Sensex Nifty 50 today: ಜಿಡಿಪಿ ಫಲಿತಾಂಶಕ್ಕೆ ಭಾರತೀಯ ಷೇರುಪೇಟೆ ಕಂಗಾಲು, ಹೀಗಿರಲಿದೆ ಇಂದಿನ ಸೆನ್ಸೆಕ್ಸ್, ನಿಫ್ಟಿ ವಹಿವಾಟು
Dec 02, 2024 09:17 AM IST
Sensex Nifty 50 today: ಜಿಡಿಪಿ ಫಲಿತಾಂಶಕ್ಕೆ ಭಾರತೀಯ ಷೇರುಪೇಟೆ ಕಂಗಾಲು
ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಫಲಿತಾಂಶ ನಕಾರಾತ್ಮಕವಾಗಿರುವುದು ಮತ್ತು ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗಿರುವ ಕಾರಣ ಭಾರತೀಯ ಷೇರುಪೇಟೆ ಇಂದು ನೀರಸ ಆರಂಭ ಕಾಣುವ ನಿರೀಕ್ಷೆಯಿದೆ. ನಿಫ್ಟಿ, ಸೆನ್ಸೆಕ್ಸ್ ಷೇರುಪೇಟೆಯಲ್ಲಿ ಇಂದಿನ ವಹಿವಾಟು ಮಂದಗತಿಯಲ್ಲಿ ಸಾಗುವ ಸೂಚನೆಯಿದೆ.
ಭಾರತೀಯ ಷೇರುಪೇಟೆಯ ನಿಫ್ಟಿ 50 ಸೂಚ್ಯಂಕವು ಸೋಮವಾರ ನಕಾರಾತ್ಮಕ ಆರಂಭ ಕಾಣುವ ಸೂಚನೆಯನ್ನು ಗಿಫ್ಟ್ ನಿಫ್ಟ್ ನೀಡಿದೆ. ಜಿಡಿಪಿ ಫಲಿತಾಂಶ ನಿರಾಶದಾಯಕವಾಗಿರುವುದು ಮತ್ತು ವಿದೇಶಿ ಬಂಡವಾಳದ ಹೊರಹರಿವು ಮುಂದುವರೆದಿರುವುದರಿಂದ ಹೂಡಿಕೆದಾರರು ಹಿಂಜರಿಯುವ ಸೂಚನೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ 4-6ರಂದು ಹಣಕಾಸು ನೀತಿ ಪ್ರಕಟಿಸಲಿದೆ. ಇದಕ್ಕೂ ಮುನ್ನ ಜಿಡಿಪಿ ಫಲಿತಾಂಶ ಪ್ರಕಟವಾಗಿದ್ದು, ಇದು ಮಾರುಕಟ್ಟೆಗೆ ಆತಂಕ ತಂದಿದೆ.
ಭಾರತೀಯ ಷೇರುಪೇಟೆಯ ಆರಂಭದ ಕುರಿತು ಮುನ್ಸೂಚನೆ ದೊರಕುವಂತಹ ಗಿಫ್ಟ್ ನಿಫ್ಟಿಯ ಬೆಳಗ್ಗಿನ ವಹಿವಾಟು ನೀರಸವಾಗಿತ್ತು ಬೆಳಿಗ್ಗೆ 8:30 ರ ಸುಮಾರಿಗೆ ಗಿಫ್ಟ್ ನಿಫ್ಟಿ 24,337 ನಲ್ಲಿತ್ತು. ಇದು ನಿಫ್ಟಿ ಫ್ಯೂಚರ್ಸ್‌ನ ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ 63 ಅಂಕ ಕಡಿಮೆಯಾಗಿದೆ. ವಿವಿಧ ಕಂಪನಿಗಳ ಫಲಿತಾಂಶ ನೀರಸವಾಗಿರುವುದು, ದೇಶೀಯ ಆರ್ಥಿಕತೆಯಲ್ಲಿ ಮಂದಗತಿಯ ಸೂಚನೆಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸೂಚನೆಯಿದೆ.
ಜಿಡಿಪಿ ಇಳಿಕೆ ಕುರಿತು ಆತಂಕ
ಜುಲೈನಿಂದ ಸೆಪ್ಟೆಂಬರ್ 2024ರ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಏಳು ತ್ರೈಮಾಸಿಕದ ಕನಿಷ್ಠ ಪ್ರಮಾಣ ಶೇಕಡ 5.4ಕ್ಕೆ ಕುಸಿದಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಕಾರಿಗಳು ಇತ್ತೀಚೆಗೆ ಆರ್ಥಿಕ ಚಟುವಟಿಕೆಯ ಅಂಶಗಳನ್ನು ಪರಿಗಣಿಸಿ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 6.8 ಎಂದು ಅಂದಾಜಿಸಿದ್ದಾರೆ. ಅಕ್ಟೋಬರ್ ಹಣಕಾಸು ನೀತಿ ಪರಾಮರ್ಶೆಯಲ್ಲಿ ಕೇಂದ್ರೀಯ ಬ್ಯಾಂಕ್‌ನ ಅಧಿಕೃತ ಅಂದಾಜು ಶೇಕಡ 7 ಆಗಿತ್ತು. 2023-24 ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 8.1ರಷ್ಟು ಪ್ರಗತಿ ಕಂಡಿತ್ತು.
ನಿಫ್ಟಿ 50 ಮುನ್ನೋಟ
ಟೆಕ್ನಿಕಲ್ ರಿಸರ್ಚ್, ಜೆಎಂ ಫೈನಾನ್ಶಿಯಲ್ & ಬ್ಲಿಂಕ್‌ಎಕ್ಸ್, ತೇಜಸ್ ಶಾ ಅವರ ಪ್ರಕಾರ ನಿಫ್ಟಿಯು 24,350 ಅಂಕದಲ್ಲಿ ಮುಕ್ತಾಯಗೊಂಡಿರುವುದು ಉತ್ತಮ ಬೆಳವಣಿಗೆ. ನಿಫ್ಟಿ 50 ಇಂದು 24,000 ರಿಂದ 24,350 ಆಸುಪಾಸಿನಲ್ಲಿ ಇರಬಹುದು. ""ನಿಫ್ಟಿಗೆ ಈಗ 4,000 ಮತ್ತು 23,750-800 ಅಂಕಗಳ ಬೆಂಬಲವಿದೆ. ನಿಫ್ಟಿ 24,350 ಅಂಕಕ್ಕೆ ತಲುಪಬಹುದು. 24,500-550 ಮಟ್ಟಕ್ಕೂ ತಲುಪಬಹುದು" ಎಂದು ಅವರು ಅಂದಾಜಿಸಿದ್ದಾರೆ.
"ನಿಫ್ಟಿ ಷೇರುಪೇಟೆ 24,350-24,360 ತಲುಪಿದ ಬಳಿಕ ತಕ್ಷಣ ಅಡಚಣೆ ಉಂಟಾಗಬಹುದು. 24,080ರಲ್ಲಿ 21ಡಿಇಎಂಇ ಇರಿಸಲಾಗಿದೆ. ಇದು ಷೇರುಪೇಟೆಗೆ ತಕ್ಷಣದ ಬೆಂಬಲವಾಗಿ ಕಾರ್ಯನಿರ್ವಹಿಸಬಹುದು" ಎಂದು ಅಸಿಟ್ ಸಿ. ಮೆಹ್ತಾ ಇನ್ವೆಸ್ಟ್‌ಮೆಂಟ್ ಇಂಟರ್‌ಮೀಡಿಯೇಟ್ಸ್ ಲಿಮಿಟೆಡ್‌ನ ತಾಂತ್ರಿಕ ಮತ್ತು ಉತ್ಪನ್ನಗಳ ರಿಸರ್ಚ್ ವಿಭಾಗದ ಎವಿಪಿ ಹೃಷಿಕೇಶ್ ಯೆಡ್ವೆ ಹೇಳಿದ್ದಾರೆ. ಸೂಚ್ಯಂಕವು 24,360 ಕ್ಕಿಂತ ಕಡಿಮೆ ಇರುವವರೆಗೆ, ಷೇರು ವಹಿವಾಟುದಾರರು ಬೌನ್ಸ್‌ನಲ್ಲಿ ಲಾಭವನ್ನು ಕಾಯ್ದಿರಿಸುವುದರ ಮೇಲೆ ಕೇಂದ್ರೀಕರಿಸಬೇಕು ಮತ್ತು ಹೊಸ ಬ್ರೇಕ್‌ಔಟ್‌ಗಾಗಿ ಕಾಯಬೇಕು" ಎಂದು ಯೆಡ್ವೆ ಹೇಳಿದ್ದಾರೆ.
ಬ್ಯಾಂಕ್ ನಿಫ್ಟಿ ಭವಿಷ್ಯ ಹೇಗಿರಬಹುದು?
ಬ್ಯಾಂಕ್ ನಿಫ್ಟಿಯು ಮುಕ್ತಾಯದ ಆಧಾರದ ಮೇಲೆ 52,000 ರ ಮಾನಸಿಕ ಬೆಂಬಲದ ಮಟ್ಟವನ್ನು ಹೊಂದಿದೆ ಎಂದು ಶಾ ಹೇಳಿದ್ದಾರೆ. "ಬ್ಯಾಂಕ್ ನಿಫ್ಟಿಯ ತಾಂತ್ರಿಕ ರಚನೆಯು ನಿಫ್ಟಿಗಿಂತ ತುಲನಾತ್ಮಕವಾಗಿ ಪ್ರಬಲವಾಗಿದೆ. ಬೆಂಬಲ ವಲಯವು 51,750 / 51,400-500 ರಷ್ಟಿದ್ದರೆ, ಪ್ರತಿರೋಧವು 52,500-600 / 53,500-700 ರಷ್ಟಿದೆ" ಎಂದು ಶಾ ಹೇಳಿದ್ದಾರೆ.