Maruti Swift Blitz: ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಬ್ಲಿಟ್ಜ್ ಬಿಡುಗಡೆ, ಹಬ್ಬದ ಅವಧಿಗೆ ಬಿಡುಗಡೆಯಾಯ್ತು ಕ್ಯೂಟ್ ಸ್ವಿಫ್ಟ್
Oct 23, 2024 05:51 PM IST
Maruti Swift Blitz: ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಬ್ಲಿಟ್ಜ್ ಬಿಡುಗಡೆ
- Maruti Swift Blitz: ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಸ್ವಿಫ್ಟ್ ಕಾರಿನ ಹೊಸ ಎಡಿಷನ್ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್‌ನ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್‌ನಲ್ಲಿ ಸಾಕಷ್ಟು ಹೊಸತನ ನೋಡಬಹುದು.
ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಭಾರತದ ರಸ್ತೆಗೆ ಹೊಸ ಸ್ವಿಫ್ಟ್ ಕಾರೊಂದು ಬಿಡುಗಡೆಯಾಗಿದೆ. ಇದು ಹಬ್ಬದ ಅವಧಿಯಲ್ಲಿ ಮಾರಾಟ ಹೆಚ್ಚಿಸುವ ಸಲುವಾಗಿ ಕಂಪನಿಯು ಸ್ವಿಫ್ಟ್ ಕಾರಿನ ಹೊಸ ವರ್ಷನ್ ಬಿಡುಗಡ ಮಾಡಿದೆ. ಹೊಸ ಸ್ವಿಫ್ಟ್ ಬ್ಲಿಡ್ಜ್ ಸ್ಪೆಷಲ್‌ಎಡಿಷನ್ ನೋಡಲು ಆಕರ್ಷಕವಾಗಿದೆ. ಕಂಪನಿಯು ಈಗಾಗಲೇ ಗ್ರಾಂಡ್ ವಿಟಾರ ಎಸ್‌ಯುವಿ ಮತ್ತು ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಎಡಿಷನ್‌ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ.
ಎಲ್ಲಾ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಆವೃತ್ತಿಯು ಖರೀದಿದಾರರಿಗೆ 39,500 ಮೌಲ್ಯದ ಪೂರಕ ಆಕ್ಸೆಸರಿ ಪ್ಯಾಕೇಜ್ ಅನ್ನು ನೀಡುತ್ತದೆ. ಈ ಪರಿಕರಗಳ ಪ್ಯಾಕೇಜ್ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ಅಂದ ಹೆಚ್ಚಲು ಮತ್ತು ಫೀಚರ್ ಹೆಚ್ಚಲು ನೆರವಾಗಿದೆ.
ಸ್ವಿಫ್ಟ್ ಬ್ಲಿಟ್ಜ್ ಎಕ್ಸ್‌ಟೀರಿಯರ್ ಹೇಗಿದೆ?
ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಆವೃತ್ತಿಯು ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಅಂದರೆ, ವಿಎಕ್ಸ್‌ಐ ಮತ್ತು ವಿಎಕ್ಸ್‌ಐ (ಒ) ವರ್ಷನ್‌ಗಳು ದೊರಕುತ್ತವೆ. ಸಾಮಾನ್ಯ ಸ್ವಿಫ್ಟ್ ಕಾರುಗಳಿಗೆ ಹೋಲಿಸಿದರೆ ಈ ಸ್ಪೆಷಲ್ ಎಡಿಷನ್‌ನಲ್ಲಿ ಲಭ್ಯವಿರುವ ಸ್ಟ್ಯಾಂಡರ್ಡ್ ಉಪಕರಣಗಳ ಹೊರತಾಗಿ ಹಲವು ಫೀಚರ್‌ಗಳನ್ನು ಹೊಂದಿದೆ. ವಿಶೇಷ ಆವೃತ್ತಿಯು ಗ್ರಿಲ್ ಗಾರ್ನಿಶ್, ಎಲ್‌ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಆಕ್ಸೆಸರಿ ಪ್ಯಾಕೇಜ್‌ನ ಅಡಿಯಲ್ಲಿ ಮುಂಭಾಗ, ಹಿಂಭಾಗ ಮತ್ತು ಸೈಡ್ ಪ್ರೊಫೈಲ್‌ಗಾಗಿ ಅಂಡರ್‌ಬಾಡಿ ಸ್ಪಾಯ್ಲರ್ ನೀಡಲಾಗಿದೆ. ಮಾರುತಿ ಸುಜುಕಿ ಬ್ಲಿಟ್ಜ್ ಆವೃತ್ತಿಯು ವಿಶೇಷ ಆವೃತ್ತಿಯ ಆಕ್ಸೆಸರಿ ಪ್ಯಾಕೇಜ್‌ನಲ್ಲಿ ಬಾಡಿ ಕ್ಲಾಡಿಂಗ್, ವಿಂಡೋ ಫ್ರೇಮ್ ಕಿಟ್, ಡೋರ್ ವೈಸರ್‌ಗಳು ಮತ್ತು ಕಪ್ಪು ರೂಫ್ ಸ್ಪಾಯ್ಲರ್ ಇತ್ಯಾದಿಗಳು ಇಲ್ಲಿವೆ.
ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಆವೃತ್ತಿ: ಇಂಟೀರಿಯರ್
ಕಾರಿನೊಳಗೆ ನೋಡಿದರೂ ಹಲವು ಹೊಸ ಅಂಶಗಳು ಕಾಣಿಸುತ್ತವೆ. ಮಾರುತಿ ಸುಜುಕಿ ಬ್ಲಿಟ್ಜ್ ಆವೃತ್ತಿಯು ವಿಶಿಷ್ಟ ಶೈಲಿಯ ಸೀಟ್ ಕವರ್‌ಗಳು ಮತ್ತು ಫ್ಲೋರ್ ಮ್ಯಾಟ್‌ಗಳನ್ನು ಹೊಂದಿದೆ. ಇದು ಇತರೆ ಸ್ವಿಫ್ಟ್ ಕಾರುಗಳಲ್ಲಿ ಇಲ್ಲ. ವಿಶೇಷ ಆವೃತ್ತಿಯ ಹ್ಯಾಚ್‌ಬ್ಯಾಕ್ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಆವೃತ್ತಿ: ಎಂಜಿನ್
ಹೊಸ ಸ್ವಿಫ್ಟ್ ಅಂದ ಚಂದದ ಬದಲಾವಣೆಗೆ ಸೀಮಿತ. ಎಂಜಿನ್‌ನಲ್ಲಿ ಏನೂ ಬದಲಾವಣೆ ಇಲ್ಲ. ಔಿಶೇಷ ಆವೃತ್ತಿಯ ಎಂಜಿನ್ ಹ್ಯಾಚ್‌ಬ್ಯಾಕ್‌ನ ಸಾಮಾನ್ಯ ಆವೃತ್ತಿಯಂತೆಯೇ ಇರುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಬ್ಲಿಟ್ಜ್ ಆವೃತ್ತಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಗರಿಷ್ಠ 82 ಬಿಎಚ್‌ಪಿ ಮತ್ತು 112 ಎನ್‌ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಐದು-ಸ್ಪೀಡ್‌ನ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಐದು-ಸ್ಪೀಡ್ ಎಎಂಟಿ ಗಿಯರ್ ಬಾಕ್ಸ್ ಹೊಂದಿದೆ.