logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಬಂಧದಲ್ಲಿ ಗೌರವ ತೋರುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

Relationship: ಸಂಬಂಧದಲ್ಲಿ ಗೌರವ ತೋರುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

HT Kannada Desk HT Kannada

Mar 30, 2023 08:51 PM IST

ಸಂಬಂಧ

  • Relationship: ನಿಮ್ಮ ಸಂಗಾತಿಯ ಮಾತುಗಳನ್ನು ಸಂಪೂರ್ಣವಾಗಿ ಆಲಿಸುವುದರಿಂದ ಹಿಡಿದು ಅವರ ವ್ಯಥೆಗಳಿಗೆ ಸಹಾನುಭೂತಿ ತೋರಿಸುವವರೆಗೆ ನಿಮ್ಮ ಸಂಗಾತಿಯನ್ನು ಗೌರವಿಸುವ ವಿಧಾನಗಳು ಇಲ್ಲಿವೆ.

ಸಂಬಂಧ
ಸಂಬಂಧ

ಪರಸ್ಪರ ಗೌರವ ನೀಡುವುದು ಸಂಬಂಧದ ಬಂಧವನ್ನು ಗಟ್ಟಿಗೊಳಿಸುತ್ತದೆ. ಸಂಬಂಧವೆಂದ ಮೇಲೆ ಸಾಕಷ್ಟು ಏರಿಳಿತಗಳು ಇರುತ್ತವೆ. ಆದರೆ ಒಬ್ಬರಿಗೊಬ್ಬರು ಗೌರವ ನೀಡುವುದು ಹಾಗೂ ಅರ್ಥ ಮಾಡಿಕೊಳ್ಳುವುದರ ಮೂಲಕ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಸಂಬಂಧಗಳಲ್ಲಿ ಏನೇ ಸವಾಲುಗಳಿದ್ದರೂ ಸಂಗಾತಿಯನ್ನು ಗೌರವಿಸುವುದು ಮುಖ್ಯವಾಗುತ್ತದೆ. ಅವರ ಹಿತಾಸಕ್ತಿಗಳನ್ನು ಕಡೆಗಣಿಸುವುದು, ಅವರನ್ನು ಕೀಳಾಗಿ ಕಾಣುವುದು, ಅವರು ಮಾತನಾಡಿರುತ್ತಿರುವಾಗ ದೃಷ್ಟಿ ಬದಲಿಸುವುದು, ಅವರನ್ನು ಯಾವಾಗಲೂ ಹೀಯಾಳಿಸುವುದು ಇದು ಕಾಲನಂತರದಲ್ಲಿ ಸಂಬಂಧದ ಬಿರುಕಿಗೆ ಕಾರಣವಾಗಬಹುದು ಎನ್ನುತ್ತಾರೆ ಆಪ್ತಸಮಾಲೋಚಕಿ ಎಮಿಲಿ ಹೆಚ್ ಸ್ಯಾಂಡರ್ಸ್. ಇವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಂಬಂಧದಲ್ಲಿ ಗೌರವ ತೋರಿಸುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಸಂಬಂಧದಲ್ಲಿ ಗೌರವವನ್ನು ತೋರಿಸಲು ಅವರು ಈ ಕೆಲವು ಮಾರ್ಗಗಳನ್ನು ಹಂಚಿಕೊಂಡಿದ್ದಾರೆ:

ಧನಾತ್ಮಕವಾಗಿ ಮಾತನಾಡಿ

ನಿಮ್ಮ ಸಂಗಾತಿಯ ಬಗ್ಗೆ ಇತರರ ಮುಂದೆ ಧನಾತ್ಮಕವಾಗಿ ಮಾತನಾಡುವುದು ಬಹಳ ಮುಖ್ಯ. ಇದು ನೈತಿಕವಾಗಿ ನೀವು ಅವರಿಗೆ ಸೂಚಿಸಿದ ಬೆಂಬಲವೂ ಆಗಿರುತ್ತದೆ. ಅಲ್ಲದೆ ಸಂಬಂಧದಲ್ಲಿ ಆತ್ಮವಿಶ್ವಾಸ ಬೆಳೆಯಲು ಇದು ಕಾರಣವಾಗುತ್ತದೆ.

ತಮಾಷೆಗೆ ಮಿತಿ ಇರಲಿ

ಸಂಬಂಧದಲ್ಲಿ ತಮಾಷೆಗಳು ಇದ್ದೇ ಇರುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಕಾಲೆಳೆದುಕೊಳ್ಳುವುದು ಸಾಮಾನ್ಯ. ಆದರೆ ಈ ತಮಾಷೆಯ ಮಿತಿಯ ಬಗ್ಗೆ ನಿಮಗೆ ಅರಿವಿರಬೇಕು. ನಿಮ್ಮ ಸಂಗಾತಿಗೆ ಇತರರ ಎದುರು ಮುಜುಗರವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

ಕ್ಷಮಿಸುವ ಗುಣ ಇರಲಿ

ಎಲ್ಲರೂ ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅವರೊಂದಿಗೆ ಶಾಂತವಾಗಿ ನಡೆದುಕೊಳ್ಳಬೇಕು ಮತ್ತು ತಪ್ಪನ್ನು ಕ್ಷಮಿಸುವ ಗುಣವನ್ನು ಹೊಂದಿರಬೇಕು. ಇದರಿಂದ ಅವರಿಗೆ ತಿದ್ದಿಕೊಳ್ಳುವ ಅವಕಾಶ ನೀಡಿದಂತಾಗುತ್ತದೆ.

ಅರ್ಥ ಮಾಡಿಕೊಳ್ಳಿ

ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ಅವರನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಸಂಬಂಧಕ್ಕೆ ಹೆಚ್ಚು ಸ್ಪಷ್ಟತೆ ಮೂಡುತ್ತದೆ.

ಕೇಳಿಸಿಕೊಳ್ಳಿ

ನಿಮ್ಮ ಸಂಗಾತಿ ಹೇಳುತ್ತಿರುವುದು ಸರಿಯೋ, ತಪ್ಪೋ ಎಂಬುದನ್ನು ನಂತರ ನಿರ್ಧರಿಸಿ. ಮೊದಲು ಅವರು ಹೇಳುವುದನ್ನು ಸರಿಯಾಗಿ ಆಲಿಸಿ. ಅವರಿಗೆ ಸಹಕಾರ ನೀಡಿ.

ಅಂಗೀಕರಿಸಿ

ಸಣ್ಣ ಸಣ್ಣ ಮೆಚ್ಚುಗೆ ಹಾಗೂ ಅಂಗೀಕಾರಗಳಿಂದ ಸಂಬಂಧದಲ್ಲಿ ಗೌರವ ಹೆಚ್ಚುತ್ತದೆ, ಅಲ್ಲದೆ ಸಂಬಂಧ ವೃದ್ಧಿಗೂ ಇದೇ ಮದ್ದು. ಸಂಬಂಧದಲ್ಲಿನ ಅವರ ಪ್ರಯತ್ನಗಳನ್ನು ಗುರುತಿಸುವುದು ಮುಖ್ಯವಾಗುತ್ತದೆ.

ಸಹಾನೂಭೂತಿ

ಸಂಗಾತಿಯ ಮಾನಸಿಕ ಆಘಾತಗಳು ಹಾಗೂ ಸೂಕ್ಷ್ಮತೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಎಲ್ಲಿಯೂ ಅವರನ್ನು ಪ್ರಚೋದಿಸದಂತೆ ಗಡಿ ಹಾಕಿಕೊಳ್ಳುವುದು ಸಂಬಂಧದಲ್ಲಿ ಗೌರವ ಹೆಚ್ಚಲು ನೆರವಾಗುತ್ತದೆ.

ಕ್ಷಮೆ ಕೇಳುವುದು

ತಪ್ಪು ಮಾಡಿದ ಸಮಯದಲ್ಲಿ ಕ್ಷಮೆ ಕೇಳುವುದು ಬಹಳ ಮುಖ್ಯ. ಕ್ಷಮೆ ಕೇಳುವುದರಿಂದ ನಾವು ಸಣ್ಣವರಾಗುವುದಿಲ್ಲ. ಇದರಿಂದ ಸಂಬಂಧ ವೃದ್ಧಿಯಾಗುತ್ತದೆ ಎಂಬುದರ ಅರಿವಿರಬೇಕು.

ಮೆಚ್ಚುಗೆ

ದಿನಗಳು, ಕಾಲಗಳು ಸರಿದಂತೆ ಸಂಬಂಧದಲ್ಲಿ ಬೇಸರ ಮೂಡುವುದು ಸಹಜ. ಅದಕ್ಕಾಗಿ ಆರಂಭದಿಂದಲೂ ಸಂಗಾತಿಗಳಿಬ್ಬರ ನಡುವೆ ಒಂದು ಪ್ರೇಮದ ಕಿಡಿ ಇರಬೇಕು. ಆ ಕಿಡಿ ಸದಾ ಉರಿಯುವಂತೆ ನೋಡಿಕೊಳ್ಳಬೇಕು. ನಮಗೆ ಯಾವುದು ಹೆಚ್ಚು ಇಷ್ಟವಾಗುತ್ತದೆ ಎಂಬುದು ಸಂಗಾತಿಗಳಿಗೆ ಅರಿವಿರುತ್ತದೆ. ಆ ಇಷ್ಟಗಳನ್ನು ಸದಾ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು.

ರಿಲೇಷನ್‌ಶಿಪ್‌ಗೆ ಸಂಬಂಧಿಸಿದ ಈ ಸ್ಟೋರಿಯನ್ನೂ ಓದಿ

Relationship: ಮಾತು ಮನೆ ಕೆಡಿಸದೆ, ಜಗಳ ಮನಸ್ಸು ಕೆಡಿಸದೆ ಸಂಬಂಧ ಉಳಿಸಿಕೊಳ್ಳಲು ಈ ದಾರಿ ಅನುಸರಿಸಿ

Relationship: ಒಬ್ಬರನ್ನು ಒಬ್ಬರು ದೂರುವುದು, ದೂಷಿಸುವುದು, ಅಪವಾದ, ಕೆಲವೊಮ್ಮೆ ಅಸಂಬದ್ಧ ವಾದವೂ ಸಂಬಂಧದಲ್ಲಿ ಗಂಭೀರ ಸ್ವರೂಪದ ಜಗಳಕ್ಕೆ ಕಾರಣವಾಗುತ್ತದೆ. ಜಗಳವನ್ನೇ ಪ್ರೀತಿಯನ್ನಾಗಿಸಿ, ಸಂಬಂಧಕ್ಕೆ ಗೌರವ ನೀಡುವ ಮೂಲಕ ಜಗಳಕ್ಕೆ ಪೂರ್ಣ ವಿರಾಮ ಹಾಕಬಹುದು, ಮಾತ್ರವಲ್ಲ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು