Electric cars: ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಈ ಎಲೆಕ್ಟ್ರಿಕ್‌ ಕಾರುಗಳೇ ಬೆಸ್ಟ್‌; ಪೆಟ್ರೋಲ್‌ ದರ ಹೆಚ್ಚೋ ಚಿಂತೆಯೂ ಇಲ್ಲ!
ಕನ್ನಡ ಸುದ್ದಿ  /  ಜೀವನಶೈಲಿ  /  Electric Cars: ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಈ ಎಲೆಕ್ಟ್ರಿಕ್‌ ಕಾರುಗಳೇ ಬೆಸ್ಟ್‌; ಪೆಟ್ರೋಲ್‌ ದರ ಹೆಚ್ಚೋ ಚಿಂತೆಯೂ ಇಲ್ಲ!

Electric cars: ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಈ ಎಲೆಕ್ಟ್ರಿಕ್‌ ಕಾರುಗಳೇ ಬೆಸ್ಟ್‌; ಪೆಟ್ರೋಲ್‌ ದರ ಹೆಚ್ಚೋ ಚಿಂತೆಯೂ ಇಲ್ಲ!

Budget electric cars in India: ಪುಟ್ಟ ಕುಟುಂಬ ಪ್ರಯಾಣಕ್ಕೆ ಸೂಕ್ತವಾದ ಎಲೆಕ್ಟ್ರಿಕ್‌ ಕಾರು ಖರೀದಿಸಲು ಬಯಸುವಿರಾ? ಕಡಿಮೆ ದರದ, ಹೆಚ್ಚು ರೇಂಜ್‌ನ ಇವಿಗಳ ಪಟ್ಟಿ ಇಲ್ಲಿದೆ, ಪರಿಶೀಲಿಸಿ.

Electric cars: ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಈ ಎಲೆಕ್ಟ್ರಿಕ್‌ ಕಾರುಗಳೇ ಬೆಸ್ಟ್‌
Electric cars: ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಈ ಎಲೆಕ್ಟ್ರಿಕ್‌ ಕಾರುಗಳೇ ಬೆಸ್ಟ್‌

ರಸ್ತೆಯಲ್ಲಿ ಎಲೆಕ್ಟ್ರಿಕ್‌ ವಾಹಗನಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ್ದೀರ? ಮಹಾನಗರ ಮಾತ್ರವಲ್ಲದೆ, ಪಟ್ಟಣಗಳು, ಸಣ್ಣಪಟ್ಟಣಗಳಲ್ಲಿಯೂ ಚಾರ್ಜಿಂಗ್‌ ಸ್ಟೇಷನ್‌ಗಳು ಹೆಚ್ಚುತ್ತಿವೆ. ರಸ್ತೆಗಳು ಎಲೆಕ್ಟ್ರಿಕ್‌ ವಾಹನಮಯವಾಗುತ್ತ ಸಾಗುತ್ತಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಬೇಡಿಕೆಯ ಜೊತೆಗೆ, ಸ್ಪರ್ಧೆಯೂ ಹೆಚ್ಚುತ್ತಿದೆ. ಅದಕ್ಕಾಗಿಯೇ ಉತ್ತಮ ರೇಂಜ್‌ ನೀಡುವ ಇವಿಗಳು ಈಗ ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ, ಈ ಅಕ್ಟೋಬರ್ 2024ರಲ್ಲಿ ಭಾರತದಲ್ಲಿನ ಟಾಪ್ 4 ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಅತ್ಯುತ್ತಮ ಇವಿಗಳು (ಕಡಿಮೆ ದರದಲ್ಲಿ ಲಭ್ಯ)

ಎಂಜಿ ಕಾಮೆಟ್‌ ಇವಿ

ಇದು 17.3 ಕಿಲೋವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ 42 ಪಿಎಸ್ ಪವರ್ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಇವಿಯ ಒಂದು ಚಾರ್ಜ್ 230 ಕಿಲೋಮೀಟರ್ ರೇಂಜ್‌ ನೀಡುತ್ತದೆ. ಅಂದರೆ, ಒಂದು ಫುಲ್‌ ಚಾರ್ಜ್‌ಗೆ ಇಷ್ಟು ದೂರ ಕ್ರಮಿಸುತ್ತದೆ. 7.4KW ಚಾರ್ಜರ್‌ ಹೊಂದಿದೆ. ಇದರಲ್ಲಿ 3.5 ಗಂಟೆಗಳಲ್ಲಿ ಫುಲ್‌ ಚಾರ್ಜ್‌ ಮಾಡಬಹುದು. MG ಕಾಮೆಟ್ ಇವಿಯ ಸಣ್ಣ ಗಾತ್ರವು ನಗರ ಪ್ರಯಾಣಕ್ಕೆ ಉಪಯುಕ್ತವಾಗಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ತೊಂದರೆಗಳು ಕಡಿಮೆಯಾಗುತ್ತವೆ. ಎಂಜಿ ಕಾಮೆಟ್ ಇವಿ ಎಕ್ಸ್ ಶೋ ರೂಂ ಬೆಲೆ 6.99 ಲಕ್ಷದಿಂದ ರೂನಿಂದ 9.53 ಲಕ್ಷ ರೂಪಾಯಿವರೆಗಿದೆ.

ಟಾಟಾ ಟಿಯಾಗೊ ಇವಿ

ಟಿಯಾಗೊ ಇವಿ ಟಾಟಾ ಮೋಟಾರ್ಸ್ ಉತ್ತಮ ಮಾರಾಟ ಮತ್ತು ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಇದು ಎಂಟ್ರಿ ಲೆವೆಲ್‌ ಇವಿ ಆಗಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಅಂದರೆ, 19.2 KWH, 24 KWH ಬ್ಯಾಟರಿ ಆಯ್ಕೆಗಳಲ್ಲಿ ದೊರಕುತ್ತದೆ. ಅವುಗಳ ವ್ಯಾಪ್ತಿಯು ಕ್ರಮವಾಗಿ 250 ಕಿಮೀ ಮತ್ತು 315 ಕಿಮೀ ಇರುತ್ತದೆ. 7.2kWh ಚಾರ್ಜರ್‌ನೊಂದಿಗೆ ಮೊದಲ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಇದು ಕೇವಲ 2.6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಎರಡನೇ ಬ್ಯಾಟರಿಯನ್ನು ಚಾರ್ಜ್ ಮಾಡಲು 3.6 ಗಂಟೆ ತೆಗೆದುಕೊಳ್ಳುತ್ತದೆ. ಟಾಟಾ ಟಿಯಾಗೊ ಇವಿ ಎಕ್ಸ್‌ ಶೋರೂಂ ದರ 7.99 ಲಕ್ಷ ರೂ. 11.89 ಲಕ್ಷ ರೂಗಳ ನಡುವೆ ಇವೆ.

ಟಾಟಾ ಪಂಚ್ ಇವಿ

ಟಾಟಾ ಮೋಟಾರ್ಸ್‌ನ ಮತ್ತೊಂದು ಕೈಗೆಟುಕುವ ಮತ್ತು ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ವಾಹನವೆಂದರೆ ಟಾಟಾ ಪಂಚ್ ಇವಿ. ಇದು 25 ಕಿಲೋವ್ಯಾಟ್‌ ಮತ್ತು 35 ಕಿಲೋವ್ಯಾಟ್‌ ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. 7.2 ಕಿಲೋವ್ಯಾಟ್‌ ಚಾರ್ಜರ್‌ನೊಂದಿಗೆ ಅವುಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 3.6 ಗಂಟೆಗಳು ಮತ್ತು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಟಾಟಾ ಪಂಚ್ ಇವಿ ಶ್ರೇಣಿಯು ಕ್ರಮವಾಗಿ 315 ಕಿಮೀ ಮತ್ತು 421 ಕಿಮೀ. ಟಾಟಾ ಪಂಚ್ ಇವಿ ಎಕ್ಸ್ ಶೋ ರೂಂ ದರ 10.99 ಲಕ್ಷ ರೂ. ಮತ್ತು 15.49 ಲಕ್ಷ ರೂ ನಡುವೆ ಇದೆ.

ಸಿಟ್ರೊಯೆನ್‌ ಇಸಿ3 ಇವಿ

ಭಾರತದಲ್ಲಿ ಸಿಟ್ರೊಯೆನ್ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಇದು 29.2 ಕಿಲೋವ್ಯಾಟ್‌ ಬ್ಯಾಟರಿಯನ್ನು ಹೊಂದಿದೆ. ಇದು 57 ಪಿಎಸ್ ಪವರ್ ಮತ್ತು 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ 57 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದರ ವ್ಯಾಪ್ತಿ 320 ಕಿ.ಮೀ. ಇದೆ.

ಪೆಟ್ರೋಲ್‌, ಡೀಸೆಲ್‌ ದರ ದುಬಾರಿಯಾಗಿದೆ. ಎಲೆಕ್ಟ್ರಿಕ್‌ ವಾಹನವೇ ಉತ್ತಮ ಎಂದು ಬಯಸುವವರಿಗೆ, ವಿಶೇಷವಾಗಿ ಇರೋದ್ರಲ್ಲಿ ಕಡಿಮೆ ದರದ ಇವಿ ಖರೀದಿಸಲು ಬಯಸುವವರಿಗೆ ಇವು ಸೂಕ್ತವಾಗಿದೆ.

Whats_app_banner