Bengaluru: 'ನಿಮ್ಮನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ': ಬಾಡಿಗೆ ಮನೆಗಾಗಿ ಇಂಟರ್ವ್ಯೂ ಅಟೆಂಡ್ ಆದ ಬಳಿಕ ಓನರ್ ಕಳಿಸಿದ್ರು ಆಫರ್ ಲೆಟರ್
Nov 05, 2023 02:55 PM IST
ಬಾಡಿಗೆ ಮನೆಗಾಗಿ ಇಂಟರ್ವ್ಯೂ (ಪ್ರಾತಿನಿಧಿಕ ಚಿತ್ರ)
Rented House in Bengaluru: ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡಿಬೇಕು ಅಂದ್ರೆ ನೀವು ಮೊದಲು ಮನೆಯ ಮಾಲೀಕ ನಡೆಸುವ ಸಂದರ್ಶನದಲ್ಲಿ ಪಾಸಾಗಬೇಕು. ರೆಸ್ಯೂಮ್, ಲಿಂಕ್ಡ್‌ಇನ್ ಪ್ರೊಫೈಲ್ ನೀಡಬೇಕು. ಕೇವಲ ಪಾಸ್ ಆದ್ರೆ ಸಾಕಾಗಲ್ಲ, ನೀವು ಶಾರ್ಟ್‌ಲಿಸ್ಟ್ ಆಗಬೇಕು. ಆಮೇಲೆ ನಿಮ್ಮನ್ನ ಫೈನಲ್ ಮಾಡಿ ಬಾಡಿಗೆ ಕೊಡ್ತಾರೆ..!
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಷ್ಟಪಟ್ಟು ಹುಡುಕಿದ್ರೆ ನಮ್ಮ ಪ್ರತಿಭೆಗೆ ತಕ್ಕಂತಹ ಕೆಲಸವನ್ನು ಪಡೆಯಬಹುದೇನೋ.. ಆದರೆ ಬಾಡಿಗೆ ಮನೆ ಹುಡುಕುವುದು ಮಾತ್ರ ತುಂಬಾನೆ ಕಷ್ಟದ ಕೆಲಸ. ಅಂತೂ ಇಂತೂ ಬಾಡಿಗೆ ಮನೆ ಹುಡುಕಿದ ಮೇಲೆ ಅಡ್ವಾನ್ಸ್ ಕೇಳಿ ತಲೆಕೆಟ್ಟು ಹೋಗತ್ತೆ. ಆದ್ರೆ ಇತ್ತೀಚೆಗೆ ಅಂದರೆ ಕೋವಿಡ್ ಬಳಿಕ ಮತ್ತೊಂದು ತಲೆನೋವಿನ ಸಮಸ್ಯೆಯೊಂದು ಉದ್ಭವವಾಗಿದೆ.
ಅದೇನಪ್ಪಾ ಅಂದ್ರೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡಿಬೇಕು ಅಂದ್ರೆ ನೀವು ಮೊದಲು ಮನೆಯ ಮಾಲೀಕ ನಡೆಸುವ ಸಂದರ್ಶನದಲ್ಲಿ ಪಾಸಾಗಬೇಕು. ರೆಸ್ಯೂಮ್, ಲಿಂಕ್ಡ್‌ಇನ್ ಪ್ರೊಫೈಲ್ ನೀಡಬೇಕು. ಕೇವಲ ಪಾಸ್ ಆದ್ರೆ ಸಾಕಾಗಲ್ಲ, ನೀವು ಶಾರ್ಟ್‌ಲಿಸ್ಟ್ ಆಗಬೇಕು. ಆಮೇಲೆ ನಿಮ್ಮನ್ನ ಫೈನಲ್ ಮಾಡಿ ಬಾಡಿಗೆ ಕೊಡ್ತಾರೆ..! ಇವೆಲ್ಲಾ ಸುಳ್ಳು ಅನ್ಕೊಂಡ್ರಾ? ಖಂಡಿತ ಅಲ್ಲ. ಇದು ಬೆಂಗಳೂರಿನ ನೈಜ ಸಂಗತಿ.
ಫ್ಲಾಟ್ ಬಾಡಿಗೆ ಪಡೆಯಲು ಇಂಟರ್ವ್ಯೂ ಅಟೆಂಡ್ ಆದ ಬಳಿಕ ಅವರಿಗೆ ಅಪಾರ್ಟ್ಮೆಂಟ್ ಮಾಲೀಕರು 'ನಿಮ್ಮನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ' ಎಂದು ಆಫರ್ ಲೆಟರ್ ಕಳುಹಿಸಿದ್ದಾರೆ. ಇದರ ಸ್ರೀನ್ಶಾಟ್ ಅನ್ನು ಎಕ್ಸ್ (ಟ್ವಿಟರ್)ನಲ್ಲಿ ಇಶು ಎಂಬವರು ಹಂಚಿಕೊಂಡಿದ್ದಾರೆ.
"ಆ ದಿನ ನಿಮ್ಮಿಬ್ಬರನ್ನೂ ಭೇಟಿಯಾಗಿ ಸಂತೋಷವಾಯಿತು. ನಮ್ಮ ಭೇಟಿಯ ಸಮಯದಲ್ಲಿ ನಾನು ಹೇಳಿದಂತೆ, ನಮ್ಮ ಆಸ್ತಿಯಲ್ಲಿ (ಫ್ಲಾಟ್) ಆಸಕ್ತಿ ವ್ಯಕ್ತಪಡಿಸಿದ ಎಲ್ಲರನ್ನೂ ಭೇಟಿಯಾಗಲೂ ಆಗಿಲ್ಲವಾದರೂ ಅವರಲ್ಲಿ ಯಾರು ಬೆಸ್ಟ್ ಎಂದು ಗುರುತಿಸಲು ಸಮಂಜಸವಾದ ಕಾರಣ ಹುಡುಕಿದೆ. ನನ್ನ ಶಾರ್ಟ್‌ಲಿಸ್ಟ್‌ನಲ್ಲಿ ನಿಮ್ಮಿಬ್ಬರಿಗೆ ಮೊದಲ ಆಫರ್ ನೀಡಲು ಬಯಸುವೆ" ಎಂದು ಓನರ್ ಕಳುಹಿಸಿದ ಆಫರ್ ಲೆಟರ್ನಲ್ಲಿದೆ.
ಈ ಪೋಸ್ಟ್ಗೆ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಕೆಲಸ ಮಾಡುವ ಕಂಪನಿಯನ್ನು ಆಧರಿಸಿ ಓನರ್ ಶಾರ್ಟ್‌ಲಿಸ್ಟ್ ಮಾಡುತ್ತಾರೆ ಎಂದು ಒಬ್ಬರು ಹೇಳಿದರೆ, ನಿಮಗೆ ತಡವಾಗಿ ಇದರ ಅನುಭವ ಆಗಿದೆ. ಕೋವಿಡ್ ನಂತರ ಬೆಂಗಳೂರಿಗೆ ಜನರು ಸಾಮೂಹಿಕವಾಗಿ ಹಿಂದಿರುಗಿದಾಗಿನಿಂದಲೇ ಇದು ಆರಂಭವಾಗಿದೆ ಎಂದು ಮತ್ತೊಬ್ಬರು, ಬೆಂಗಳೂರಿನಲ್ಲಿ ಮನೆ ಪಡೆಯುವುದಕ್ಕಿಂತ ಕೆಲಸ ಪಡೆಯುವುದೇ ಸುಲಭ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.