logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ ಹಿನ್ನೋಟ : ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್; ನೀವು ತಿಳಿದಿರಬೇಕಾದ 10 ಅಂಶಗಳು

ಕೇಂದ್ರ ಬಜೆಟ್ ಹಿನ್ನೋಟ : ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್; ನೀವು ತಿಳಿದಿರಬೇಕಾದ 10 ಅಂಶಗಳು

Umesh Kumar S HT Kannada

Jan 31, 2024 04:05 PM IST

google News

ಕೇಂದ್ರ ಬಜೆಟ್ ಹಿನ್ನೋಟ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) ಮಂಡಿಸುವ ಬಜೆಟ್ ಮಧ್ಯಂತರ ಬಜೆಟ್‌. ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್ ಆಗಿತ್ತು. (ಕಡತ ಚಿತ್ರ)

  • ಕೇಂದ್ರ ಬಜೆಟ್ ಹಿನ್ನೋಟ: ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್ ಆಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ (ಫೆ.1) ಮಂಡಿಸುವ ಕೇಂದ್ರ ಬಜೆಟ್ 2024 ಕೂಡ ಮಧ್ಯಂತರ ಬಜೆಟ್ ಎಂಬುದು ವಿಶೇಷ. ಭಾರತದ ಮೊದಲ ಬಜೆಟ್ ಕುರಿತು ನೀವು ತಿಳಿದಿರಬೇಕಾದ 10 ಅಂಶಗಳು.

ಕೇಂದ್ರ ಬಜೆಟ್ ಹಿನ್ನೋಟ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) ಮಂಡಿಸುವ ಬಜೆಟ್ ಮಧ್ಯಂತರ ಬಜೆಟ್‌. ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್ ಆಗಿತ್ತು. (ಕಡತ ಚಿತ್ರ)
ಕೇಂದ್ರ ಬಜೆಟ್ ಹಿನ್ನೋಟ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) ಮಂಡಿಸುವ ಬಜೆಟ್ ಮಧ್ಯಂತರ ಬಜೆಟ್‌. ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್ ಆಗಿತ್ತು. (ಕಡತ ಚಿತ್ರ) (PTI)

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) ಸಂಸತ್ತಿನಲ್ಲಿ 2024ರ ಬಜೆಟ್ ಮಂಡಿಸಲಿದ್ದಾರೆ. ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಈ ವರ್ಷದ ವಾರ್ಷಿಕ ಹಣಕಾಸು ಹೇಳಿಕೆ ಸ್ವಲ್ಪ ಭಿನ್ನವಾಗಿದೆ.

ಕೇಂದ್ರ ಸರ್ಕಾರ ಈವರೆಗೆ, 77 ನಿಯತ ಬಜೆಟ್‌ಗಳನ್ನು ಮತ್ತು 14 ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದೆ. ಒಟ್ಟಾರೆಯಾಗಿ, ಇಲ್ಲಿಯವರೆಗೆ 91 ಕೇಂದ್ರ ಬಜೆಟ್‌ಗಳು ಸಂಸತ್ತಿನಲ್ಲಿ ಮಂಡನೆಯಾಗಿದೆ. ಈ ವರ್ಷ ಮಂಡನೆಯಾಗುತ್ತಿರುವುದು 92 ನೇ ಬಜೆಟ್.

ಭಾರತದ ಮೊದಲ ಮಧ್ಯಂತರ ಬಜೆಟ್ ಯಾವುದು ಎಂದರೆ ಅದು ದೇಶದ ಮೊದಲ ಬಜೆಟ್‌ ಕೂಡ ಹೌದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಮೂರು ತಿಂಗಳ ಬಳಿಕ ಮಂಡನೆಯಾದ ಬಜೆಟ್ ಇದು. ಚುನಾವಣೆಗಳು ನಡೆದಿರಲಿಲ್ಲ. ಹಂಗಾಮಿ ಸರ್ಕಾರ ಇತ್ತು.

ಇತ್ತೀಚಿನ ವರ್ಷಗಳಲ್ಲಿ ಮಧ್ಯಂತರ ಬಜೆಟ್ ಎಂದರೆ, ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವಾಗ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಜೂನ್ ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈನಲ್ಲಿ ಹೊಸದಾಗಿ ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗುವುದು ವಾಡಿಕೆ.

ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು 1947 ರಲ್ಲಿ ಅಂದಿನ ವಿತ್ತ ಸಚಿವ ಆರ್‌ಕೆ ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ತಕ್ಷಣ ದೇಶದ ಅರ್ಥ ವ್ಯವಸ್ಥೆ ಭಾರಿ ಸಂಕಷ್ಟದಲ್ಲಿತ್ತು.

ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್‌; ನೀವು ತಿಳಿದುಕೊಳ್ಳಬೇಕಾದ 10 ಅಂಶಗಳು

1) ಮೊದಲ ಬಜೆಟ್ ಅನ್ನು 1860 ರಲ್ಲಿ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಮಂಡಿಸಿದರು. ಅಂದು ಅವರು ಆದಾಯ ತೆರಿಗೆ ಸಂಗ್ರಹವನ್ನು ಪರಿಚಯಿಸಿದರು.

2) ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು 1946ರ ನವೆಂಬರ್ 26 ರಂದು ಮಂಡಿಸಿದರು.

3) ಭಾರತದ ಮೊದಲ ಬಜೆಟ್ ಕೂಡ ಈ ವರ್ಷದಂತೆ ಮಧ್ಯಂತರ ಬಜೆಟ್ ಆಗಿತ್ತು.

4) ಅಂದಿನ ವಿತ್ತ ಸಚಿವ ಷಣ್ಮುಖಂ ಚೆಟ್ಟಿ 1892 ರಲ್ಲಿ ಕೊಯಮತ್ತೂರಿನ ವ್ಯಾಪಾರ ಕುಟುಂಬದಲ್ಲಿ ಜನಿಸಿದರು. ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಮದ್ರಾಸ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು, ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ರಾಜಕೀಯಕ್ಕೆ ಪ್ರವೇಶಿಸಿದರು.

5) ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದ ಮೊದಲ ಹಣಕಾಸು ಸಚಿವರನ್ನಾಗಿ ಷಣ್ಮುಖಂ ಚೆಟ್ಟಿ ಅವರನ್ನು ನೇಮಕ ಮಾಡಿದ್ದರು.

6) ಷಣ್ಮುಖಂ ಚೆಟ್ಟಿ ಅವರು 1946ರ ನವೆಂಬರ್ 26 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು. ಅಂದು ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಆಗಿತ್ತು. ಈಗ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗುತ್ತದೆ.

7) ಷಣ್ಮುಖಂ ಚೆಟ್ಟಿ ತಮ್ಮ ಭಾಷಣದಲ್ಲಿ, "ನಾನು ಸ್ವತಂತ್ರ ಮತ್ತು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಲು ನಿಂತಿದ್ದೇನೆ.. ಈ ಸಂದರ್ಭವನ್ನು ಐತಿಹಾಸಿಕ ಸಂದರ್ಭವೆಂದು ಪರಿಗಣಿಸಬಹುದು. ಮತ್ತು ಈ ಬಜೆಟ್ ಅನ್ನು ಮಂಡಿಸಲು ಹಣಕಾಸು ಸಚಿವನಾಗಿ ನನಗೆ ಸಿಕ್ಕಿದ ಸೌಭಾಗ್ಯವೆಂದು ಪರಿಗಣಿಸುತ್ತೇನೆ" ಎಂದು ಹೇಳಿದರು.

8) "ಸಮುದಾಯದ ಕೈಯಲ್ಲಿ ಹೆಚ್ಚುವರಿ ಖರೀದಿ ಶಕ್ತಿಯ ಶೇಖರಣೆ ಮತ್ತು ಕೈಗಾರಿಕಾ ಮತ್ತು ಕೃಷಿ ಎರಡರಲ್ಲೂ ಉತ್ಪಾದನೆಯಲ್ಲಿ ಸರ್ವಾಂಗೀಣ ಕುಸಿತ" ದಿಂದಾಗಿ ಬೆಲೆ ಏರಿಕೆಯ ಬಗ್ಗೆ ಷಣ್ಮುಖಂ ಚೆಟ್ಟಿ ಕಳವಳ ವ್ಯಕ್ತಪಡಿಸಿದರು.

9) ಆ ಕಾಲಘಟ್ಟದಲ್ಲಿ ಏಳೂವರೆ ವರ್ಷಗಳ ಕಾಲ ಆಹಾರ ಧಾನ್ಯದ ಕೊರತೆ, ಹೆಚ್ಚಿದ ಆಮದುಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರ ಸೇರಿ ದೇಶದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಈ ಬಜೆಟ್ ಅನ್ನು ಮಂಡಿಸಲಾಯಿತು.

10) ಭಾರತದ ಮೊದಲ ಬಜೆಟ್ 171.15 ಕೋಟಿ ರೂ.ಗಳ ಬಜೆಟ್ ಆದಾಯದ ಗುರಿಯನ್ನು ಹೊಂದಿತ್ತು. ಇದಲ್ಲದೆ, ಆ ವರ್ಷದ ಒಟ್ಟು ವೆಚ್ಚವನ್ನು 197.29 ಕೋಟಿ ರೂ ಎಂದು ಅಂದಾಜಿಸಲಾಗಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ