logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಸ್ಥಿರ, ನಿನ್ನೆಯ ದರದಲ್ಲಿಯೇ ಚಿನ್ನಾಭರಣ ಖರೀದಿಸುವ ಅವಕಾಶ

Gold Price: ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಸ್ಥಿರ, ನಿನ್ನೆಯ ದರದಲ್ಲಿಯೇ ಚಿನ್ನಾಭರಣ ಖರೀದಿಸುವ ಅವಕಾಶ

HT Kannada Desk HT Kannada

Sep 13, 2023 06:00 AM IST

google News

Gold Price: ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಸ್ಥಿರ

    • Gold Price Today: ಚಿನಿವಾರ ಪೇಟೆಯ ಇಂದು ಬೆಳಗ್ಗಿನ ಅಪ್‌ಡೇಟ್‌ ಪ್ರಕಾರ ಕರ್ನಾಟಕದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ ಸ್ಥಿರವಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,484 ರೂಪಾಯಿ ಇದೆ. ಅಪರಂಜಿ ಚಿನ್ನದ ದರ ಗ್ರಾಂಗೆ 54,840 ರೂ. ಇದೆ.
Gold Price: ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಸ್ಥಿರ
Gold Price: ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಸ್ಥಿರ

ಬೆಂಗಳೂರು: ಗೌರಿ ಹಬ್ಬದ ಸಮಯದಲ್ಲಿ ಚಿನ್ನಾಭರಣ ಖರೀದಿಸಬೇಕೆಂದುಕೊಳ್ಳುವವರು ಈಗ ಚಿನಿವಾರ ಪೇಟೆಗೆ ಹೋಗಬಹುದು. ಕರ್ನಾಟಕದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆ ಕಂಡಿಲ್ಲ. ನಿನ್ನೆಯ ದರದಲ್ಲಿಯೇ ಖರೀದಿಸಬಹುದು. ಕಳೆದ ಒಂದೆರಡು ದಿನದ ಹಿಂದೆ ಸತತವಾಗಿ ಚಿನ್ನದ ದರ ಏರಿಕೆ ಕಾಣುತ್ತಿತ್ತು. ಇದೀಗ ಮತ್ತೆ ಜಾಗತಿಕ ಮಾರುಕಟ್ಟೆಯ ಡಾಲರ್‌, ಜಾಗತಿಕ ಆರ್ಥಿಕ ಪರಿಸ್ಥಿತಿ ಇತ್ಯಾದಿಗಳಿಂದ ಚಿನ್ನದ ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಳಿತವಾಗುತ್ತಿಲ್ಲ. ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,484 ರೂ ಇದೆ. 8 ಗ್ರಾಂ ಚಿನ್ನದ ಬೆಲೆ 43,872 ರೂ ಆಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,840 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,48,400 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,983 ರೂ. ಇದೆ.8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,864 ರೂ. ನೀಡಬೇಕಾಗುತ್ತದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,830 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,98,300 ರೂ. ನೀಡಬೇಕು.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,840 ರೂ. ಇದೆ. ಮಂಗಳೂರು 54,840 ರೂ., ಮೈಸೂರಿನಲ್ಲಿ 54,840 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,150 ರೂ., ಮುಂಬೈನಲ್ಲಿ 54,840 ರೂ., ದೆಹಲಿಯಲ್ಲಿ 54,990 ರೂ., ಕೋಲ್ಕತಾದಲ್ಲಿ 54,840 ರೂ., ಹೈದರಾಬಾದ್‌ 54,840 ರೂ., ಕೇರಳ 54,840 ರೂ., ಪುಣೆ 54,840 ರೂ., ಅಹಮದಾಬಾದ್‌ 54,840 ರೂ., ಜೈಪುರ 54,990 ರೂ., ಲಖನೌ 54,990 ರೂ., ಕೊಯಮುತ್ತೂರು 55,150 ರೂ., ಮಧುರೈ 55,150 ರೂ. ಹಾಗೂ ವಿಜಯವಾಡ 54,840 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,830 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,160 ರೂ., ಮುಂಬೈನಲ್ಲಿ 59,830 ರೂ., ದೆಹಲಿಯಲ್ಲಿ 59,990 ರೂ., ಕೋಲ್ಕತಾದಲ್ಲಿ 59,830 ರೂ., ಹೈದರಾಬಾದ್‌ 59,830 ರೂ., ಕೇರಳ 59,830 ರೂ., ಪುಣೆ 59,830 ರೂ., ಅಹಮದಾಬಾದ್‌ 59,880 ರೂ., ಜೈಪುರ 59,990 ರೂ., ಲಖನೌ 59,990 ರೂ., ಕೊಯಮುತ್ತೂರು 60,160 ರೂ., ಮದುರೈ 60,160, ವಿಜಯವಾಡ 59,830 ರೂ. ಇದೆ.

ಬೆಳ್ಳಿ ದರ ಎಷ್ಟು?

ಒಂದು ಗ್ರಾಂ ಬೆಳ್ಳಿಗೆ 74 ರೂ., 8 ಗ್ರಾಂ ಬೆಳ್ಳಿಗೆ 592 ರೂ., 10 ಗ್ರಾಂ ಬೆಳ್ಳಿ ದರ 740 ರೂ., 100 ಗ್ರಾಂ ಬೆಳ್ಳಿಗೆ 7,400 ಮತ್ತು 1 ಕೆ.ಜಿ. ಬೆಳ್ಳಿ ದರ 74,000 ರೂಪಾಯಿ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ