Election Exit Poll Live: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ, ಎರಡು ರಾಜ್ಯಗಳಲ್ಲಿ ಎನ್‌ಡಿಎ ಪರ ಒಲವು
Nov 20, 2024 07:23 PM IST
Jharkhand and Maharashtra Exit Poll Results 2024 Live: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶದ ಕುರಿತು ಕ್ಷಣಕ್ಷಣದ ಮಾಹಿತಿ ಇಲ್ಲಿದೆ. ಈಗಾಗಲೇ ಎಕ್ಸಿಟ್ ಪೋಲ್ ಫಲಿತಾಂಶಗಳೂ ಪ್ರಕಟಕವಾಗಿವೆ.
Maharashtra Exit Poll Live: ನ್ಯೂಸ್ 24-ಚಾಣಕ್ಯ ಸಮೀಕ್ಷೆಯಲ್ಲಿಯೂ ಬಿಜೆಪಿಯೇ ಮೇಲುಗೈ
ಮಹಾರಾಷ್ಟ್ರದಲ್ಲಿ 'ನ್ಯೂಸ್ 24-ಚಾಣಕ್ಯ' ನಡೆಸಿರುವ ಸಮೀಕ್ಷೆಯಲ್ಲಿಯೂ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೇ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟವು 152 ರಿಂದ 160 ಸ್ಥಾನಗಳನ್ನು ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟವು 130 ರಿಂದ 138 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಿದೆ. ಇತರರು 6 ರಿಂದ 8 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಹೇಳಿದೆ.
Maharashtra Exit Poll Live: ಪಿ-ಮಾರ್ಕ್ ಸಮೀಕ್ಷೆಯಲ್ಲಿ ಬಿಜೆಪಿ 137+
ಮಹಾರಾಷ್ಟ್ರದಲ್ಲಿ ಪಿ-ಮಾರ್ಕ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟವು 137 ರಿಂದ 157 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಮೈತ್ರಿಕೂಟವು 126 ರಿಂದ 146 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಮುನ್ನೋಟ ಹೇಳಿದೆ. ಇತರರು 6 ರಿಂದ 8 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಪಿ-ಮಾರ್ಕ್ ತಿಳಿಸಿದೆ.
Maharashtra Exit Poll Live: ಪೋಲ್‌ಸ್ಟರ್ ಮೆಟ್ರಿಜ್ ಸಮೀಕ್ಷೆಯಲ್ಲೂ ಬಿಜೆಪಿಗೆ ಮುನ್ನಡೆಯ ಮುನ್ನೋಟ
ಮಹಾರಾಷ್ಟ್ರದಲ್ಲಿ ಪೋಲ್‌ಸ್ಟರ್ ಮೆಟ್ರಿಜ್ ನಡೆಸಿರುವ ಮತಗಟ್ಟೆ ಸಮೀಕ್ಷೆಯೂ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮಹಾಯುತಿ ಒಕ್ಕೂಟವೇ ಜಯಗಳಿಸಬಹುದು ಎಂದು ಅಂದಾಜಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟವು 150 ರಿಂದ 170, ಕಾಂಗ್ರೆಸ್-ಶಿವಸೇನೆ (ಯುಬಿಟಿ)-ಎನ್‌ಸಿಪಿ (ಎಸ್‌ಸಿಪಿ) ಒಕ್ಕೂಟ ಮಹಾವಿಕಾಸ ಅಘಾಡಿ 110 ರಿಂದ 130 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಮುನ್ನೋಟವು ಹೇಳಿದೆ. ಇತರರು 8 ರಿಂದ 10 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.
Maharashtra Exit Poll Live: ಮಹಾಯುತಿಗೆ ಜಯ ಎಂದ ಪೀಪಲ್ ಪಲ್ಸ್
ಪೀಪಲ್ ಪಲ್ಸ್ ಸಂಸ್ಥೆಯ ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಿಜೆಪಿ ನೇತೃತ್ವದ ಮೈತ್ರಿಕೂಟವು 175 ರಿಂದ 195 ಸ್ಥಾನಗಳಲ್ಲಿ ಜಯಗಳಿಸಬಹುದು. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 85 ರಿಂದ 112 ಸ್ಥಾನಗಳಲ್ಲಿ ಜಯಗಳಿಸಬಹುದು ಮತ್ತು ಪಕ್ಷೇತರರು 7 ರಿಂದ 12 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.
Maharashtra Exit Poll Live: ಬಿಜೆಪಿ ನೇತೃತ್ವದ ಮಹಾಯುತಿಗೆ ಮತ್ತೆ ಅಧಿಕಾರ ಸಾಧ್ಯತೆ ಎಂದ ಮತಗಟ್ಟೆ ಸಮೀಕ್ಷೆಗಳು
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೇ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.
Jharkhand Election Live 2024 ಮೊದಲ ಎಕ್ಸಿಟ್ ಪೋಲ್, ಜಾರ್ಖಂಡ್ ನಲ್ಲಿ ಎನ್ ಡಿಎ ಜಯಭೇರಿ
ಜಾರ್ಖಂಡ್‌ನಲ್ಲಿ ಎನ್‌ಡಿಎ 42-27 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪೀಪಲ್ಸ್ ಪಲ್ಸ್ ತನ್ನ ಮತದಾನೋತ್ತರ ಸಮೀಕ್ಷೆಯಲ್ಲಿ ಹೇಳಿಕೊಂಡಿದೆ ಮತ್ತು ಭಾರತ ಬ್ಲಾಕ್‌ನ 25-30 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್ ಏಜೆನ್ಸಿ ಭವಿಷ್ಯ ನುಡಿದಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 42-27 ಸ್ಥಾನಗಳನ್ನು ಗಳಿಸಲಿದ್ದು, ಭಾರತದ 25-30 ಸ್ಥಾನಗಳನ್ನು ಮ್ಯಾಟ್ರಿಜ್ ಭವಿಷ್ಯ ನುಡಿದಿದೆ
ಜಾರ್ಖಂಡ್‌ನಲ್ಲಿ ಸಂಜೆ 5 ರ ಹೊತ್ತಿಗೆ ಶೇ 67.59ರಷ್ಟು ಮತದಾನ
Jharkhand Election Live 2024 : ಜಾರ್ಖಂಡ್‌ನಲ್ಲಿ ಮತದಾನ ಮುಕ್ತಾಯ,ಸಂಜೆ 5 ರ ಹೊತ್ತಿಗೆ ಶೇ 67.59ರಷ್ಟು ಮತದಾನ
ಜಾರ್ಖಂಡ್‌ನಲ್ಲಿ ಮತದಾನ ಮುಕ್ತಾಯ, ಬಹುತೇಕ ಶಾಂತಿಯುತ
ಜಾರ್ಖಂಡ್‌ನಲ್ಲಿ ಮತದಾನ ಮುಕ್ತಾಯ, ಬಹುತೇಕ ಶಾಂತಿಯುತ
Maharashtra Election Live 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ, ಗೆಲ್ಲೋರು ಯಾರು
ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ ಏರ್ಪಟ್ಟಿದೆ. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಗಳ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಮಹಾರಾಷ್ಟ್ರದ ರಾಜಕೀಯ ರಂಗ ಒಡೆದು ಚೂರು ಚೂರಾದ ಕನ್ನಡಿಯಂತಾಗಿದ್ದು, ಈ ಮೈತ್ರಿ ಪಕ್ಷಗಳು ಚುನಾವಣೆ ಎದುರಿಸಿದ ರೀತಿ ಮತ್ತು ಸದ್ಯದ ಚಿತ್ರಣದ ವಿವರ ಹೀಗಿದೆ - ಕ್ಲಿಕ್ ಮಾಡಿ 👉🏻 Maharashtra election 2024: ಮಹಾಯುತಿ vs ಮಹಾ ವಿಕಾಸ ಅಘಾಡಿ ನಡುವೆ ಪೈಪೋಟಿ, ಸದ್ಯದ ರಾಜಕೀಯ ಚಿತ್ರಣ
Maharashtra Election Live 2024: ಪತ್ನಿ , ಮಗಳೊಂದಿಗೆ ಮತ ಚಲಾಯಿಸಿದ ಸಚಿನ್ ತೆಂಡುಲ್ಕರ್
ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಇಂದು ಮುಂಬೈನಲ್ಲಿ ತಮ್ಮ ಪತ್ನಿ ಅಂಜಲಿ ಹಾಗೂ ಮಗಳು ಸಾರಾ ಜೊತೆ ಬಂದು ಮತ ಚಲಾಯಿಸಿದ್ದಾರೆ. ಬೂತ್‌ಗೆ ಬಂದು ಓಟು ಮಾಡಲು ಸಾಧ್ಯವಾಗದವರಿಗೆ ಮನೆಯಿಂದಲೇ ಓಟು ಮಾಡುವ ಅವಕಾಶ ಇದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಸಚಿನ್ ತೆಂಡುಲ್ಕರ್ ಮತಗಟ್ಟೆಗೆ ಬಂದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Maharashtra Election Live 2024: ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಇಂದು (ನವೆಂಬರ್ 20) ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು, ಅದಾಗಿ ಅರ್ಧ ಗಂಟೆ ಬಳಿಕ ಮಹಾರಾಷ್ಟ್ರ ವಿಧಾಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಅಥವಾ ಮಹಾರಾಷ್ಟ್ರ ಎಕ್ಸಿಟ್ ಪೋಲ್ (Maharashtra exit polls 2024) ಫಲಿತಾಂಶ ಪ್ರಕಟವಾಗಲಿದೆ. ವಿವರಕ್ಕೆ ಕ್ಲಿಕ್ ಮಾಡಿ 👉🏻 ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ
Maharashtra Election Live 2024: 4,136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಮಹಾರಾಷ್ಟ್ರದಲ್ಲಿ 4,136 ಅಭ್ಯರ್ಥಿಗಳ ಭವಿಷ್ಯವನ್ನು 9.7 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಇಂದು ಜನ ಸಾಮಾನ್ಯರ ಜೊತೆಗೆ ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಸೋನು ಸೂದ್, ಆಮೀರ್ ಖಾನ್, ರಿತೇಶ್ ದೇಶ್‌ಮುಖ್, ರಾಜ್ ಕುಮಾರ್ ರಾವ್ ಸೇರಿ ಅನೇಕ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೂಡಾ ತಮ್ಮ ಪತ್ನಿ ಅಂಜಲಿ, ಮಗಳು ಸಾರಾ ಜೊತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗ ಮನೆಯಿಂದ ಓಟು ಮಾಡುವ ಅನುಕೂಲ ಒದಗಿಸಿರುವುದರಿಂದ ಬೂತ್‌ಗೆ ಬಂದು ಓಟು ಮಾಡಲಾಗದವರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಚಿನ್ ಸಲಹೆ ನೀಡಿದ್ದಾರೆ.
Election Exit Poll Live: ಎಕ್ಸಿಟ್ ಪೋಲ್: ಸಂಜೆ 6 .30 ಗಂಟೆಯ ನಂತರ ಪ್ರಕಟ
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ಇಂದು ಬಿರುಸಿನಿಂದ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ಎರಡನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ. ಒಟ್ಟು 38 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇನ್ನೊಂದಡೆ ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಚುನಾವಣಾ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಅದಕ್ಕೂ ಮುನ್ನ ಇಂದು ಸಂಜೆ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬೀಳಲಿದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆ ಅನುಭವಿಸಲಿದೆ, ಯಾವ ಪಕ್ಷ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎಂದು ತಿಳಿಯಲು ಜನರು ಕಾತರರಾಗಿದ್ದಾರೆ. ಏಕನಾಥ್ ಸಿಂಧೆ, ದೇವೇಂದ್ರ ಫಡ್ನಾವಿಸ್, ಆದಿತ್ಯ ಠಾಕ್ರೆ, ಅಜಿತ್ ಪವರ್ ಸೇರಿದಂತೆ ವಿವಿಧ ನಾಯಕರ ಗೆಲುವು, ಸೋಲಿನ ಕುರಿತು ಚುನಾವಣೋತ್ತರ ಫಲಿತಾಂಶಗಳು ಇಂದು ಸಂಜೆ ಭವಿಷ್ಯ ನುಡಿಯಲಿವೆ.
Election Exit Poll Live: ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೋತ್ತರ ಫಲಿತಾಂಶ ಪ್ರಕಟ ಸಮಯ
ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿಗೆ ತಕ್ಕಂತೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಸಂಜೆ 6:30ಕ್ಕೆ ಮತದಾನ ಮುಗಿದ ನಂತರ ಎರಡೂ ರಾಜ್ಯಗಳ ಎಕ್ಸಿಟ್ ಪೋಲ್ ಮುನ್ನೋಟಗಳು ಲಭ್ಯವಾಗುತ್ತವೆ. ಅಂತಿಮ ಮತ ಎಣಿಕೆಯನ್ನು ನವೆಂಬರ್ 23 ರಂದು ನಡೆಯಲಿದೆ.
Election Exit Poll Live: ನವೆಂಬರ್ 23ರಂದು ಮತ ಎಣಿಕೆ
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಚುನಾವಣಾ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಅಂದು ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ನಂತರ ಎರಡು ರಾಜ್ಯಗಳಲ್ಲಿ ಯಾವ ಪಕ್ಷ ಮುನ್ನಡೆ ಗಳಿಸಿದೆ ಎನ್ನುವ ಸ್ಪಷ್ಟ ಚಿತ್ರಣ ದೊರಕುವ ಸಾಧ್ಯತೆ ಇದೆ.
Maharashtra Election Live 2024 : ಮಹಾರಾಷ್ಟ್ರದಲ್ಲಿ ಮಹಾಯುತಿ- ಅಘಾಡಿ ನಡುವೆ ಮಹಾ ಪೈಪೋಟಿ
ಇಂದು ನಡೆಯುವ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಹಾಗೂ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ನಡುವೆ ಯಾವ ಪಕ್ಷಕ್ಕೆ ಗೆಲುವು ದೊರಕಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕಣದಲ್ಲಿ ಆರು ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಈ ಆರು ಪಕ್ಷಗಳು ಎರಡು ಬಣಗಳಾಗಿ ಪೈಪೋಟಿ ನಡೆಸುತ್ತಿವೆ.
Jharkhand Election Live 2024: ಜಾರ್ಖಂಡ್ ಎರಡನೇ ಹಂತದ ಮತದಾನ ವಿವರ
ಎರಡನೇ ಹಂತದಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಮತ್ತು ಅದರ ಮಿತ್ರಪಕ್ಷ ಎಜೆಎಸ್‌ಯು ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಭಾರತ ಬ್ಲಾಕ್‌ಗೆ, ಜೆಎಂಎಂ 20 ಸ್ಥಾನಗಳಿಂದ, ಕಾಂಗ್ರೆಸ್ 13 ರಿಂದ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ನಾಲ್ಕರಿಂದ ಮತ್ತು ಆರ್‌ಜೆಡಿ ಎರಡು ಸ್ಥಾನಗಳಿಂದ ಸ್ಪರ್ಧಿಸುತ್ತಿದೆ. ಧನ್ವರ್‌ನಲ್ಲಿ ಜೆಎಂಎಂ ಮತ್ತು ಸಿಪಿಐ(ಎಂಎಲ್) ಸೌಹಾರ್ದ ಸ್ಪರ್ಧೆಯನ್ನು ನಡೆಸಲಿದ್ದು, ಚತ್ತರ್‌ಪುರ ಮತ್ತು ಬಿಶ್ರಾಮ್‌ಪುರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೌಹಾರ್ದ ಹೋರಾಟ ನಡೆಸಲಿವೆ. 2024 ರ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಅಂತಿಮ ಹಂತದ 38 ಅಸೆಂಬ್ಲಿ ಸ್ಥಾನಗಳಲ್ಲಿ 1.23 ಕೋಟಿ ರೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 60.79 ಲಕ್ಷ ಮಹಿಳೆಯರು ಮತ್ತು 147 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 1.23 ಕೋಟಿ ಮತದಾರರು ನವೆಂಬರ್ 20 ರಂದು ತಮ್ಮ ಹಕ್ಕು ಚಲಾಯಿಸುವ ಹಕ್ಕು ಹೊಂದಿದ್ದರು.
Maharashtra Election Live 2024: ಮಹಾರಾಷ್ಟ್ರ ಚುನಾವಣೆ
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಇಂದು (ನವೆಂಬರ್ 20) ಮತದಾನ ನಡೆಯುತ್ತಿದೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಮಹಾಯುತಿ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಬಯಸುತ್ತಿದ್ದರೆ, ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಪುನಃ ಅಧಿಕಾರಕ್ಕೇರಲು ಬಯಸಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ 149 ಸ್ಥಾನಗಳಲ್ಲಿ, ಶಿವ ಸೇನಾ 81ರಲ್ಲಿ ಎನ್‌ಸಿಪಿ 59 ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ಪಕ್ಷ 101, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ವೇಳೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 237 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.