logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bank Holidays: ಮಾರ್ಚ್‌ ತಿಂಗಳ ಈ ದಿನಗಳಲ್ಲಿ ಯಾವುದೇ ವ್ಯವಹಾರ ಬೇಡ; ಶಿವರಾತ್ರಿ, ಹೋಳಿ ಸೇರಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

Bank Holidays: ಮಾರ್ಚ್‌ ತಿಂಗಳ ಈ ದಿನಗಳಲ್ಲಿ ಯಾವುದೇ ವ್ಯವಹಾರ ಬೇಡ; ಶಿವರಾತ್ರಿ, ಹೋಳಿ ಸೇರಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

HT Kannada Desk HT Kannada

Feb 25, 2024 08:00 AM IST

google News

ಶಿವರಾತ್ರಿ, ಹೋಳಿ ಸೇರಿ ಮಾರ್ಚ್‌ನಲ್ಲಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

  • Bank Holidays: ಪ್ರತಿ ತಿಂಗಳು ಯಾವುದಾದರೊಂದು ಹಬ್ಬ ಅಥವಾ ಇನ್ನಿತರ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಫೆಬ್ರವರಿ ಕಳೆಯಲು ಇನ್ನು 5 ದಿನಗಳಿವೆ. ಮಾರ್ಚ್‌ನಲ್ಲಿ ಎಷ್ಟು ದಿನಗಳ ಕಾಲ ಬ್ಯಾಂಕ್‌ ರಜೆ ಇವೆ ನೋಡೋಣ. 

ಶಿವರಾತ್ರಿ, ಹೋಳಿ ಸೇರಿ ಮಾರ್ಚ್‌ನಲ್ಲಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ
ಶಿವರಾತ್ರಿ, ಹೋಳಿ ಸೇರಿ ಮಾರ್ಚ್‌ನಲ್ಲಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

Bank Holidays: ಕೆಲಸಕ್ಕೆ ಹೋಗುವವರು ಭಾನುವಾರ ಹೊರತುಪಡಿಸಿ ಯಾವುದಾದರೂ ಪಬ್ಲಿಕ್‌ ಹಾಲಿಡೆ ಸಿಕ್ಕರೆ ಸಾಕು ಎಂದು ಕಾಯುತ್ತಾರೆ. ಫೆಬ್ರವರಿ ಮುಗಿಯುತ್ತಾ ಬಂದಿದೆ. ಮಾರ್ಚ್‌ ಆರಂಭಕ್ಕೆ ವಾರವಷ್ಟೇ ಬಾಕಿ ಇದೆ. ಮುಂದಿನ ತಿಂಗಳಲ್ಲಿ ಎಷ್ಟೆಲ್ಲಾ ಬ್ಯಾಂಕ್‌ ರಜೆ ದಿನಗಳಿವೆ ಎಂಬುದನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಸುಮಾರು 14 ರಜಾ ದಿನಗಳಿವೆ. ಅವುಗಳಲ್ಲಿ ಸಾರ್ವಜನಿಕ ರಜಾ ದಿನಗಳು, ಕೆಲವು ಪ್ರಾದೇಶಿಕ ರಜಾ ದಿನಗಳು 2 ಮತ್ತು 4ನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿವೆ. ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ಗೆ ಅನುಗುಣವಾಗಿ ಆರ್‌ಬಿಐ ಮಾರ್ಚ್ 1, 8, 22, 25, 26, 27 ಮತ್ತು 29 ರ ರಜಾದಿನಗಳನ್ನು ನಿಗದಿಪಡಿಸಿದೆ. ಇದರ ಜೊತೆಗೆ ಮಾರ್ಚ್ 3, 10, 17, 24 ಮತ್ತು 31 ರಂದು ಐದು ಭಾನುವಾರಗಳಿವೆ. ಮಾರ್ಚ್ 9 ಮತ್ತು 23 ರಂದು ಎರಡನೇ ಮತ್ತು ನಾಲ್ಕನೇ ಶನಿವಾರಗಳಿವೆ.

ಚಾಪ್ಚಾರ್‌ ಕೂಟ್‌; ಮಾರ್ಚ್‌ 1 ರಂದು ಮಿಜೋರಂನಲ್ಲಿ ಚಾಪ್ಚಾರ್‌ ಕೂಟ್‌ ಆಚರಿಸಲಾಗುತ್ತಿದೆ. ಆದ್ದರಿಂದ ಬುಧವಾರ ಬ್ಯಾಂಕ್‌ಗಳಿಗೆ ರಜೆ ಇದೆ.

ಮಹಾ ಶಿವರಾತ್ರಿ; ಮಾರ್ಚ್‌ 8 ರಂದು ಮಹಾ ಶಿವರಾತ್ರಿ ಇದ್ದು ತ್ರಿಪುರಾ, ಮಿಜೋರಾಂ, ತಮಿಳುನಾಡು, ಸಿಕ್ಕಿಂ, ಅಸ್ಸಾಂ, ಮಣಿಪುರ, ಇಟಾನಗರ,

ರಾಜಸ್ಥಾನ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ, ನವದೆಹಲಿ, ಗೋವಾ, ಬಿಹಾರ ಮತ್ತು ಮೇಘಾಲಯದಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನು ಹೊರತುಪಡಿಸಿ ಮಾರ್ಚ್‌ 9-ಎರಡನೇ ಶನಿವಾರ, ಮಾರ್ಚ್‌ 22 - ಬಿಹಾರಿ ದಿವಸ್‌, ಮಾರ್ಚ್‌ 23-ತಿಂಗಳ ನಾಲ್ಕನೇ ಶನಿವಾರ, ಮಾರ್ಚ್‌ 25 ಹೋಳಿ ಇದೆ. ಈ ದಿನ ಕರ್ನಾಟಕ, ಒಡಿಶಾ, ತಮಿಳುನಾಡು, ಮಣಿಪುರ, ಕೇರಳ, ನಾಗಾಲ್ಯಾಂಡ್, ಬಿಹಾರ ಮತ್ತು ಶ್ರೀ ನಗರವನ್ನು ಹೊರತು ಪಡಿಸಿ ಹೋಳಿ, ಧುಲೇತಿ, ಡೋಲ್ ಜಾತ್ರೆ ಅಥವಾ ಧುಲಂಡಿಯ ಸಂದರ್ಭದಲ್ಲಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಮಾರ್ಚ್ 26: ಒಡಿಶಾ, ಮಣಿಪುರ ಮತ್ತು ಬಿಹಾರದಲ್ಲಿ ಯೋಸಾಂಗ್ 2ನೇ ದಿನವನ್ನು ಆಚರಿಸಲಾಗುತ್ತಿದೆ. ಹೋಳಿ ಸಂದರ್ಭದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ.

ಮಾರ್ಚ್ 27: ಹೋಳಿಯಂದು ಸರ್ಕಾರಿ ರಜೆ ಇದ್ದು ಆ ದಿನ ಕೂಡಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಮಾರ್ಚ್‌ 29 ರಂದು ಗುಡ್‌ ಫ್ರೈಡೇ ಇದ್ದು ಆ ದಿನ ತ್ರಿಪುರಾ, ಅಸ್ಸಾಂ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶವನ್ನು ಹೊರತು ಪಡಿಸಿ ಇತರೆಡೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ