Maruti Suzuki Swift: ಇಂದು ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಬಿಡುಗಡೆ; ಕಾರು ಪ್ರಿಯರ ಪ್ರಮುಖ ನಿರೀಕ್ಷೆಗಳು-automobile news maruti suzuki swift cng to launch today key expectations about new maruti car pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Maruti Suzuki Swift: ಇಂದು ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಬಿಡುಗಡೆ; ಕಾರು ಪ್ರಿಯರ ಪ್ರಮುಖ ನಿರೀಕ್ಷೆಗಳು

Maruti Suzuki Swift: ಇಂದು ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಬಿಡುಗಡೆ; ಕಾರು ಪ್ರಿಯರ ಪ್ರಮುಖ ನಿರೀಕ್ಷೆಗಳು

Maruti Suzuki Swift CNG: ಸೆಪ್ಟೆಂಬರ್‌ 12ರಂದು ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಆಗಮಿಸಲಿದೆ. ಇದರಲ್ಲಿ ಪರಿಷ್ಕೃತ 1.2 ಲೀಟರ್‌ ಎಂಜಿನ್‌ ಇರಲಿದೆ. ಇದರಿಂದ ಇಂಧನ ದಕ್ಷತೆ ಹೆಚ್ಚಾಗಲಿದೆ. ಪೆಟ್ರೋಲ್‌ ಆವೃತ್ತಿಗಳಿಗೆ ಹೋಲಿಸಿದರೆ 80,000-90,000 ರೂಪಾಯಿಯಷ್ಟು ದುಬಾರಿ ಇರುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ 12ರಂದು ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಆಗಮಿಸಲಿದೆ. ಇದರಲ್ಲಿ ಪರಿಷ್ಕೃತ 1.2 ಲೀಟರ್‌ ಎಂಜಿನ್‌ ಇರಲಿದೆ.
ಸೆಪ್ಟೆಂಬರ್‌ 12ರಂದು ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಆಗಮಿಸಲಿದೆ. ಇದರಲ್ಲಿ ಪರಿಷ್ಕೃತ 1.2 ಲೀಟರ್‌ ಎಂಜಿನ್‌ ಇರಲಿದೆ.

Maruti Suzuki Swift CNG: ಮಾರುತಿ ಸುಜುಕಿ ಕಂಪನಿಯು ಇಂದು ಹೊಸ ಸ್ವಿಫ್ಟ್‌ ಸಿಎನ್‌ಜಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹ್ಯಾಚ್‌ಬ್ಯಾಕ್‌ ಸದ್ಯ ಕೇವಲ ಪೆಟ್ರೋಲ್‌ ಎಂಜಿನ್‌ನಲ್ಲಿ ಲಭ್ಯ. ಇದೀಗ ಕಂಪನಿಯು ಸಿಎನ್‌ಜಿ ಆವೃತ್ತಿಯ ಸ್ವಿಫ್ಟ್‌ ಕಾರನ್ನು ಪರಿಚಯಿಸಲಿದೆ. ಇದು ಕಂಪನಿಯ ಕಾರು ಮಾರಾಟಕ್ಕೆ ಇನ್ನಷ್ಟು ನಂಬರ್‌ ಸೇರಿಸಲಿದೆ. ಈ ಸಂದರ್ಭದಲ್ಲಿ ಕಾರುಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಈ ಕಾರಲ್ಲಿ ಎಂಜಿನ್‌ನಲ್ಲಿ ಏನೆಲ್ಲ ಬದಲಾವಣೆಯಾಗಲಿದೆ. ದರ ವ್ಯತ್ಯಾಸ ಎಷ್ಟಿರಲಿದೆ? ಇತ್ಯಾದಿ ಪ್ರಶ್ನೆಗಳು ಇರಲಿವೆ.

ಮಾರುತಿ ಸ್ವಿಫ್ಟ್‌ ಸಿಎನ್‌ಜಿ ಎಂಜಿನ್‌ ಬದಲಾಗಲಿದೆಯೇ?

ಮಾರುತಿ ಸ್ವಿಫ್ಟ್‌ನ ಇತ್ತೀಚಿನ ಪೀಳಿಗೆಯ ಎಂಜಿನ್‌ ಹಲವಾರು ಬದಲಾವಣೆಗಳನ್ನು ಹೊಂದಿದೆ. ಹೊಸ 1.2-ಲೀಟರ್ ಮೂರು-ಸಿಲಿಂಡರ್ Z12E ಎಂಜಿನ್‌ ಹೊಂದಿದೆ. ಹಿಂದಿನ ಮಾದರಿಯ 1.2-ಲೀಟರ್ ಕೆ-ಸಿರೀಸ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ ಈ ಹೊಸ ಎಂಜಿನ್ ಅನ್ನು ಹೆಚ್ಚು ಇಂಧನ ದಕ್ಷತೆಯನ್ನು ಒದಗಿಸುವಂತೆ ವಿನ್ಯಾಸ ಮಾಡಲಾಗಿದೆ. ಮಾತ್ರವಲ್ಲದೆ, ಸಿಎನ್‌ಜಿ ರೂಪಾಂತರಕ್ಕಾಗಿ Z12E ಎಂಜಿನ್ ಅನ್ನು ಮಾರ್ಪಾಡಿಸಲಾಗುತ್ತದೆ. ಇದೇ ಎಂಜಿನ್‌ ಅನ್ನು ಮುಂದಿನ ದಿನಗಳಲ್ಲಿ ಇತರೆ ಮಾರುತಿ ಕಾರುಗಳಿಗೂ ಅಳವಡಿಸುವ ಸೂಚನೆಯಿದೆ.

ಮಾರುತಿ ಸ್ವಿಫ್ಟ್‌ ಸಿಎನ್‌ಜಿಯ ದರ ಎಷ್ಟಿರಬಹುದು?

ಮಾರುತಿ ಸುಜುಕಿ ಕಂಪನಿಯ ಮುಂಬರುವ ಸ್ವಿಫ್ಟ್‌ ಸಿಎನ್‌ಜಿ ದರವು ಪೆಟ್ರೋಲ್‌ ಆವೃತ್ತಿಗಳಿಗಿಂತ ಸುಮಾರು 80,000-90,000 ರಷ್ಟು ದುಬಾರಿಯಾಗಿರುವ ನಿರೀಕ್ಷೆಯಿದೆ. ಹ್ಯುಂಡೈ ಐ10 ನಿಯೋಸ್‌, ಹ್ಯುಂಡೈ ಎಕ್ಸ್‌ಟೆರ್‌ ಮತ್ತು ಟಾಟಾ ಪಂಚ್‌ ಜತೆ ಸ್ಪರ್ಧಿಸಲು ಕಂಪನಿಯು ಸ್ವಿಫ್ಟ್‌ ಸಿಎನ್‌ಜಿಯ ಹೈಯರ್‌ ಎಂಡ್‌ ಆವೃತ್ತಿಯನ್ನೂ ಪರಿಚಯಿಸುವ ಸೂಚನೆಯಿದೆ. ಟಾಟಾ ಮೋಟಾರ್ಸ್‌ ಮತ್ತು ಹ್ಯುಂಡೈ ಕಂಪನಿಯು ತಮ್ಮ ವಾಹನಗಳಿಗೆ ಟ್ವಿನ್‌ ಸಿಲಿಂಡರ್‌ ಸಿಎನ್‌ಜಿ ಕಿಟ್‌ ಅಳವಡಿಸಿವೆ. ಇದರಿಂದ ಸಿಎನ್‌ಜಿ ಮಾಡೆಲ್‌ಗಳಲ್ಲಿ ಲಗೇಜ್‌ ಸ್ಪೇಸ್‌ ಕಡಿಮೆಯಾಗುವುದು ತಪ್ಪುತ್ತದೆ. ಮಾರುತಿ ಸುಜುಕಿಯೂ ಇದೇ ರೀತಿಯ ಪ್ರಯತ್ನ ಮಾಡುವುದೇ ಕಾದುನೋಡಬೇಕಿದೆ.

ಮಾರುತಿ ಸುಜುಕಿ ಭಾರತೀಯ ಸಿಎನ್‌ಜಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಕಂಪನಿಯ ಒಟ್ಟು ಮಾರಾಟದಲ್ಲಿ ಸಿಎನ್‌ಜಿ ಮಾದರಿಯ ಪಾಲು ಶೇಕಡ 34 ರಷ್ಟಿದೆ. ಹೊಸ ಸ್ವಿಫ್ಟ್ ಸಿಎನ್‌ಜಿ ಆಗಮನದ ಮೂಲಕ ಮಾರುಕಟ್ಟೆಯಲ್ಲಿ ಕಂಪನಿಯ ಸಿಎನ್‌ಜಿ ಪಾಲು ಇನ್ನಷ್ಟು ಹೆಚ್ಚಲಿದೆ. ಕಂಪನಿಯು 2024 ರ ಆರ್ಥಿಕ ವರ್ಷದಲ್ಲಿ 450,000 ಯುನಿಟ್‌ ಸಿಎನ್‌ಜಿ ವಾಹನ ಮಾರಾಟ ಮಾಡಿತ್ತು. 2025 ರ ಆರ್ಥಿಕ ವರ್ಷದಲ್ಲಿ 600,000 ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

ಸದ್ಯ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಸಿಎನ್‌ಜಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಇಂಧನ ದರ ದುಬಾರಿಯಾಗುತ್ತಿರುವ ಸಮಯದಲ್ಲಿ ಸಿಎನ್‌ಜಿಯಂತಹ ಆಯ್ಕೆಗಳತ್ತ ಹೆಚ್ಚಿನ ಜನರು ಗಮನ ಹರಿಸುತ್ತಿದ್ದಾರೆ.

mysore-dasara_Entry_Point