logo
ಕನ್ನಡ ಸುದ್ದಿ  /  ಕರ್ನಾಟಕ  /  Gandhi Jayanthi:ಗಾಂಧೀಜಿ ನೇತಾಜಿ ಪ್ರಭಾವದಿಂದ ನೇತಾಜಿ ಗಾಂಧಿಯಾದ ವಿಜಯಪುರ ಯುವಕ

Gandhi Jayanthi:ಗಾಂಧೀಜಿ ನೇತಾಜಿ ಪ್ರಭಾವದಿಂದ ನೇತಾಜಿ ಗಾಂಧಿಯಾದ ವಿಜಯಪುರ ಯುವಕ

Umesha Bhatta P H HT Kannada

Oct 02, 2023 03:26 PM IST

google News

ವಿಜಯಪುರದ ನಿಲೇಶ ಬೆನಾಳ ನೇತಾಜಿ ಗಾಂಧಿಯಾಗಲು ಇಬ್ಬರ ಉದಾತ್ತ ಚಿಂತನೆಗಳೇ ಕಾರಣ,

    • Gandhiji Influence ಗಾಂಧೀಜಿ ಅವರ ಪ್ರಭಾವ ಒಬ್ಬರ ಮೇಲೆ ಬೀರಿಲ್ಲ. ವಿಜಯಪುರದ ನಿಲೇಶ ಬೆನಾಳ ಅವರೂ ಒಂದೂವರೆ ದಶಕದಿಂದ ಅಪ್ಪಟ ಗಾಂಧೀಜಿ ಹಾಗೂ ನೇತಾಜಿ ಅಭಿಮಾನಿ. ಅವರ ಬಗ್ಗೆ ತಿಳಿದುಕೊಳ್ಳುತ್ತಲೇ ಯುವ ಪೀಳಿಗೆಗೆ ಅವರನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ ನೇತಾಜಿಗಾಂಧಿ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಿಜಯಪುರ ಯುವಕನ ವಿಭಿನ್ನ ಹಾದಿಯ ಪರಿಚಯ ಇಲ್ಲಿದೆ.
ವಿಜಯಪುರದ ನಿಲೇಶ ಬೆನಾಳ ನೇತಾಜಿ ಗಾಂಧಿಯಾಗಲು ಇಬ್ಬರ ಉದಾತ್ತ ಚಿಂತನೆಗಳೇ ಕಾರಣ,
ವಿಜಯಪುರದ ನಿಲೇಶ ಬೆನಾಳ ನೇತಾಜಿ ಗಾಂಧಿಯಾಗಲು ಇಬ್ಬರ ಉದಾತ್ತ ಚಿಂತನೆಗಳೇ ಕಾರಣ,

ಇವರ ಹೆಸರು ನಿಲೇಶ್‌ ಬೆನಾಳ. ಅಪ್ಪಟ ದೇಸಿ ಉಡುಪು, ಗಾಂಧಿ ಟೊಪ್ಪಿಗಿ, ಬಗಲ ಮೇಲೊಂದು ಬಟ್ಟೆಯ ಚೀಲ ಇವರ ಐಡೆಂಟಿಟಿ. ಓದಿದ್ದು ಸ್ನಾತಕೋತ್ತರ ಪದವಿ. ಊರು ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆ ಆಲಮಟ್ಟಿಗೆ ಬೆನ್ನಿಗೆ ಇರುವ ಬೇನಾಳ. ಇರಲೊಂದು ಮನೆ. ಒಂದಷ್ಟು ಜಮೀನು. ಇದೇ ಅವರ ಜಗತ್ತು ಅಲ್ಲವೇ ಅಲ್ಲ. ಮನೆಯ ಸಮೀಪದಲ್ಲಿಯೇ ಕೃಷ್ಣಾ ನದಿ ರಾಶಿಯಾಗಿ ಹರಿಯುತ್ತದೆ. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರೆ ಎಲ್ಲರಂತೆ ಅವರೂ ಕೃಷಿಕರಾಗಿಯೋ ಇಲ್ಲವೇ ಒಂದು ವೃತ್ತಿಗೆ ಸೀಮಿತವಾಗಿಬಿಡಬಹುದಿತ್ತು.

ನೇತಾಜಿ ಗಾಂಧಿಯಾಗಿದ್ದು

ಒಂದೂವರೆ ದಶಕದ ಹಿಂದೆ ನಿಲೇಶ ಬೆನಾಳ ಅವರು ನೇತಾಜಿ ಗಾಂಧಿಯಾಗಿ ಬದಲಾದರು. ಕಾಲೇಜು ದಿನಗಳಿಂದಲೂ ಗಾಂಧೀಜಿ ಹಾಗೂ ನೇತಾಜಿ ಸುಭಾಷ್‌ ಚಂದ್‌ ಬೋಸ್‌ ಅವರ ಪಕ್ಕಾ ಅನುಯಾಯಿಯಾಗಿದ್ದ ನಿಲೇಶ್‌ ಅವರಿಗೆ ಇಬ್ಬರ ಕುರಿತೂ ತಿಳಿದುಕೊಳ್ಳಬೇಕೆಂಬ ಹಂಬಲ. ಇಬ್ಬರ ಬಗ್ಗೆಯೂ ಸಿಕ್ಕಿದ್ದೆಲ್ಲವನ್ನೂ ಓದುತ್ತಾ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಆರಂಭಿಸಿದರು.

39ರ ತ್ರಿಪುರ ಅಧಿವೇಶನ ಮುಂದೆ ಇಟ್ಕೊಂಡು ಗಾಂಧಿ ನೇತಾಜಿ ನಡುವೆ ವೈರತ್ವ ಬೆಳೆಸುವ ಪ್ರಯತ್ನ ಶುರುವಾಯಿತು. ಆಗ ಇಬ್ಬರ ಬಗ್ಗೆಯೂ ಜನರಿಗೆ ತಿಳಿಸಬೇಕು. ಗೊಂದಲ ಬಗೆಹರಿಸಬೇಕು. ಆದಷ್ಟು ಜನರಿಗೆ ಗಾಂಧಿಯನ್ನು ಮುಟ್ಟಿಸಬೇಕು ಎಂದು ನಿಲೇಶ ಬೆನಾಳ ಅವರು ನೇತಾಜಿ ಗಾಂಧಿ ಯಾಗಿ ಬದಲಾಗಿ ಹೋದರು. ಹಾವೇರಿ, ಬಾಗಲಕೋಟೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ನಿಲೇಶ ವಿಜಯಪುರದಲ್ಲಿ ಆಕಾಶವಾಣಿ ಮೂಲಕ ತಮ್ಮ ಪತ್ರಿಕಾ ವೃತ್ತಿ ಮುಂದುವರಿಸಿದರು.

ಗಾಂಧಿ ಫೌಂಡೇಷನ್‌

ಗಾಂಧಿ ಕುರಿತು ತಿಳಿಸಲು ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ಸಂಸ್ಥೆ ಹುಟ್ಟು ಹಾಕಿದರು. ಈ ಸಂಸ್ಥೆಯ ಮೂಲಕ ಗಾಂಧೀಜಿಯ ತತ್ವ ಪ್ರಚಾರಕ್ಕೆ ಒತ್ತುಕೊಡುತ್ತಾ ಬಂದರು. 15 ವರ್ಷದಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ಸುತ್ತಿದ್ದಾರೆ. ಸುಮಾರು 60 ಸಾವಿರ ಮಕ್ಕಳಿಗೆ ಗಾಂಧಿ ಕುರಿತು ತಿಳಿಸುವ ಅವರೊಂದಿಗೆ ಚಟುವಟಿಕೆ ರೂಪಿಸುತ್ತಾ ಹೋದರು. ಈಗಲೂ ತಿಂಗಳಲ್ಲಿ ನಾಲ್ಕೈದು ದಿನ ಇದಕ್ಕೆ ಮೀಸಲಿಡುತ್ತಾರೆ. ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ ಸಹಿತ ಹಲವು ಕಡೆಗೆ ಅವರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ನಿಲೇಶ ಅವರು ಗಾಂಧಿ ಹಾಗೂ ನೇತಾಜಿ ಕುರಿತು ಏನೇ ಮಾಹಿತಿ ಬಂದರೂ ಸಂಗ್ರಹಿಸುತ್ತಾರೆ. ಅದರಲ್ಲೀ ಗಾಂಧೀಜಿ ಕುರಿತು ಪುಸ್ತಕಗಳು, ಭಾಷಣಗಳು, ಘಟನಾವಳಿಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಅವರ ನೇತಾಜಿಗಾಂಧಿ ಎನ್ನುವ ಫೇಸ್‌ಬುಕ್‌ ಖಾತೆಯಲ್ಲಂತೂ ಗಾಂಧೀಜಿ ಹಾಗೂ ನೇತಾಜಿ ಬಿಟ್ಟರೆ ಬೇರೆ ಯಾರೂ ಸಿಗುವುದಿಲ್ಲ.

ಗಾಂಧಿ ಕುರಿತು ನಿಖರ ಮಾಹಿತಿ

ಗಾಂಧೀಜಿ ಅವರ ಕುರಿತು ನಿಲೇಶ್‌ ಅವರಿಗೆ ನಿಖರ ಮಾಹಿತಿಯಿದೆ. ಅವರ ಹುಟ್ಟಿನಿಂದ ಸಾವಿನವರೆಗಿನ ದಿನಗಳು, ಘಟನಾವಳಿಗಳು. ಹೋರಾಟ, ಭೇಟಿಕೊಟ್ಟ ಪ್ರದೇಶಗಳು, ಭಾರತ ಮಾತ್ರವಲ್ಲದೇ ಜಗತ್ತಿನ ಬೇರೆ ಬೇರೆ ದೇಶಗಳ ಹಲವರೊಂದಿಗೆ ಇದ್ದ ನಂಟು, ಅವರ ಚಿಂತನೆ ಎಲ್ಲದರ ಕುರಿತು ನಿಲೇಶ್‌ ವಿಸ್ತೃತವಾಗಿಯೇ ತಿಳಿಸುತ್ತಾ ಹೋಗುತ್ತಾರೆ.

ಈಗಿನ ಪೀಳಿಗೆಯವರಿಗೆ ಗಾಂಧಿ ಕುರಿತು ತಿಳಿಸಲೆಂದೇ ಕಾಲೇಜ್‌ ಟು ಕಾಲೇಜು ಕಾರ್ಯಕ್ರಮ ಹಮ್ಮಿಕೊಳ್ಳುವ ಜತೆಗೆ ಗಾಂಧಿ ಅವರು ಭೇಟಿ ಕೊಟ್ಟ ಸ್ಥಳಗಳಿಗೆ ತಾವು ಭೇಟಿ ನೀಡುತ್ತಾರೆ. ಅಲ್ಲಿ ಸುತ್ತಾಡಿಕೊಂಡು ಬಂದು ಇಲ್ಲಿಯವರಿಗೆ ಉಣ ಬಡಿಸುತ್ತಾರೆ.

ಇಬ್ಬರ ಫಿಲಾಸಫಿಯೇ ಇಷ್ಟ

ಗಾಂಧೀಜಿ ಅವರ ಮಾನವ ಪ್ರೇಮ ವಿಶ್ವ ಭ್ರಾತೃತ್ವ ಸರ್ವೋದಯ ಪಿಲಾಸಫಿ ಇಷ್ಟ.ಗಾಂಧಿ ಸರಳತೆ, ಸಾತ್ವಿಕತೆ, ಪಾರದರ್ಶಕ ನನ್ನನ್ನು ಆಕರ್ಷಿಸಿತು.ನೇತಾಜಿಯ ಕಿಚ್ಚು ಮತ್ತು ಕೆಚ್ಚು ಅವರ ದೇಶ ಪ್ರೇಮ ಇಷ್ಟವಾಗುತ್ತದೆ. ಅವರ ನಡುವಿನ ಆತ್ಮಿಯತೆ ಅವು ತಂದೆ ಮಗನ ಸಂಬಂಧ ಅವರು ಗೌರವಿಸಿಕೊಳ್ಳುವ ಪರಿ ಅವರಿಬ್ಬರಲ್ಲಿ ಇರುವ ದೇಶಭಕ್ತಿ ಸ್ವಾತಂತ್ರ್ಯದ ಹೋರಾಟದ ದಾರಿಗಳು ವಿಭಿನ್ನ ಆಗಿದ್ದರು. ಸಹಿತ ಮುಟ್ಟುವ ಗುರಿ ಒಂದೇ ಆಗಿತ್ತು. ಇವೆಲ್ಲವೂ ನನ್ನನ್ನು ಆಕರ್ಷಣೆ ಮಾಡಿದವು. ಇದರಿಂದ ಇಬ್ಬರ ಬಗ್ಗೆ ತಿಳಿದುಕೊಳ್ಳುತ್ತಾ ಜನರಿಗೆ ತಿಳಿಸಿಕೊಡಬೇಕು ಎನ್ನುವ ಹಂಬಲ ಮೂಡಿತು. ಬೋಸರಿಗೆ ಗಾಂಧೀಜಿ ರಾಷ್ಟ್ರಪಿತ. ದೇಶದ ಅತ್ಯುಚ್ಚ ಕೋಟಿ ಜನನಾಯಕ ಮಹಾತ್ಮಾ ಆದರೆ ಗಾಂಧೀಜಿಯವರಿಗೆ ಸುಭಾಷರು ನೇತಾಜಿ ಆದರು. ಹಾಗೆಯೇ ನಾನು ನೇತಾಜಿ ಗಾಂಧಿ ಆದೆ ಎನ್ನುವುದು ನಿಲೇಶರ ನುಡಿ.

ದಿವಾನರ ಮನೆತನ, ಮೇಲ್ವರ್ಗ ವೈಷ್ಣವ ಪಂಥದ ಗಾಂಧಿ ಬ್ಯಾರಿಸ್ಟರ್ ಆಗಿದ್ದವರು. ಕೊನೆಗೆ ಈ ದೇಶದ ಕಟ್ಟ ಕಡೆಯ ವ್ಯಕ್ತಿಯಂತ ತುಂಡು ಬಟ್ಟೆಯನ್ನು ತೊಟ್ಟು ಜೀವನ ಪೂರ್ತಿ ಬದುಕಿದರು. ಜಗತ್ತನ್ನು ಗೆದ್ದರು. ಗಾಂಧೀಜಿ ತಮ್ಮ ಬದುಕಿನ ಆಯುಷ್ಯವನ್ನು ಅರೆಬೆತ್ತಲೆಯಾಗಿ ಕಳೆದು ಈ ದೇಶಕ್ಕಾಗಿ ಮತೀಯ ಐಕ್ಯತೆಗಾಗಿ ಸವೆಸಿ ಹುತಾತ್ಮರಾದರು.

ನೇತಾಜಿ ಬೋಸರೂ ಸಹ ಸಿರಿವಂತ ಕುಟುಂಬದ ಕುಡಿ. ಆ ಸಂದರ್ಭದಲ್ಲಿಯೇ ಐಸಿಎಸ್ ಪಾಸ್ ಆಗಿದ್ದವರು. ಅದೆಲ್ಲವನ್ನು ಬಿಟ್ಟು ಭಾರತಕ್ಕೆ ಬಂದು ಗಾಂಧೀಜಿಯವರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಕೊನೆಗೆ ಸೈನ್ಯ ಕಟ್ಟಿದರು. ಭಾರತ ಮಾತೆಯನ್ನು ಬಂಧ ಮುಕ್ತಗೊಳಿಸುವುದಕ್ಕೆ ಹೊರಡುವಾಗ ಚಿರಂಜೀವಿಯಾದರು.

ಈ ಕಾರಣದಿಂದಲೇ ನನ್ನನ್ನು ಇಬ್ಬರೂ ಸದಾ ಕಾಡುತ್ತಾರೆ. ಅವರನ್ನು ಜೀವ ಇರುವವರೆಗೂ ಜನರಿಗೆ ತಿಳಿಸುತ್ತಾ ಹೋಗುತ್ತೇನೆ. ವಿಶೇಷವಾಗಿ ಮಕ್ಕಳಿಗೆ ಎಲ್ಲವನ್ನೂ ತಿಳಿಸಿಕೊಡುವುದೇ ನನ್ನ ಉದ್ದೇಶ. ನಾನೂ ಸುತ್ತುತ್ತಲೇ ಇರುತ್ತೇನೆ ಎಂದು ಅಭಿಮಾನದಿಂದಲೇ ಹೇಳುತ್ತಾರೆ.

ಮಕ್ಕಳೂ ಗಾಂಧಿಯಾದರು

ಅಂದ ಹಾಗೆ ನಿಲೇಶ ಬೆನಾಳ ಅವರು ನೇತಾಜಿ ಗಾಂಧಿ ಆಗಿ ಬದಲಾಗುವ ಹೊತ್ತಿಗೆ ಮೊದಲ ಮಗ ಹುಟ್ಟಿದ ಇದರಿಂದ ಮೊದಲ ಮಗ ತಿಲಕ್ ಗಾಂಧಿಯಾದ. ಅವರಿಗೆ ಈಗ 15ವರುಷ ವರ್ಷ. ಎರಡನೇ ಮಗ ಗೋಖಲೆ ಗಾಂಧಿ. ಆತನಿಗೆ ಹನ್ನೆರಡು ವರ್ಷ. ಗಾಂಧೀಜೀ ನೇತಾಜಿ ಬದುಕಿನ ನಡುವೇ ವಿಜಯಪುರದ ನೇತಾಜಿ ಗಾಂಧಿ ಬದುಕು ಆದರ್ಶ ರೀತಿಯಲ್ಲಿಯೇ ಸಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ