logo
ಕನ್ನಡ ಸುದ್ದಿ  /  ಕರ್ನಾಟಕ  /  ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದವರು ಸೇರಿ 4 ಜನ ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ

ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದವರು ಸೇರಿ 4 ಜನ ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ

Umesh Kumar S HT Kannada

Jul 31, 2024 07:58 AM IST

google News

ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದ ನಾಲ್ವರು ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

  • ಕೇರಳದಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ವಯನಾಡು ಭೂಕುಸಿತ, ಪ್ರವಾಹದ ವೇಳೆ ಬೆಂಗಳೂರಿನಿಂದ ಪ್ರವಾಸ ಹೋದ ನಾಲ್ವರು ನಾಪತ್ತೆಯಾಗಿದ್ದಾರೆ. ಚಾಮರಾಜನಗರದ ಇಬ್ಬರ ದುರ್ಮರಣಕ್ಕೀಡಾಗಿದ್ದಾರೆ. ಇನ್ನೂ ಹಲವು ಕನ್ನಡಿಗರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದ ನಾಲ್ವರು ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.
ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದ ನಾಲ್ವರು ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

ಬೆಂಗಳೂರು/ಚಾಮರಾಜನಗರ: ಕೇರಳದ ವಯನಾಡು ಭೂಕುಸಿತ (Wayanad Landslide) ದುರಂತ, ಪ್ರವಾಹಕ್ಕೆ ಸಿಲುಕಿ ಕೇರಳದವರಷ್ಟೆ ಅಲ್ಲ, ಕರ್ನಾಟಕದವರೂ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈ ದುರಂತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ. ಎರಡೂವರೆ ವರ್ಷದ ಬಾಲಕ ಸೇರಿ ನಾಲ್ವರು ಕನ್ನಡಿಗರು ನಾಪತ್ತೆಯಾಗಿದ್ದಾರೆ. ಹಲವರು ಬಹುತೇಕ ದುರಂತ ನಡೆದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಯನಾಡು ಭೂಕುಸಿತಕ್ಕೆ ಸಿಲುಕಿ ಮೃತಪಟ್ಟರನ್ನು ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದಶೆಟ್ಟಿ (62), ರಾಣಿ ಮದರ್ (50 ) ಎಂದು ಗುರುತಿಸಲಾಗಿದೆ. ಇವರ ಮೃತದೇಹ ಪತ್ತೆಯಾಗಿದ್ದು, ಹೊರತೆಗೆಯಲಾಗಿದೆ. ಇನ್ನುಳಿದಂತೆ, ಚಾಮರಾಜನಗರ ತಾಲೂಕಿನ ರಾಜನ್ (50) ಮತ್ತು ರಜನಿ (45) ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇನ್ನು ಗುಂಡ್ಲುಪೇಟೆ ತಾಲೂಕಿನ ತ್ರಯಂಬಕಪುರದ ಸ್ವಾಮಿ ಶೆಟ್ಟಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ವಯನಾಡು ಭೂಕುಸಿತ ದುರಂತ; ನಾಲ್ವರು ಕನ್ನಡಿಗರು ನಾಪತ್ತೆ

ಇನ್ನೊಂದೆಡೆ, ವಯನಾಡಿನ ಮುಂಡಕೈನಲ್ಲಿ ನೆಲೆಸಿದ್ದ ಮಂಡ್ಯ ಜಿಲ್ಲೆಯ ಝಾನ್ಸಿರಾಣಿ ಮತ್ತು ಅನಿಲ್ ಕುಮಾರ್ ದಂಪತಿಯ ಕುಟುಂಬದ ಇಬ್ಬರು ಸದಸ್ಯರೂ ನಾಪತ್ತೆಯಾಗಿದ್ದಾರೆ. ಝಾನ್ಸಿ ರಾಣಿ ಅವರ ಪುತ್ರ ನಿಹಾಲ್ (ಎರಡೂವರೆ ವರ್ಷ), ಅತ್ತೆ ಲೀಲಾವತಿ (55) ನಾಪತ್ತೆಯಾದವರು. ಝಾನ್ಸಿರಾಣಿ, ಅವರ ಪತಿ ಅನಿಲ್ ಕುಮಾರ್, ಮಾವ ದೇವರಾಜು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಝಾನ್ಸಿ ರಾಣಿ ಮೈಸೂರಿನ ಸರಗೂರು ಮೂಲದವರು. ಕೇರಳದ ಮುಂಡನ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ಅನಿಲ್ ಕುಮಾರ್‌ ಎಂಬುವವರಿಗೆ ಕೆ.ಆರ್.ಪೇಟೆ ತಾಲೂಕಿನ ಝಾನ್ಸಿರಾಣಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು.

ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಣರೆ: ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ವಯನಾಡಿಗೆ ತೆರಳಿದ್ದ 4 ಪ್ರವಾಸಿಗರು ಹಾಗೂ ಬೆಂಗಳೂರಿನ ಒಬ್ಬ ಚಾಲಕ ಪ್ರವಾಹದಲ್ಲಿ ಸಿಲುಕಿದ್ದರು. ಈ ಪೈಕಿ ಇಬ್ಬರು ಪ್ರವಾಸಿಗರು ಹಾಗೂ ಬೆಂಗಳೂರು ಚಾಲಕ ಸುರಕ್ಷಿತವಾಗಿದ್ದಾರೆ. ಮತ್ತಿಬ್ಬರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಕ್ಯಾಬ್ ಏಜೆನ್ಸಿ ನಡೆಸುತ್ತಿರುವ ಸಚಿನ್ ಗೌಡ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಯನಾಡು ಭೂಕುಸಿತ; ಕರ್ನಾಟಕದ ಸಹಾಯವಾಣಿ

ವಯನಾಡು ಭೂಕುಸಿತದಲ್ಲಿ ನೂರಾರು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅದರಲ್ಲಿ ಪ್ರವಾಸಿಗರು, ಕರ್ನಾಟಕದಿಂದ ಕೇರಳಕ್ಕೆ ಕೆಲಸಕ್ಕೆ ಹೋದವರು ಕೂಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಪ್ರವಾಸ, ಜೀವನೋಪಾಯ ಹಾಗೂ ಇನ್ನಿತರೆ ಕಾರಣಕ್ಕೆ ತೆರಳಿರುವವರ ಮಾಹಿತಿಯನ್ನು ಅವರ ಕುಟುಂಬಸ್ಥರು ತಿಳಿಸಿದ್ದಲ್ಲಿ ಸುರಕ್ಷಿತವಾಗಿ ಅವರನ್ನು ವಾಪಸ್‌ ಕರೆತರಲು ಅಗತ್ಯ ಕ್ರಮ ವಹಿಸಲಾಗುವುದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲಾಡಳಿತ ಇದಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಿದೆ.

ಇದಲ್ಲದೆ, ಕರ್ನಾಟಕ ಸರ್ಕಾರವು ಇಬ್ಬರು ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿದೆ. ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ಸಿ. ಜಾಫರ್ (ಮೊ. 9448355577), ದಿಲೀಪ್‌ ಶಶಿ (ಮೊ.9446000514) ಅವರನ್ನು ನಿಯೋಜಿಸಿದೆ.

ವಯನಾಡು ಭೂಕುಸಿತಕ್ಕೆ ಸಂಬಂಧಿಸಿದ ಕರ್ನಾಟಕದ ಸಹಾಯವಾಣಿ ಸಂಖ್ಯೆ: 08226 223163, 08226 223161, 08226 223160 ಅಥವಾ ವಾಟ್ಸ್‌ಆಪ್ ಸಂಖ್ಯೆ 9740942901 ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ