logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಏಪ್ರಿಲ್‌ 2; ರಾಜ್ಯದಲ್ಲಿ ಇಂದು ಒಣಹವೆ, ಕೆಲವೆಡೆ ಉಷ್ಣ ಅಲೆ, ಬೆಂಗಳೂರು ಸುತ್ತಮುತ್ತ ಬೆಳಗ್ಗೆ ಮೋಡ

ಕರ್ನಾಟಕ ಹವಾಮಾನ ಏಪ್ರಿಲ್‌ 2; ರಾಜ್ಯದಲ್ಲಿ ಇಂದು ಒಣಹವೆ, ಕೆಲವೆಡೆ ಉಷ್ಣ ಅಲೆ, ಬೆಂಗಳೂರು ಸುತ್ತಮುತ್ತ ಬೆಳಗ್ಗೆ ಮೋಡ

Umesh Kumar S HT Kannada

Apr 02, 2024 06:02 AM IST

ಕರ್ನಾಟಕ ಹವಾಮಾನ ಏಪ್ರಿಲ್‌ 2; ರಾಜ್ಯದಲ್ಲಿ ಇಂದು ಒಣಹವೆ, ಕೆಲವೆಡೆ ಉಷ್ಣ ಅಲೆ

  • ಕರ್ನಾಟಕ ಹವಾಮಾನ ಏಪ್ರಿಲ್ 2; ಕರ್ನಾಟಕದ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಅಧಿಕ ಇರಬಹುದು. ಕರಾವಳಿ, ದಕ್ಷಿಣ ಒಳನಾಡುಗಳಲ್ಲಿ ಒಣಹವೆ ಇರಲಿದೆ. ರಾಜ್ಯದಲ್ಲಿ ಇಂದು ಒಣಹವೆ, ಮಳೆಯ ಸುಳಿವು ಇಲ್ಲ. ಬೆಂಗಳೂರು ಸುತ್ತಮುತ್ತ ಬೆಳಗ್ಗೆ ಮೋಡ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ಕರ್ನಾಟಕ ಹವಾಮಾನ ಏಪ್ರಿಲ್‌ 2; ರಾಜ್ಯದಲ್ಲಿ ಇಂದು ಒಣಹವೆ, ಕೆಲವೆಡೆ ಉಷ್ಣ ಅಲೆ
ಕರ್ನಾಟಕ ಹವಾಮಾನ ಏಪ್ರಿಲ್‌ 2; ರಾಜ್ಯದಲ್ಲಿ ಇಂದು ಒಣಹವೆ, ಕೆಲವೆಡೆ ಉಷ್ಣ ಅಲೆ

ಬೆಂಗಳೂರು: ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂದು (ಏಪ್ರಿಲ್ 2) ಒಣಹವೆ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚೇ ಇರಲಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇಂದು ಒಣಹವೆ, ಮಳೆಯ ಸುಳಿವು ಇಲ್ಲ, ಬೆಂಗಳೂರು ಸುತ್ತಮುತ್ತ ಬೆಳಗ್ಗೆ ಮೋಡ ಇದ್ದರೂ ನಂತರ ತಿಳಿ ಆಕಾಶ ಇರಲಿದೆ. ತಾಪಮಾನ ಗರಿಷ್ಠಮಟ್ಟದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಬಿರುಗಾಳಿ ಸಹಿತ ಭಾರಿ ಮಳೆ ಎಫೆಕ್ಟ್; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 17 ವಿಮಾನಗಳು ಚೆನ್ನೈ ಏರ್ಪೋರ್ಟ್‌ನಲ್ಲಿ ಲ್ಯಾಂಡಿಂಗ್

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪೈಶಾಚಿಕ ಕೃತ್ಯ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌; ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಆರೋಪಿಗಳು, ಅವರ ಆಶ್ರಯದಾತ ಬಂಧಿತರು

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಬೆಂಗಳೂರು ಹವಾಮಾನ ಕೇಂದ್ರ ಪ್ರಕಟಿಸಿರುವ ವರದಿ ಪ್ರಕಾರ ನಾಳೆ (ಏಪ್ರಿಲ್ 3) ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದ್ದು, ಶಾಖ ತರಂಗದ ಪ್ರಭಾವ ಇರಲಿದೆ. ಮುಂದಿನ ಎರಡು ದಿನಗಳಲ್ಲಿ ಬೆಳಗಾವಿ, ಬೀದರ್, ಗದಗ, ಧಾರವಾಡ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ 2- 4 ಡಿಗ್ರಿ ಸೆಲ್ಶಿಯಸ್‌ ಮತ್ತು ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ 2- 3 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಗುಡುಗು, ಮಿಂಚು, ಮಳೆ ಮುನ್ನೆಚ್ಚರಿಕೆ ಇಲ್ಲ.

ಪ್ರಸ್ತುತ ಕರ್ನಾಟಕದ ಶೇಕಡ 95 ರಷ್ಟು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ಶೇಕಡ 95ರ ಮಟ್ಟವನ್ನು ಮೀರಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ತಾಪಮಾನ ಪ್ರಮಾಣವು ಶೇಕಡ 40 ರಿಂದ 50 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏಪ್ರಿಲ್ 5 ರ ತನಕ ಶಾಖದ ಅಲೆಗಳ ಪರಿಸ್ಥಿತಿ ಇರಲಿದೆ.

ಬೆಂಗಳೂರು ಹವಾಮಾನ ಇಂದು (ಏಪ್ರಿಲ್‌ 2), ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಕನಿಷ್ಠ 22 ಡಿಗ್ರಿ ಸೆಲ್ಶಿಯಸ್

ಬೆಂಗಳೂರು ನಗರದಲ್ಲಿ ಇಂದು (ಏಪ್ರಿಲ್‌ 2) ಬೆಳಗ್ಗೆ ಮೋಡದ ವಾತಾವರಣ ಇರಲಿದೆ. ಬಳಿಕ ತಿಳಿ ಆಕಾಶ ಇರಲಿದೆ. ತಾಪಮಾನ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೂಡ ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಏಪ್ರಿಲ್‌ 1) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 35.4 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 23.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಏಪ್ರಿಲ್‌ 1) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 21.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.

ಪ್ರಮುಖ ನಗರಗಳ ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಏಪ್ರಿಲ್‌ 1) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 27.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 50)

ಮಂಗಳೂರು – 29.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 81)

ಚಿತ್ರದುರ್ಗ – 27.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 89)

ಗದಗ – 29.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 67)

ಹೊನ್ನಾವರ – 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 78)

ಕಲಬುರಗಿ – 29.5 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 24)

ಬೆಳಗಾವಿ – 25 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 89)

ಕಾರವಾರ – 33.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 65 )

----------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು