logo
ಕನ್ನಡ ಸುದ್ದಿ  /  Nation And-world  /  Business News Share Market Opening Bell June 6 Open Flats Bse Nse Sensex Stock Exchange News In Kannada Pcp

Opening Bell: ಭಾರತೀಯ ಷೇರುಪೇಟೆಗಿಂದು ಆಲಸ್ಯದ ಆರಂಭ, ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ

Praveen Chandra B HT Kannada

Jun 06, 2023 09:13 AM IST

Opening Bell: ಭಾರತೀಯ ಷೇರುಪೇಟೆಗಿಂದು ಆಲಸ್ಯದ ಆರಂಭ, ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ

  • Stock Market News: ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ಹೆಚ್ಚು ಲಾಭ ತರಬಹುದಾದ ಸಣ್ಣ ಮತ್ತು ಮಧ್ಯಮ ಷೇರುಗಳತ್ತ ಕಣ್ಣಿಟ್ಟಿದ್ದಾರೆ. ಭಾರತದ ಷೇರುಪೇಟೆ ಫ್ಲಾಟ್‌ ಆರಂಭಕ್ಕೆ ಕಾರಣಗಳು ಹಲವು ಇವೆ. ಇದೇ ಸಮಯದಲ್ಲಿ ಇಂದು ಖರೀದಿಸಬಹುದಾದ ಷೇರುಗಳ ವಿವರವೂ ಇಲ್ಲಿದೆ.

Opening Bell: ಭಾರತೀಯ ಷೇರುಪೇಟೆಗಿಂದು ಆಲಸ್ಯದ ಆರಂಭ, ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ
Opening Bell: ಭಾರತೀಯ ಷೇರುಪೇಟೆಗಿಂದು ಆಲಸ್ಯದ ಆರಂಭ, ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ (MINT_PRINT)

ಬೆಂಗಳೂರು: ಕಳೆದ ಎರಡು ಅವಧಿಯಲ್ಲಿ ಏರಿಕೆ ದಾಖಲಿಸಿದ್ದ ಭಾರತೀಯ ಷೇರುಪೇಟೆ ಇಂದು ಮೌನದ ಮುಖವಾಡ ಧರಿಸುವ ಸಾಧ್ಯತೆಯಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಸರಕಾರವು ತನ್ನ ನೀತಿನಿರೂಪಣಾ ಸಭೆಯನ್ನು ಮುಂದಿನ ವಾರ ನಡೆಸಲಿರುವುದು ಈ ಆಲಸ್ಯದ ಆರಂಭಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ.

ಟ್ರೆಂಡಿಂಗ್​ ಸುದ್ದಿ

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇಂದು ಬೆಳಗ್ಗೆ 8:14 ಗಂಟೆಗೆ ಭಾರತೀಯ ರಾಷ್ಟ್ರೀಯ ಷೇರುಪೇಟೆಯ ಫ್ಯೂಚರ್‌ ಸಿಂಗಾಪುರ ಷೇರುಪೇಟೆಯಲ್ಲಿ ಶೇಕಡ 0.8 ಇಳಿಕೆ ಕಂಡು 18,709.50ಕ್ಕೆ ಸೆಟಲ್‌ ಆಗಿದೆ. ಶುಕ್ರವಾರ ಮಂದಗತಿಯ ವಾರದ ವಹಿವಾಟಿಗೆ ಸಾಕ್ಷಿಯಾಗಿದ್ದ ವಾಲ್‌ ಸ್ಟ್ರೀಟ್‌ ಈಕ್ವಿಟಿಯು ನಿನ್ನೆ ಇಳಿಮುಖವಾಗಿದೆ.

ವೇತನ ಪ್ರಗತಿಯ ನಿಧಾನಗತಿ, ನಿರುದ್ಯೋಗ ದರವು 53 ವರ್ಷಗಳ ಕನಿಷ್ಠ ಮಟ್ಟಕ್ಕೆ ಏರಿರುವುದು ಮತ್ತು ಫೆಡರಲ್‌ ಸರಕಾರ ಜೂನ್‌ 14ರಂದು ನಡೆಸಲಿರುವ ನೀತಿನಿರೂಪಣಾ ಸಭೆಯಿಂದಾಗಿ ಬಹುತೇಕ ಏಷ್ಯಾ ಷೇರುಪೇಟೆಗಳು ಇಳಿಕೆ ಕಂಡಿವೆ.

ದೇಶೀಯವಾಗಿ ಭಾರತದ ಹೂಡಿಕೆದಾರರು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾನಿಟರಿ ಪಾಲಿಸಿ ನಿರ್ಣಯದ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಭೆಯು ಜೂನ್‌ 8ರಂದು ನಡೆಯಲಿದೆ. ಭಾರತದ ಕೇಂದ್ರ ಬ್ಯಾಂಕ್‌ ಈ ವಾರ ತನ್ನ ಪ್ರಮುಖ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್‌ ಅರ್ಥಶಾಸ್ತ್ರಜ್ಞರ ಪೋಲ್‌ನಿಂದ ತಿಳಿದುಬಂದಿದೆ.

ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ತಮ್ಮ ದಾಖಲೆಯ ಗರಿಷ್ಠ ಮಟ್ಟಕ್ಕಿಂತ ಶೇಕಡ 2ರಷ್ಟು ಕಡಿಮೆಯಲ್ಲಿದೆ. "ಅತ್ಯುತ್ತಮ ಗಳಿಕೆಯ ಅವಕಾಶದಿಂದಾಗಿ ದೇಶೀಯ ಮತ್ತು ವಿದೇಶಿ ಹೂಡಿಕೆದಾರರಿಂದ ಉಬ್ಬಿಕೊಂಡಿರುವ ಬಿಡ್‌ನಿಂದಾಗಿ ಭಾರತದ ಷೇರುಪೇಟೆ ಆಕರ್ಷಕವಾಗಿ ಮುಂದುವರೆಯಲಿದೆ" ಎಂದು ಮೋರ್ಗಾನ್ ಸ್ಟಾನ್ಲಿಯ ವಿಶ್ಲೇಷಕರು ಹೇಳಿದ್ದಾರೆ.

ಬ್ರೋಕರೇಜ್‌ಗಳು ಸಣ್ಣ ಮತ್ತು ಮದ್ಯಮದಿಂದ ಲಾರ್ಜ್‌ ಕ್ಯಾಪ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಹಣಕಾಸು, ತಂತ್ರಜ್ಞಾನ, ಗ್ರಾಹಕ ಮತ್ತು ಕೈಗಾರಿಕಾ ಷೇರುಗಳು ಹೆಚ್ಚಿನ ತೂಕ ಹೊಂದಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 7.01 ಶತಕೋಟಿ ರೂಪಾಯಿ (85 ಮಿಲಿಯನ್ ಡಾಲರ್‌) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಸಮಯದಲ್ಲಿ ದೇಶೀಯ ಹೂಡಿಕೆದಾರರು 11.96 ಶತಕೋಟಿ ರೂಪಾಯಿಗಳ (145 ಮಿಲಿಯನ್ ಡಾಲರ್‌) ಷೇರುಗಳನ್ನು ನಿವ್ವಳ ಆಧಾರದ ಮೇಲೆ ಖರೀದಿಸಿದ್ದಾರೆ ಎಂದು ಎನ್‌ಎಸ್‌ಇ ಅಂಕಿಅಂಶಗಳಿಂದ (ತಾತ್ಕಾಲಿಕ) ತಿಳಿದುಬಂದಿದೆ.

ಗಮನಿಸಬಹುದಾದ ಷೇರುಗಳು

ಬಿಎಲ್‌ ಕಶ್ಯಪ್‌ ಆಂಡ್‌ ಸನ್ಸ್‌ ಲಿಮಿಟೆಡ್‌: ಕಂಪನಿಯು ಅಂದಾಜು 1.47 ಬಿಲಿಯನ್‌ ರೂಪಾಯಿ ಮೌಲ್ಯದ ನೂತನ ಆರ್ಡರ್‌ ಪಡೆದಿದೆ.

ಜೆಕೆ ಸಿಮೆಂಟ್‌ ಲಿಮಿಟೆಡ್‌: ತೋಷಾಲಿ ಸಿಮೆಂಟ್ಸ್ ಅನ್ನು 1.57 ಶತಕೋಟಿ ರೂಪಾಯಿಗಳಿಗೆ ಖರೀದಿಸುವ ಸಲುವಾಗಿ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಲು ಕಂಪನಿಯ ಮಂಡಳಿಯು ಒಪ್ಪಿಗೆ ನೀಡಿದೆ.

ಎಚ್‌ಜಿ ಇನ್‌ಫ್ರಾ ಎಂಜಿನಿಯರಿಂಗ್‌ ಲಿಮಿಟೆಡ್‌: 6 ಶತಕೋಟಿ ರೂಪಾಯಿಗಳಿಗೂ ಹೆಚ್ಚಿನ ಪ್ರಾಜೆಕ್ಟ್‌ಗಾಗಿ ಉತ್ತರ ಮಧ್ಯ ರೈಲ್ವೆಯಿಂದ ಸ್ವೀಕಾರ ಪತ್ರವನ್ನು ಪಡೆದಿದೆ.

ಅದಾನಿ ಗ್ರೂಪ್‌ನ ಷೇರುಗಳು: ಈ ಸಂಘಟಿತ ಸಂಸ್ಥೆಯು 2.65 ಬಿಲಿಯನ್ ಡಾಲರ್‌ ಮೌಲ್ಯದ ಡೆಲಿವರೇಜಿಂಗ್ ಪ್ರೋಗ್ರಾಂ ಪೂರ್ಣಗೊಳಿಸಿದೆ.

ಭಾರತೀಯ ಕರೆನ್ಸಿ ಮೌಲ್ಯ

1 ಡಾಲರ್‌= 82.4959 ಭಾರತೀಯ ರೂಪಾಯಿಗಳು

ಸುದ್ದಿಮೂಲ: ರಾಯಿಟರ್ಸ್‌. ಕನ್ನಡಕ್ಕೆ: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ

    ಹಂಚಿಕೊಳ್ಳಲು ಲೇಖನಗಳು