Gold Rate Today: ವಾರದ ಬಳಿಕ ಅಲ್ಪ ಇಳಿಕೆ ಕಂಡ ಬಂಗಾರ ಬೆಲೆ; ಆಭರಣ ಖರೀದಿಗೆ ಸುದಿನ, ಏರುಗತಿಯಲ್ಲಿ ಬೆಳ್ಳಿ ದರ
Aug 21, 2024 06:37 AM IST
ಚಿನ್ನಾಭರಣದ ಬೆಲೆ
- Summary: ಒಂದು ವಾರದಿಂದ ಚಿನ್ನದ ಬೆಲೆ ಇಳಿಕೆಯಾಗಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇಂದು ಶುಭಸುದ್ದಿ ಸಿಕ್ಕಿದೆ. ಬಂಗಾರ ದರದಲ್ಲಿ ಅಲ್ಪ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆ ಮಾತ್ರ ಮತ್ತೆ ಬಾನೆತ್ತರಕ್ಕೆ ಮುಖಮಾಡಿದೆ. ಆಗಸ್ಟ್ 21ರ ಬುಧವಾರ ಚಿನ್ನ-ಬೆಳ್ಳಿ ಧಾರಣೆ ಹೇಗಿದೆ ನೋಡೋಣ ಬನ್ನಿ.
ಕಳೆದೆರಡು ದಿನಗಳಿಂದ ಸ್ಥಿರತೆ ಕಂಡುಕೊಂಡಿದ್ದ ಬಂಗಾರದ ಬೆಲೆ (Gold Price Today), ಆಗಸ್ಟ್ 21ರ ಬುಧವಾರವಾದ ಇದು ಅಲ್ಪ ಇಳಿಕೆ ಕಂಡಿದೆ. 6 ದಿನಗಳ ನಂತರ ಇದೇ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿ ತಂದಿದೆ. ಹಳದಿ ಲೋಹದ ಬೆಲೆ ಅಲ್ಪ ಇಳಿಕೆ ಕಂಡರೂ, ಬೆಳ್ಳಿ ಬೆಲೆಯು (Silver Price Today) ಏರುಗತಿಯಲ್ಲಿ ಸಾಗುತ್ತಿದೆ. ಆಗಸ್ಟ್ 16 ಹಾಗೂ 17ರಂದು ಸತತ ಏರಿಕೆ ಕಂಡಿದ್ದ ಬೆಳ್ಳಿ, 18ರಂದು ಕೆಜಿಯಲ್ಲಿ 3,000 ರೂಪಾಯಿ ಇಳಿಕೆ ಕಂಡಿತ್ತು. ಆ ಬಳಿಕ ಸತತ ಎರಡು ದಿನಗಳ ಕಾಲ ಸ್ಥಿರತೆ ಕಂಡಿದ್ದ ಬೆಲೆ ಮತ್ತೆ ಏರಿಕೆಯಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು, ಬಂದರು ನಗರಿ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್‌ನ 1 ಗ್ರಾಮ್ ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆಯಾಗಿದ್ದು, ಪ್ರತಿ ಗ್ರಾಮ್‌ಗೆ 6660ರಲ್ಲಿ ಬೆಲೆ ನಿಂತಿದೆ. ಕಳೆದ ದಿನ ಈ ಬೆಲೆ 6670 ರೂ ಆಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 100 ರೂಪಾಯಿ ಇಳಿಕೆಯಾಗಿ 66,600 ರೂಪಾಯಿ ಆಗಿದೆ. ಇದೇ ವೇಳೆ 24 ಕ್ಯಾರೆಟ್‌ನ 1 ಗ್ರಾಮ್ ಚಿನ್ನದ ಬೆಲೆಯಲ್ಲಿ 12 ರೂಪಾಯಿ ಕುಸಿದಿದ್ದು, 7265 ರೂಪಾಯಿಗೆ ಬಂದು ನಿಂತಿದೆ.
ಪ್ರತಿ ಗ್ರಾಮ್ ಬೆಳ್ಳಿ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಖರೀದಿಸಲು ಬರೋಬ್ಬರಿ 86,000 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಂದರೆ, ಪ್ರತಿ ಕೆಜಿ ಬೆಳ್ಳಿಯಲ್ಲಿ 3000 ರೂಪಾಯಿ ಏರಿಕೆಯಾಗಿದೆ.
ಪ್ರಮುಖ ನಗರಗಳ ಬಂಗಾರದ ಬೆಲೆಯನ್ನು ನೋಡುವುದಾದರೆ, ಬಹುತೇಕ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಲೆಯಲ್ಲಿ ಸ್ಥಿರತೆ ಮತ್ತು ಏಕರೂಪತೆ ಇದೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಂದಿನಂತೆ ಬೆಲೆ ಹೆಚ್ಚಿದೆ. ಇತರ ಪ್ರಮುಖ ನಗರಗಳಿಗಿಂತ ದೆಹಲಿಯಲ್ಲಿ ಹತ್ತು ಗ್ರಾಮ್ ಚಿನ್ನಕ್ಕೆ ಹೆಚ್ಚುವರಿ 150 ರೂಪಾಯಿ ಕೊಡಬೇಕಾಗುತ್ತದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ದರ (22 ಕ್ಯಾರೆಟ್)
ಬೆಂಗಳೂರು- 66,600 ರೂಪಾಯಿ.
ಮಂಗಳೂರು- 66,600 ರೂಪಾಯಿ.
ಮೈಸೂರು- 66,600 ರೂಪಾಯಿ.
ಚೆನ್ನೈ- 66,600 ರೂಪಾಯಿ.
ಮುಂಬೈ- 66,600 ರೂಪಾಯಿ.
ದೆಹಲಿ- 66,750 ರೂಪಾಯಿ.
ಕೋಲ್ಕತ್ತಾ- 66,600 ರೂಪಾಯಿ.
ಹೈದರಾಬಾದ್- 66,600 ರೂಪಾಯಿ.
ಕೇರಳ - 66,600 ರೂಪಾಯಿ.
ವಾರದ ಬಳಿಕ ಮೊದಲ ಬಾರಿಗೆ ಇಳಿಕೆ
ಕಳೆದ 6 ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದ್ದು ಇದೇ ಮೊದಲು. ಇದಕ್ಕೂ ಹಿಂದೆ ಆಗಸ್ಟ್ 14ರಂದು ಪ್ರತಿ ಗ್ರಾಂನಲ್ಲಿ 10 ರೂಪಾಯಿ ಇಳಿಕೆಯಾಗಿತ್ತು. ಅದಾದ ನಂತರ ಆಗಸ್ಟ್ 17ರಂದು ಏಕಾಏಕಿ ಒಂದೇ ದಿನದಲ್ಲಿ 105 ರೂಪಾಯಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಬೇಸರ ಮೂಡಿಸಿತ್ತು. ಸದ್ಯ ಇಂದು ಅಲ್ಪ ಇಳಿಕೆ ಕಂಡರೂ, ಬಂಗಾರ ಖರೀದಿಸಲು ಯೋಚಿಸುತ್ತಿರುವವರಿಗೆ ಸ್ವಲ್ಪ ಖುಷಿ ತಂದಿದೆ.