logo
ಕನ್ನಡ ಸುದ್ದಿ  /  ಕರ್ನಾಟಕ  /  ಹವಾಮಾನ ವರದಿ ಮೇ 30: ಯಾದಗಿರಿ, ಬೀದರ್‌ನಲ್ಲಿ ಒಣಹವೆ, ಕರಾವಳಿ, ದಕ್ಷಿಣ-ಉತ್ತರ ಒಳನಾಡಿನಲ್ಲಿ ಹೇಗಿರಲಿದೆ ಮಳೆ? ಇಲ್ಲಿದೆ ವಿವರ

ಹವಾಮಾನ ವರದಿ ಮೇ 30: ಯಾದಗಿರಿ, ಬೀದರ್‌ನಲ್ಲಿ ಒಣಹವೆ, ಕರಾವಳಿ, ದಕ್ಷಿಣ-ಉತ್ತರ ಒಳನಾಡಿನಲ್ಲಿ ಹೇಗಿರಲಿದೆ ಮಳೆ? ಇಲ್ಲಿದೆ ವಿವರ

Praveen Chandra B HT Kannada

May 30, 2024 06:14 AM IST

google News

ಹವಾಮಾನ ವರದಿ ಮೇ 30

    • weather report may 30 2024: ಕರ್ನಾಟಕದ ವಿವಿಧೆಡೆ ಮಳೆಯಾಗುತ್ತಿದ್ದು, ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳ ಇಂದಿನ ಹವಾಮಾನ ವರದಿ ಇಲ್ಲಿದೆ.
ಹವಾಮಾನ ವರದಿ ಮೇ 30
ಹವಾಮಾನ ವರದಿ ಮೇ 30

ಬೆಂಗಳೂರು: ಕರ್ನಾಟಕದ ವಿವಿಧ ಕಡೆ ಇಂದೂ ಹಗುರ- ಸಾಧಾರಣ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮಳೆಯ ಅಬ್ಬರ ಕಡಿಮೆಯಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ದಕ್ಷಿಣ ಕನ್ನಡ, ಉಡುಪು, ಉತ್ತರ ಕನ್ನಡದಲ್ಲಿ ಇಂದು ಹಗುರ-ಸಾಧಾರಣ ಮಳೆ ಇರಲಿದೆ. ದಕ್ಷಿಣ ಒಳನಾಡು- ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಮಳೆರಾಯನ ಆಗಮನವಿರಲಿದೆ. ಯಾದಗಿರಿ, ಬೀದರ್‌ನ ಜನರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದು, ಇಂದು ಒಣಹವೆ ಇರಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ ಹವಾಮಾನ ವರದಿ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಅನೇಕ ಕಡೆ ಇಂದು ಹಗುರ, ಸಾಧಾರಣ ಮಳೆ ಇರಲಿದೆ. ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಿದ್ದರೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ/ಸಾಧಾರಣ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಉತ್ತರ ಒಳನಾಡು

ಬೀದರ್‌, ಯಾದಗಿರಿ ಜಿಲ್ಲೆಯ ಬಹುತೇಕ ಕಡೆ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಒಳನಾಡಿನ ಬಹುತೇಕ ಕಡೆ ಹಗುರ/ಸಾಧಾರಣ ಮಳೆಯಾಗಲಿದೆ.

ದಕ್ಷಿಣ ಒಳನಾಡು

ಇದೇ ರೀತಿ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಅನೇಕ ಕಡೆಗಳಲ್ಲಿ ಹಗುರ/ಸಾಧಾರಣ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇಂದಿನ ತಾಪಮಾನ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದರೂ ಹಗಲು ತುಸು ಸೆಖೆಯ ಅನುಭವ ಇದೆ. ಮೇ 30ರಂದು ಬೆಂಗಳೂರಿನ ಗರಿಷ್ಠ ತಾಪಮಾನ 32 ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ರಾಯಚೂರು, ಕಲಬುರಗಿ, ಯಾದಗಿರಿ ಮುಂತಾದ ಕಡೆ ಬಿಸಿಲಿನ ಹೊಡೆತ ಮುಂದುವರೆಯಲಿದೆ. ಈ ಜಿಲೆಗಳಲ್ಲಿ ಗರಿಷ್ಠ ತಾಪಮಾನ 41- ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದೇ ರೀತಿ ಮಂಡ್ಯ ಜಿಲ್ಲೆಯಲ್ಲಿ 33-23 ಡಿಗ್ರಿ ಸೆಲ್ಸಿಯಸ್‌, ಮಡಿಕೇರಿ: 24-28 ಡಿಗ್ರಿ ಸೆಲ್ಸಿಯಸ್‌, ರಾಮನಗರ: 33-23 ಡಿಗ್ರಿ ಸೆಲ್ಸಿಯಸ್‌, ಹಾಸನ: 29-21 ಡಿಗ್ರಿ ಸೆಲ್ಸಿಯಸ್‌, ಚಾಮರಾಜನಗರ: 33-23 ಡಿಗ್ರಿ ಸೆಲ್ಸಿಯಸ್‌, ಚಿಕ್ಕಬಳ್ಳಾಪುರ: 34-23 ಡಿಗ್ರಿ ಸೆಲ್ಸಿಯಸ್‌, ಕೋಲಾರ: 34-24 ಡಿಗ್ರಿ ಸೆಲ್ಸಿಯಸ್‌, ತುಮಕೂರು: 33-23 ಡಿಗ್ರಿ ಸೆಲ್ಸಿಯಸ್‌, ಉಡುಪಿ: 29-26 ಡಿಗ್ರಿ ಸೆಲ್ಸಿಯಸ್‌, ಕಾರವಾರ: 32-27 ಡಿಗ್ರಿ ಸೆಲ್ಸಿಯಸ್‌, ಚಿಕ್ಕಮಗಳೂರು: 28-21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ದಾವಣಗೆರೆ: 35-24 ಡಿಗ್ರಿ ಸೆಲ್ಸಿಯಸ್‌, ಹುಬ್ಬಳ್ಳಿ: 34-23 ಡಿಗ್ರಿ ಸೆಲ್ಸಿಯಸ್‌, ಡಿಗ್ರಿ ಸೆಲ್ಸಿಯಸ್‌, ಚಿತ್ರದುರ್ಗ: 34-23 ಡಿಗ್ರಿ ಸೆಲ್ಸಿಯಸ್‌, ಹಾವೇರಿ: 34-24 ಡಿಗ್ರಿ ಸೆಲ್ಸಿಯಸ್‌, ಬಳ್ಳಾರಿ: 29-26 ಡಿಗ್ರಿ ಸೆಲ್ಸಿಯಸ್‌, ಗದಗ: 36-24 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳ: 37-25 ಡಿಗ್ರಿ ಸೆಲ್ಸಿಯಸ್‌, ರಾಯಚೂರು: 40-28 ಡಿಗ್ರಿ ಸೆಲ್ಸಿಯಸ್‌, ಡಿಗ್ರಿ ಸೆಲ್ಸಿಯಸ್‌, ಯಾದಗಿರಿ: 40-28 ಡಿಗ್ರಿ ಸೆಲ್ಸಿಯಸ್‌, ವಿಜಯಪುರ: 39-25 ಡಿಗ್ರಿ ಸೆಲ್ಸಿಯಸ್‌, ಬೀದರ್: 39-27 ಡಿಗ್ರಿ ಸೆಲ್ಸಿಯಸ್‌, ಕಲಬುರಗಿ: 40-28 ಡಿಗ್ರಿ ಸೆಲ್ಸಿಯಸ್‌ ಮತ್ತು ಬಾಗಲಕೋಟೆ: 32-22 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ- ಗರಿಷ್ಠ ತಾಪಮಾನ ಇರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳು ಇಲ್ಲಿವೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ