ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ

ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ

Maharashtra exit polls 2024: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ಮತದಾನ ಇಂದು (ನವೆಂಬರ್ 20) ನಡೆಯುತ್ತಿದ್ದು, ಮಹಾರಾಷ್ಟ್ರ ಎಕ್ಸಿಟ್‌ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗಲಿದೆ ಎಂಬ ಕುತೂಹಲ ಸಹಜ. ಈ ಮತದಾನೋತ್ತರ ಸಮೀಕ್ಷೆಯ ವಿವರದ ಕ್ಷಣ ಕ್ಷಣದ ಅಪ್ಡೇಟ್ಸ್ ಅನ್ನು ಎಲ್ಲಿ ನೋಡುವುದು ಇತ್ಯಾದಿ ವಿವರ ಇಲ್ಲಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರದ ಬಗ್ಗೆ ಕುತೂಹಲ ಸಹಜ, ಸಾಂಕೇತಿಕವಾಗಿ ಮಹಾರಾಷ್ಟ್ರದ ಪ್ರಮುಖ ರಾಜಕೀಯ ನಾಯಕರಾದ ಉದ್ಧವ್ ಠಾಕ್ರೆ, ಅಜಿತ್ ಪವಾರ್, ಶರದ್ ಪವಾರ್ ಮತ್ತು ಏಕನಾಥ ಶಿಂಧೆ ಅವರ ಫೋಟೋ ಬಳಸಲಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಯಾವಾಗ, ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರದ ಬಗ್ಗೆ ಕುತೂಹಲ ಸಹಜ, ಸಾಂಕೇತಿಕವಾಗಿ ಮಹಾರಾಷ್ಟ್ರದ ಪ್ರಮುಖ ರಾಜಕೀಯ ನಾಯಕರಾದ ಉದ್ಧವ್ ಠಾಕ್ರೆ, ಅಜಿತ್ ಪವಾರ್, ಶರದ್ ಪವಾರ್ ಮತ್ತು ಏಕನಾಥ ಶಿಂಧೆ ಅವರ ಫೋಟೋ ಬಳಸಲಾಗಿದೆ.

Maharashtra exit polls 2024: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಇಂದು (ನವೆಂಬರ್ 20) ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು, ಅದಾಗಿ ಅರ್ಧ ಗಂಟೆ ಬಳಿಕ ಮಹಾರಾಷ್ಟ್ರ ವಿಧಾಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಅಥವಾ ಮಹಾರಾಷ್ಟ್ರ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ನಡುವೆ ತೀವ್ರ ಹಣಾಹಣಿ ಇದ್ದು, ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲವಿದೆ. ಮತ ಎಣಿಕೆ/ ಫಲಿತಾಂಶ ನವೆಂಬರ್ 23 ರಂದು ಪ್ರಕಟವಾಗಲಿದೆ.

ಮಹಾರಾಷ್ಟ್ರ ಚುನಾವಣಾ ಕಣದ ಒಂದು ನೋಟ

ಮಹಾರಾಷ್ಟ್ರದ ರಾಜಕಾರಣದಲ್ಲಿ ಇದೇ ಮೊದಲ ಸಲ ಪಕ್ಷಗಳು ವಿಭಜನೆಯಾಗಿ ಬಣಗಳ ರೂಪದಲ್ಲಿ ಪ್ರತ್ಯೇಕವಾಗಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಶಿವ ಸೇನಾ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಎರಡು ಹೋಳಾಗಿದ್ದು, ಶಿವ ಸೇನಾ ಉದ್ಧವ್ ಠಾಕ್ರೆ ಬಣ (ಶಿವ ಸೇನಾ (ಯುಬಿಟಿ)) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎನ್‌ಸಿಪಿ (ಎಸ್‌ಪಿ)) ಕಾಂಗ್ರೆಸ್‌ ಜತೆಗೆ ಮಹಾ ವಿಕಾಸ ಅಘಾಡಿಯಲ್ಲಿ ಉಳಿದುಕೊಂಡಿವೆ. ಆದರೆ ಶಿವ ಸೇನಾ ಏಕನಾಥ ಶಿಂಧೆ (ಶಿವ ಸೇನಾ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ (ಎನ್‌ಸಿಪಿ)ಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿವೆ.

ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ ಬಿಜೆಪಿ 149 ಸ್ಥಾನಗಳಲ್ಲಿ, ಶಿವ ಸೇನಾ 81ರಲ್ಲಿ ಎನ್‌ಸಿಪಿ 59 ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ಪಕ್ಷ 101, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ವೇಳೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 237 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಪಕ್ಷೇತರ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. 9.7 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 6101 ತೃತೀಯ ಲಿಂಗಿಗಳು, 6.41 ಲಕ್ಷ ಅಂಗವೈಕಲ್ಯ ಇರುವ ಮತದಾರರು ಇದ್ದಾರೆ. 1,00,186 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು 6 ಲಕ್ಷ ಸರ್ಕಾರಿ ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಮಹಾರಾಷ್ಟ್ರ ಎಕ್ಸಿಟ್‌ ಪೋಲ್‌ ಫಲಿತಾಂಶ ಯಾವಾಗ?; ಎಲ್ಲಿ ನೋಡಬಹುದು

ಮಹಾರಾಷ್ಟ್ರ ವಿಧಾಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಅಥವಾ ಮಹಾರಾಷ್ಟ್ರ ಎಕ್ಸಿಟ್ ಪೋಲ್ ಫಲಿತಾಂಶ ಇಂದು (ನವೆಂಬರ್ 20) ಮತದಾನ ಮುಗಿದ ಅರ್ಧ ಗಂಟೆ ಬಳಿಕ ಪ್ರಕಟವಾಗಲಿದೆ. ಸಂಜೆ 5 ಗಂಟೆ ಬಳಿಕ ಎಕ್ಸಿಟ್‌ ಪೋಲ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಲಿವೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶಗಳು ಸಂಜೆ 6.30ರ ನಂತರ ಪ್ರಕಟವಾಗಲಿದೆ.

ಮಹಾರಾಷ್ಟ್ರ ಎಕ್ಸಿಟ್‌ ಪೋಲ್ ಫಲಿತಾಂಶದ ನೇರ ಪ್ರಸಾರಗಳನ್ನು ವಿವಿಧ ಸುದ್ದಿ ವಾಹಿನಿಗಳಲ್ಲಿ ವೀಕ್ಷಿಸಬಹುದು.

1) ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಮಹಾರಾಷ್ಟ್ರ ಎಕ್ಸಿಟ್‌ ಪೋಲ್ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ - Election Exit Poll Live: ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಎಕ್ಸಿಟ್‌ ಪೋಲ್‌ ಫಲಿತಾಂಶಕ್ಕೆ ಕ್ಷಣಗಣನೆ, ಎಲ್ಲಿ ಯಾವಾಗ ಪ್ರಕಟ?

2) ಹಿಂದೂಸ್ತಾನ್ ಟೈಮ್ಸ್ ಕೂಡ ಮಹಾರಾಷ್ಟ್ರ ಚುನಾವಣೆಯ ಲೈವ್ ಅಪ್ಡೇಟ್ಸ್ ಅನ್ನು ಕೊಡುತ್ತಿದ್ದು ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ.

3) ಹಿಂದೂಸ್ತಾನ್ ಟೈಮ್ಸ್ ಬಳಗದ ದ ಲೈವ್ ಮಿಂಟ್‌ನಲ್ಲೂ ಮಹಾರಾಷ್ಟ್ರ ಚುನಾವಣೆಯ ಲೈವ್ ಅಪ್ಡೇಟ್ಸ್ ಅನ್ನು ನೀವು ಗಮನಿಸಬಹುದು. ಅದನ್ನು ನೋಡುವುದಕ್ಕಾಗಿ ನೀವು ಈ ಲಿಂಕ್ ಕ್ಲಿಕ್ ಮಾಡಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.