Yadagiri News: ವಾಹನ ಡಿಕ್ಕಿ ಪರಿಣಾಮ ಬೈಕ್ ಸವಾರನ ಕಣ್ಣು ಗುಡ್ಡೆ ಕಿತ್ತುಕೊಂಡು ರಸ್ತೆ ಮೇಲೆ ಬಿತ್ತು
Jul 29, 2023 11:48 AM IST
ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ಚೆನ್ನಾರೆಡ್ಡಿ ಮಾಲಿಪಾಟೀಲ್ ಎಂಬುವರ ಕಣ್ಣಿನ ಗುಡ್ಡೆ ಅಪಘಾತದಿಂದ ಆಚೆ ಕಿತ್ತಿಕೊಂಡು ಕೆಳಗೆ ಬಿದ್ದಿರುವುದು.
- ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ಚೆನ್ನಾರೆಡ್ಡಿ ಮಾಲಿಪಾಟೀಲ್ ಎಂಬುವರ ಕಣ್ಣಿನ ಗುಡ್ಡೆ ಅಪಘಾತದಿಂದ ಆಚೆ ಕಿತ್ತಿಕೊಂಡು ಕೆಳಗೆ ಬಿದ್ದಿದೆ. ಚೆನ್ನಾರೆಡ್ಡಿ ಅವರು ಕೆಕೆಆರ್‌ಟಿಸಿಯಲ್ಲಿ ನೌಕರನಾಗಿದ್ದು, ಯಾದಗಿರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಯಾದಗಿರಿ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಕಣ್ಣು ಗುಡ್ಡೆ ಕಿತ್ತುಕೊಂಡು ರಸ್ತೆ ಮೇಲೆ ಬಿದ್ದ ಘಟನೆ ಯಾದಗಿರಿ ನಗರದಲ್ಲಿ ಶುಕ್ರವಾರ ನಡೆದಿದೆ.
ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ಚೆನ್ನಾರೆಡ್ಡಿ ಮಾಲಿಪಾಟೀಲ್ ಎಂಬುವರ ಕಣ್ಣಿನ ಗುಡ್ಡೆ ಅಪಘಾತದಿಂದ ಆಚೆ ಕಿತ್ತಿಕೊಂಡು ಕೆಳಗೆ ಬಿದ್ದಿದೆ. ಚೆನ್ನಾರೆಡ್ಡಿ ಅವರು ಕೆಕೆಆರ್‌ಟಿಸಿಯಲ್ಲಿ ನೌಕರನಾಗಿದ್ದು, ಯಾದಗಿರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಮೊಹರಂ ಹಬ್ಬದ ಪ್ರಯುಕ್ತ ಶುಕ್ರವಾರ ಬೆಳಗಿನ ಜಾವ ನಗರದಿಂದ ತಮ್ಮ ಸ್ವಗ್ರಾಮವಾದ ಯಡ್ಡಳ್ಳಿ ಗ್ರಾಮಕ್ಕೆ ಸ್ಕೂಟಿ ತೆಗೆದುಕೊಂಡು ಹೋಗುತ್ತಿದ್ದರು. ಬೆಳಗಿನ ಜಾವ ಮಳೆಯಲ್ಲಿ ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ. ಎದುರಿನಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿತ್ತು. ಕಣ್ಣು ಗುಡ್ಡೆಯು ಕಿತ್ತುಕೊಂಡು ರಸ್ತೆ ಮೇಲೆ ಬಿದ್ದಿತ್ತು. ಈ ವೇಳೆ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಜನರು ಸಹಾಯಕ್ಕೆ ಬರಲಿಲ್ಲ. ನಂತರ ಕಿಲ್ಲನಕೇರಾ ಗ್ರಾಮದ ಬೀರಲಿಂಗಪ್ಪ ಎಂಬ ಯುವಕ ಮಾನವೀಯತೆ ಮೆರೆದು ಸಹಾಯ ಮಾಡಲು ನೆರವಾಗಿದ್ದಾನೆ.
ಕೂಡಲೇ 112 ನಂಬರ್ ಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಅಂಬುಲೆನ್ಸ್ ಬಂದಾಗ ಅಂಬುಲೆನ್ಸ್ ನಲ್ಲಿ ಸಾಗಿಸಲು ನೆರವಾಗಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಕಣ್ಣು ಗುಡ್ಡೆಯು ರಸ್ತೆ ಮೇಲೆ ಬಿದ್ದದನ್ನು ಅರಿತು, ಈ ಬಗ್ಗೆ ಬೀರಲಿಂಗಪ್ಪ ಅವರು ಬಿಜೆಪಿ ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರ ಅವರ ಗಮನಕ್ಕೆ ತಂದಾಗ, ವೆಂಕಟರೆಡ್ಡಿ ಅವರು ಗಾಯಗೊಂಡ ಕುಟುಂಬಸ್ಥರನ್ನು ಸಂಪರ್ಕಿಸಿ ಕಿತ್ತು ಹೋದ ಕಣ್ಣು ಗುಡ್ಡೆಯನ್ನು ಕುಟುಂಬಸ್ಥರಿಗೆ ನೀಡಿ ವೆಂಕಟರೆಡ್ಡಿ ಅವರು ಸಹಾಯ ಮಾಡಿ ಮಾನವೀಯತೆ ತೊರಿದ್ದಾರೆ.
ಸದ್ಯಕ್ಕೆ ಮಾಹಿತಿ ಪ್ರಕಾರ ಕಣ್ಣು ಗುಡ್ಡೆಯನ್ನು ಅಳವಡಿಕೆ ಮಾಡಲು ಸಾಧ್ಯವಿಲ್ಲವಂತೆ. ಆದರೆ, ಕಣ್ಣಿನ ಪೊರೆಯನ್ನು ಬೇರೆಯವರಿಗೆ ಅಳವಡಿಕೆ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.