logo
ಕನ್ನಡ ಸುದ್ದಿ  /  Lifestyle  /  Rice Water For Skin And Hair Care

Benefits of Rice water: ಕೂದಲು, ಚರ್ಮದ ಸೌಂದರ್ಯ ಇಮ್ಮಡಿಗೊಳಿಸುವ ಅಕ್ಕಿನೀರು..ತಯಾರಿಸೋದು, ಬಳಸೋದು ಹೇಗೆ ನೋಡಿ

HT Kannada Desk HT Kannada

Sep 19, 2022 10:59 AM IST

ಕೂದಲು, ಚರ್ಮದ ಸೌಂದರ್ಯಕ್ಕೆ ಅಕ್ಕಿ ನೀರು

    • ಅಕ್ಕಿಯನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ ತೊಳೆದ ನೀರಿನಲ್ಲಿ ಅನೇಕ ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಆರೋಗ್ಯಕರ ಪೋಷಕಾಂಶಗಳಿವೆ. ಇವು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಕೂದಲು, ಚರ್ಮದ ಸೌಂದರ್ಯಕ್ಕೆ ಅಕ್ಕಿ ನೀರು
ಕೂದಲು, ಚರ್ಮದ ಸೌಂದರ್ಯಕ್ಕೆ ಅಕ್ಕಿ ನೀರು (PC: Unsplash.com)

ಸಾಮಾನ್ಯವಾಗಿ ನಾವೆಲ್ಲಾ ಅಕ್ಕಿಯನ್ನು ತೊಳೆದರೆ ಆ ನೀರನ್ನು ಹೊರಗೆ ಚೆಲ್ಲುತ್ತೇವೆ. ಆದರೆ ಚೀನೀಯರು ಮಾತ್ರ ಅದನ್ನು ಜೋಪಾನ ಮಾಡುತ್ತಾರೆ. ಏಕೆಂದರೆ ಅವರು ಮುಖ ಮತ್ತು ಕೂದಲನ್ನು ತೊಳೆಯಲು ಅಕ್ಕಿನೀರನ್ನು ಬಳಸುತ್ತಾರೆ. ಅಕ್ಕಿ ತೊಳೆದ ನೀರು ಅನೇಕ ಗುಣಗಳನ್ನು ಹೊಂದಿದೆ. ಅದು ನಮ್ಮ ಚರ್ಮ ಮತ್ತು ಕೂದಲಿಗೆ ವಿಶೇಷ ರಕ್ಷಣೆ ನೀಡುತ್ತದೆ. ಹೊಳೆಯುವ, ಸುಂದರ ತ್ವಚೆಯನ್ನು ನೀಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ಈ ಬಗ್ಗೆ ತಜ್ಞರು ಏನಂತಾರೆ, ಇಲ್ಲಿದೆ ಮಾಹಿತಿ

Summer Drinks: ಉರಿ ಬಿಸಿಲಿನಲ್ಲಿ ದೇಹ ತಂಪಾಗಿಸುವ ಹೂವಿನ ಪಾನೀಯಗಳಿವು, ಯಾವೆಲ್ಲಾ ಹೂಗಳಿಂದ ಜ್ಯೂಸ್‌ ತಯಾರಿಸಬಹುದು ನೋಡಿ

ಪ್ರಾಚೀನ ಕಾಲದಿಂದಲೂ, ಅಕ್ಕಿ ನೀರನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಅಕ್ಕಿ ತೊಳೆದ ನೀರು ವಯಸ್ಸಿಗೆ ಸಂಬಂಧಿಸಿದ ಸುಕ್ಕುಗಳು ಮತ್ತು ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಕ್ಕಿ ನೀರು ಚರ್ಮದ ಮೇಲೆ ತುಂಬಾ ಮೃದುವಾಗಿರುತ್ತದೆ. ಈ ನೀರು ಸೋಡಿಯಂ ಲಾರಿಲ್ ಸಲ್ಫೇಟ್‌ನಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಕ್ಕಿ ನೀರು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಸೂಕ್ಷ್ಮ ಮತ್ತು ಸಂಯೋಜಿತ ಚರ್ಮ ಹೊಂದಿರುವ ಜನರು ಇದನ್ನು ಬಳಸಬಹುದು.

ಅಕ್ಕಿಯನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ ತೊಳೆದ ನೀರಿನಲ್ಲಿ ಅನೇಕ ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಆರೋಗ್ಯಕರ ಪೋಷಕಾಂಶಗಳಿವೆ. ಇವು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮವನ್ನು ಮೃದುಗೊಳಿಸುವ ಉತ್ಕರ್ಷಣ ನಿರೋಧಕಗಳು ಮತ್ತು ಫೆರುಲಿಕ್ ಆಮ್ಲವನ್ನು ಹೊಂದಿರುತ್ತದೆ. ಇವು ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.

ನೆನೆಸಿದ ಅಕ್ಕಿ ನೀರು ತಯಾರಿಸುವುದು ಹೇಗೆ..?

ನೆನೆಸಿದ ಅಕ್ಕಿ ನೀರು ತಯಾರಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಮೊದಲು ಅರ್ಧ ಕಪ್ ಅಕ್ಕಿಗೆ ಸ್ವಲ್ಪ ನೀರು ಸೇರಿಸಿ 2-3 ಬಾರಿ ತೊಳೆಯಿರಿ. ನಂತರ ಮತ್ತಷ್ಟು ನೀರು ಸೇರಿಸಿ ಸುಮಾರು 30 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ನೀರನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಇದನ್ನು ಸುಮಾರು 7 ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿಡಬಹುದು.

ಕುದಿಯುವ ಅಕ್ಕಿ ನೀರು

ಮೊದಲು ಅಕ್ಕಿಯನ್ನು 2-3 ಬಾರಿ ತೊಳೆಯಿರಿ. ನಂತರ ಒಂದು ಕಪ್ ಅಕ್ಕಿಗೆ ನಾಲ್ಕು ಲೋಟ ನೀರು ಸೇರಿಸಿ ಒಲೆಯ ಮೇಲೆ ಕುದಿಸಿ. ಅಕ್ಕಿ ಅರ್ಧ ಬೇಯುತ್ತಿದ್ದಂತೆ ನೀರನ್ನು ಪ್ರತ್ಯೇಕವಾಗಿ ತೆಗೆದಿಡಿ. ನಂತರ ರೂಮ್‌ ಟೆಂಪ್ರೇಚರ್‌ಗೆ ಹೊಂದಿಕೊಳ್ಳಲು ಬಿಡಿ ಈ ನೀರನ್ನು ಏಳು ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಬಳಸಬಹುದು.

ಹುದುಗಿಸಿದ ಅಕ್ಕಿ ನೀರು

ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ. ನಂತರ ನೀರನ್ನು ಪ್ರತ್ಯೇಕವಾಗಿ ಶೇಖರಿಸಿ ರೆಫ್ರಿಜರೇಟರ್‌ನಲ್ಲಿ ಇಡುವ ಬದಲಿಗೆ ರೂಮ್‌ ಟೆಂಪ್ರೇಚರ್‌ನಲ್ಲಿ 2 ದಿನಗಳ ಕಾಲ ಬಿಡಿ. ಈ ಅಕ್ಕಿ ನೀರು ಸ್ವಲ್ಪ ವಾಸನೆ ಇರುತ್ತೆ. ಆದರೂ ಇದನ್ನು ಮತ್ತೆ ನೀರಿನೊಂದಿಗೆ ಬೆರೆಸಿ ಮುಖ ಮತ್ತು ಚರ್ಮಕ್ಕೆ ಬಳಸಬಹುದು.

ಅಕ್ಕಿ ನೀರನ್ನು ಹೇಗೆ ಬಳಸುವುದು?

ಅಕ್ಕಿ ನೀರನ್ನು ನೇರವಾಗಿ ಚರ್ಮ ಮತ್ತು ಕೂದಲಿಗೆ ಬಳಸಬಹುದು. ಇವುಗಳಿಗೆ ನೈಸರ್ಗಿಕ ಸುವಾಸನೆ ಮತ್ತು ಪದಾರ್ಥಗಳನ್ನು ಕೂಡಾ ಸೇರಿಸಬಹುದು. ಆದರೆ ಆದಷ್ಟು ಅಕ್ಕಿ ನೀರನ್ನು ಮಾತ್ರ ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ನೀವು ಹುದುಗಿಸಿದ ನೀರನ್ನು ಬಳಸಿದರೆ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸ್‌ ಮಾಡಿ ನಂತರ ಬಳಸಿ.

ಮುಖದ ಕ್ಲೆನ್ಸರ್, ಟೋನರ್ ಆಗಿ ಅಕ್ಕಿನೀರು

ಹೆಚ್ಚಾಗಿ ಅಕ್ಕಿ ನೀರನ್ನು ಮುಖದ ಕ್ಲೆನ್ಸರ್ ಮತ್ತು ಟೋನರ್ ಆಗಿ ಬಳಸಲಾಗುತ್ತದೆ. ಇದಕ್ಕಾಗಿ ಒಂದು ಕಪ್‌ನಲ್ಲಿ ಸ್ವಲ್ಪ ಅಕ್ಕಿ ನೀರನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮುಖಕ್ಕೆ ಲೇಪಿಸಿ, ಒಣಗಿದ ನಂತರ ತೊಳೆದರೆ ಒಳ್ಳೆಯದು.

ಕೂದಲಿಗೆ ಬಳಸುವುದು ಹೇಗೆ..?

ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಅಕ್ಕಿ ನೀರು ಸಹಾಯ ಮಾಡುತ್ತದೆ. ಅಕ್ಕಿ ನೀರನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ರಾಸಾಯನಿಕ ಮುಕ್ತ ಶಾಂಪೂ ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

    ಹಂಚಿಕೊಳ್ಳಲು ಲೇಖನಗಳು