ್ಷಣೆ ಹಾಗೂ ಅದನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಉರಗ ತಜ್ಞ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನವಾರ ಅವರಿಗೆ ಡಿಆರ್‌ಎಫ್‌ಒ ಅರುಣ ಕಾಶಿ , ಸಿಬ್ಬಂದಿಯಾದ ಮುತ್ತುರಾಜ ಹಳ್ಳಿ, ಸೋಮಲಿಂಗ್, ಪ್ರಕಾಶ ಬಳ್ಳಾರಿ ಚಂದ್ರಕಾಂತ ಪಾಟೀಲ, ತಿಪ್ಪಣ್ಣರವರು ಸಹಕಾರ ನೀಡಿದ್ದಾರೆ.

ಪ್ರಸಕ್ತ ಮಾಸ ಹಾವುಗಳು ಮಿಲನವಾಗುವ ಮಾಸವಾಗಿರುವುದರಿಂದ ಎಲ್ಲೆಡೆ ಹಾವುಗಳು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಮಂಡಲದ ಹಾವುಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸ್ನೇಕ್ ಶ್ಯಾಮ್ ಕರೆ ‌ನೀಡಿದ್ದಾರೆ. ಮಂಡಲದ ಹಾವನ್ನು ಕೆಲವರು ಹೆಬ್ಬಾವು ಎಂದು ತಪ್ಪಾಗಿ ಅರ್ಥೈಸಿಕೊಂಡು ಅದನ್ನು ಹಿಡಿಯಲು ಹೋಗಿ ಅನಾಹುತವನ್ನು ಮೈಮೇಲೆ ಎಳೆದುಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಕಳೆದ ಎರಡು ತಿಂಗಳಲ್ಲಿ ಮೈಸೂರು ನಗರದಲ್ಲಿ 20 ರಿಂದ 30 ಮಂಡಲದ ಹಾವುಗಳನ್ನು ರಕ್ಷಣೆ ಮಾಡಲಾಗಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಿದೆ. ಕಾರು ಹತ್ತುವಾಗ ಅಥವಾ ಇಳಿಯುವಾಗ, ಚಪ್ಪಲಿ ಅಥವಾ ಶೂ ಹಾಕಿಕೊಳ್ಳುವಾಗ, ಸಂಜೆಯ ವೇಳೆ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ