logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯಗಳ ವಿವರ

ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯಗಳ ವಿವರ

Umesh Kumar S HT Kannada

Jul 20, 2024 07:19 PM IST

google News

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯಗಳ ವಿವರ ಈ ವರದಿಯಲ್ಲಿದೆ.

  • Budget 2024 Date and Time; ಕೇಂದ್ರ ಸರ್ಕಾರ 2024-25ರ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2024ರ ಮಂಡನೆ ದಿನಾಂಕ, ಸಮಯಗಳ ವಿವರ ಮತ್ತು ಇತರೆ ಅಂಶಗಳ ವರದಿ ಇಲ್ಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌  ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯಗಳ ವಿವರ ಈ ವರದಿಯಲ್ಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2024 ಮಂಡನೆ ದಿನಾಂಕ, ಸಮಯಗಳ ವಿವರ ಈ ವರದಿಯಲ್ಲಿದೆ.

ನವದೆಹಲಿ: ಕೇಂದ್ರ ಬಜೆಟ್ 2024-25ಕ್ಕೆ ದಿನಗಣನೆ ಶುರುವಾಗಿದೆ. ಸೋಮವಾರ (ಜುಲೈ 22) ಕೇಂದ್ರ ಬಜೆಟ್ ಅಧಿವೇಶನ ಶುರುವಾಗುತ್ತಿದ್ದು, ಮಂಗಳವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದರೊಂದಿಗೆ ಅವರು ಸತತ ಏಳನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ದಾಖಲೆ ಬರೆಯಲಿದ್ದಾರೆ. ಕೇಂದ್ರ ಬಜೆಟ್ ಅಧಿವೇಶನ ಆಗಸ್ಟ್ 12 ರಂದು ಮುಕ್ತಾಯವಾಗಲಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಅವಧಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ಬಾರಿ ಮೈತ್ರಿ ಸರ್ಕಾರ ರಚನೆಯಾಗಿದೆ. ಇದರ ಮೊದಲ ಅಧಿವೇಶನ ಜೂನ್ 25 ರಿಂದ ಜುಲೈ 4 ರ ತನಕ ನಡೆದಿತ್ತು. ಎರಡು ಅವಧಿಗೆ ಸ್ವತಂತ್ರ ಬಹುಮತ ಹೊಂದಿದ್ದ ಬಿಜೆಪಿ ಈ ಬಾರಿ ಮೈತ್ರಿ ಸರ್ಕಾರ ಮುನ್ನಡೆಸುತ್ತಿರುವ ಕಾರಣ ಈ ಸಲದ ಬಜೆಟ್‌ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಇದರೊಂದಿಗೆ ಬಜೆಟ್ ಅಧಿವೇಶನ ಶುರುವಾಗಲಿದೆ. ಅವರು 18ನೇ ಲೋಕಸಭೆಯ ಮೊದಲ ಅಧಿವೇಶನದ ವೇಳೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಐತಿಹಾಸಕ ಭಾಷಣ ಮಾಡುತ್ತ, ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ನಿರ್ಧಾರಗಳು ಬಜೆಟ್‌ನ ಪ್ರಮುಖ ಅಂಶಗಳಾಗಲಿವೆ ಎಂದು ಹೇಳಿದ್ದರು. ಇದಕ್ಕೂ ಮುನ್ನ ಅಂದರೆ ಏಪ್ರಿಲ್-ಜೂನ್‌ನಲ್ಲಿ ನಡೆದ ಲೋಕಸಭೆ ಚುನಾವಣೆಗೆ ಮೊದಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿತ್ತು.

ಕೇಂದ್ರ ಬಜೆಟ್ 2024 -25 ದಿನಾಂಕ ಮತ್ತು ಸಮಯ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಬೆಳಗ್ಗೆ 11 ಗಂಟೆ ಲೋಕಸಭೆಯಲ್ಲಿ 2024-25ರ ಕೇಂದ್ರ ಬಜೆಟ್ (Union Budget for 2024-25) ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಮಂಡಿಸುತ್ತಿರುವ ಏಳನೇ ಬಜೆಟ್ ಇದಾಗಿದೆ. ಸತತವಾಗಿ ಮಂಡಿಸುತ್ತಿರುವ ಏಳನೇ ಬಜೆಟ್ ಕೂಡ ಹೌದು.

ನಿರ್ಮಲಾ ಸೀತಾರಾಮನ್ ಅವರು 2020 ರಲ್ಲಿ 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಧ್ಯಂತರ ಬಜೆಟ್ ಅನ್ನು 56 ನಿಮಿಷಗಳಲ್ಲಿ ಮಂಡಿಸಿದ್ದರು. ಇದು ಕನಿಷ್ಠ ಸಮಯದ ಬಜೆಟ್ ಭಾಷಣವಾಗಿತ್ತು.

ನಿರ್ಮಲಾ ಅವರು 2019 ರಲ್ಲಿ, ಸಾಂಪ್ರದಾಯಿಕ ಬಜೆಟ್ ಬ್ರೀಫ್‌ಕೇಸ್ ಬಿಟ್ಟು ಟ್ಯಾಬ್ಲೆಟ್ ಭಾಷಣ (ಡಿಜಿಟಲ್‌ ಬಜೆಟ್‌ ಪ್ರತಿ) ಮತ್ತು ಇತರ ದಾಖಲೆಗಳನ್ನು ಸಾಗಿಸಲು ರಾಷ್ಟ್ರೀಯ ಲಾಂಛನ ಇರುವ ‘ಬಹಿ-ಖಾತಾ’ವನ್ನು ಲೋಕಸಭೆಗೆ ತಂದಿದ್ದರು. ಇದರೊಂದಿಗೆ ಹೊಸ ಸಂಪ್ರದಾಯ ಶುರುಮಾಡಿದ್ದರು.

ಮೊರಾರ್ಜಿ ದೇಸಾಯಿ ಬಜೆಟ್ ಮಂಡನೆ ದಾಖಲೆ ಈ ಅವಧಿಯಲ್ಲಿ ಮುರಿಯುವ ಸಾಧ್ಯತೆ

ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿ 1959-1964ರ ನಡುವೆ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದರು. ಅವರು ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಕೇಂದ್ರ ಹಣಕಾಸು ಸಚಿವರೆಂಬ ಗರಿಮೆ ಕೂಡ ಅವರದ್ದೇ ಆಗಿದೆ. ಈಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಸಚಿವರಾಗಿ ಮುಂದುವರಿದಿದ್ದಾರೆ. ಹೀಗಾಗಿ ಈ ದಾಖಲೆಯೂ ಮುರಿಯುವ ಸಾಧ್ಯತೆ ಇದೆ.

ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಅರುಣ್ ಜೇಟ್ಲಿ ಅವರು 2014ರಲ್ಲಿ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು. 2014-15 ರಿಂದ 2018-19 ರವರೆಗೆ ಸತತ ಐದು ಬಜೆಟ್ ಗಳನ್ನು ಮಂಡಿಸಿದರು. ಆದರೆ, ಕೊನೆಯಲ್ಲಿ ಅಂದರೆ, 2019-20ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಪಿಯೂಷ್ ಗೋಯಲ್ ಅವರು 2019ರ ಫೆಬ್ರವರಿ 1 ರಂದು ಮಂಡಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ