logo
ಕನ್ನಡ ಸುದ್ದಿ  /  Lifestyle  /  Gum Health And Diabetes: Can Brushing Teeth More Reduce Diabetes Risk? What Expert Says

Gum health and diabetes: ಹಲವು ಬಾರಿ ಹಲ್ಲುಜ್ಜುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ

HT Kannada Desk HT Kannada

Mar 31, 2023 03:20 PM IST

ಹಲ್ಲುಜ್ಜುವುದು

    • Gum health and diabetes: ದಿನಕ್ಕೆ 3 ಬಾರಿ ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯ ಸುಧಾರಿಸುವ ಜೊತೆಗೆ ಮಧುಮೇಹವನ್ನೂ ನಿಯಂತ್ರಿಸಬಹುದು ಎನ್ನುತ್ತಿವೆ ಅಧ್ಯಯನಗಳು. ಹಾಗಾದರೆ ಹಲ್ಲಿನ ಆರೋಗ್ಯಕ್ಕೂ ಮಧುಮೇಹಕ್ಕೂ ಏನು ಸಂಬಂಧ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.
ಹಲ್ಲುಜ್ಜುವುದು
ಹಲ್ಲುಜ್ಜುವುದು

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ ಮೂರು ಬಾರಿ ಹಲ್ಲುಜ್ಜುವ ಜನರಲ್ಲಿ ಟೈಪ್‌ 2-ಮಧುಮೇಹದ ಅಪಾಯದ ಪ್ರಮಾಣ ಕಡಿಮೆ ಇದೆ ಎಂಬುದು ಸಾಬೀತಾಗಿದೆ. ಇದರೊಂದಿಗೆ ಹಲ್ಲಿನ ಸಮಸ್ಯೆ ಹಾಗೂ ಹಲ್ಲುಗಳು ಬಿದ್ದು ಹೋಗಿರುವವರಲ್ಲಿ ಚಯಾಪಚಯ ಅಸ್ವಸ್ಥತೆಯ ಅಪಾಯ ಹೆಚ್ಚಿದೆ ಎಂದೂ ಹೇಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

Parenting: ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು; ಈ ಮಾತುಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ

Breast Milk: ತಾಯಿಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಗೆ ತೊಂದರೆ ಆಗಿದ್ಯಾ, ಎದೆಹಾಲು ಹೆಚ್ಚಲು ಇಲ್ಲಿದೆ 5 ಮನೆಮದ್ದು

ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಲೇ ಬೇಡಿ

Water Birth: ನೀರಿನಲ್ಲಿ ಹೆರಿಗೆ, ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇದು

ಚಯಾಪಚಯ ಅಸ್ವಸ್ಥತೆಯು ನಮ್ಮ ಬಾಯಿಯ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಬಹುದು.

ಹಲ್ಲಿನ ಸಮಸ್ಯೆಗೂ ಮಧುಮೇಹಕ್ಕೂ ಸಂಬಂಧ ಇದೆಯೇ?

ಪೀರಿಯಾಂಟೈಟಿಸ್‌ ಎಂದು ಕರೆಯುವ ವಸಡು ರೋಗವು ಹಲ್ಲಿನ ಆರೋಗ್ಯಕ್ಕೆ ಸಹಾಯ ಮಾಡುವ ವಸಡು ಹಾಗೂ ಮೂಳೆಗಳಿಗೆ ಬ್ಯಾಕ್ಟೀರಿಯಾಗಳಿಂದ ಸೋಂಕು ಉಂಟಾಗುವಂತೆ ಮಾಡುತ್ತದೆ. ಇದಕ್ಕೆ ನೀವು ಚಿಕಿತ್ಸೆ ಪಡೆಯದಿದ್ದರೆ, ಹಲ್ಲು ಉದುರುವುದು ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ವಸಡಿನ ಸಮಸ್ಯೆ ಇರುವ ವ್ಯಕ್ತಿಗಳ ರಕ್ತದಲ್ಲಿ ಉರಿಯೂತದ ಪ್ರಮಾಣವು ಹೆಚ್ಚಿರುತ್ತದೆ. ಇದು ಇನ್ಸುಲಿನ್‌ ಸೂಕ್ಷ್ಮತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಲು ಕಾರಣವಾಗುತ್ತದೆ ಎನ್ನುತ್ತಾರೆ ಪುಣೆಯ ರೂಬಿ ಹಾಲ್‌ ಕ್ಲಿನಿಕ್‌ನ ದಂತ ವೈದ್ಯ ಡಾ. ಸಚ್‌ದೇವ್‌ ನಂದಾ.

ʼಬಾಯಿ ಅಥವಾ ವಸಡಿನ ಅನಾರೋಗ್ಯವು ಮಧುಮೇಹಕ್ಕೆ ಕಾರಣವಾಗಬಹುದು ಎಂಬುದನ್ನು ಪರಿಶೀಲಿಸಲು ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗಳ ಅಗತ್ಯವಿದೆ. ಅದಾಗ್ಯೂ ಕೆಲವು ಅಧ್ಯಯನಗಳು ವಸಡಿನ ಸಮಸ್ಯೆ ಇರುವ ವ್ಯಕ್ತಿಗಳಲ್ಲಿ ಮಧುಮೇಹ ಹೆಚ್ಚುವ ಸಾಧ್ಯತೆ ಇದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಆದರೆ ಕೇವಲ ಹಲ್ಲಿನ ಆರೋಗ್ಯ ಮಾತ್ರವಲ್ಲ, ಒಟ್ಟಾರೆ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದಲೂ ಮಧುಮೇಹ ಹೆಚ್ಚಬಹುದುʼ ಎನ್ನುತ್ತಾರೆ ನಂದಾ.

ಮಧುಮೇಹದಿಂದ ಹಲ್ಲಿನ ಸಮಸ್ಯೆ ಉಂಟಾಗುವುದೇ? ಹಾಗಾದರೆ ಹೇಗೆ?

ಮಧುಮೇಹವು ಬಾಯಿಯಲ್ಲಿರುವ ಲಾಲಾರಸ ಗ್ರಂಥಿಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಲಾಲಾರಸ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ. ಲಾಲಾರಸವು ಹಲ್ಲಿನ ಸೋಂಕನ್ನು ತಡೆಯುತ್ತದೆ.

ಇದರೊಂದಿಗೆ ಲಾಲಾರಸದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದು ಕೂಡ ಹಲ್ಲಿನ ಅನಾರೋಗ್ಯಕ್ಕೆ ಕಾರಣವಾಗಬಹುದು.

ಮಧುಮೇಹಿಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಆ ಕಾರಣದಿಂದ ಇವರು ಬೇಗನೆ ಸೋಂಕಿನ ತೊಂದರೆಗಳಿಗೆ ಒಳಗಾಗುತ್ತಾರೆ. ಇದು ವಸಡಿನ ಸೋಂಕಿಗೆ ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟ ಅಧಿಕವಾದಾಗ ಬಾಯಿ ಒಣಗಬಹುದು. ಇದರಿಂದ ಹುಳುಕು, ಬಾಯಿಯ ಸೋಂಕು, ವಸಡಿನ ಕಾಯಿಲೆಯ ಅಪಾಯ ಹೆಚ್ಚಿದೆ ಎನ್ನುತ್ತಾರೆ ಡಾ. ನಂದಾ.

ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಪ್ರತಿದಿನ ಫ್ಲೋಸ್‌ ಮಾಡುವುದು ಹಾಗೂ ನಿಯಮಿತವಾಗಿ ದಂತವೈದ್ಯರ ಬಳಿ ಹಲ್ಲುಗಳ ಪರೀಕ್ಷೆ ಮಾಡಿಸುವುದು ಈ ರೀತಿ ಅಭ್ಯಾಸಗಳಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಆರೋಗ್ಯಕರ ಜೀವನಶೈಲಿ ಪಾಲಿಸಿ

ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಮತ್ತು ಔಷಧಿಗಳ ಮೂಲಕ ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿರ್ವಹಿಸುವುದು ಮಧುಮೇಹ ಮತ್ತು ಮಧುಮೇಹಿ ಸಂಬಂಧಿತ ಬಾಯಿ ಹಾಗೂ ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ನಿರ್ವಹಿಸಲು ಸಹಾಯ ಮಾಡುತ್ತದೆ.

ಬಾಯಿಯ ಅನಾರೋಗ್ಯ ಹಾಗೂ ಮಧುಮೇಹ ನಿಕಟ ಸಂಬಂಧ ಹೊಂದಿರುವುದರಿಂದ ಬಾಯಿಯ ಆರೋಗ್ಯ ಕಾಳಜಿ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಎನ್ನುವುದು ತಜ್ಞರು ಅಭಿಪ್ರಾಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು