logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  6 ದಿನಗಳಲ್ಲಿ ಬೆಳ್ಳಿ ಬೆಲೆ ಕಿಲೋಗೆ 10,000 ರೂ, ಚಿನ್ನದ ಬೆಲೆ 10 ಗ್ರಾಂಗೆ 2,850 ರೂಪಾಯಿ ಏರಿಕೆ, ಇಂದಿನ ಚಿನ್ನ ಬೆಳ್ಳಿ ಧಾರಣೆ

6 ದಿನಗಳಲ್ಲಿ ಬೆಳ್ಳಿ ಬೆಲೆ ಕಿಲೋಗೆ 10,000 ರೂ, ಚಿನ್ನದ ಬೆಲೆ 10 ಗ್ರಾಂಗೆ 2,850 ರೂಪಾಯಿ ಏರಿಕೆ, ಇಂದಿನ ಚಿನ್ನ ಬೆಳ್ಳಿ ಧಾರಣೆ

Umesh Kumar S HT Kannada

Oct 24, 2024 10:58 AM IST

google News

ಬೆಳ್ಳಿ ಬಂಗಾರದ ಬೆಲೆ ನೋಡ್ಕೊಂಡೇ ಉಳಿದೆಲ್ಲ ಲೆಕ್ಕಾಚಾರ, ವಿವಿಧ ನಗರಗಳಲ್ಲಿ ಹೀಗಿದೆ ನೋಡಿ ಚಿನ್ನ ಬೆಳ್ಳಿ ಧಾರಣೆ - Gold Rate Today

  • ಚಿನ್ನ ಬೆಳ್ಳಿ ಬೆಲೆ ಏರಿಕೆ ಮುಂದುವರಿದಿದ್ದು, ಕಳೆದ ಆರು ದಿನಗಳಲ್ಲಿ ಬೆಳ್ಳಿ ಬೆಲೆ ಕಿಲೋಗೆ 10,000 ರೂ ಮತ್ತು ಚಿನ್ನದ ಬೆಲೆ 10 ಗ್ರಾಂಗೆ 2,850 ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಟ್ರೆಂಡ್ ಇದ್ದು, ಭಾರತದಲ್ಲಿ ಇಂದು ಚಿನ್ನ ಬೆಳ್ಳಿ ಧಾರಣೆ ಹೇಗಿದೆ ನೋಡೋಣ.

ಬೆಳ್ಳಿ ಬಂಗಾರದ ಬೆಲೆ ನೋಡ್ಕೊಂಡೇ ಉಳಿದೆಲ್ಲ ಲೆಕ್ಕಾಚಾರ, ವಿವಿಧ ನಗರಗಳಲ್ಲಿ ಹೀಗಿದೆ ನೋಡಿ ಚಿನ್ನ ಬೆಳ್ಳಿ ಧಾರಣೆ - Gold Rate Today
ಬೆಳ್ಳಿ ಬಂಗಾರದ ಬೆಲೆ ನೋಡ್ಕೊಂಡೇ ಉಳಿದೆಲ್ಲ ಲೆಕ್ಕಾಚಾರ, ವಿವಿಧ ನಗರಗಳಲ್ಲಿ ಹೀಗಿದೆ ನೋಡಿ ಚಿನ್ನ ಬೆಳ್ಳಿ ಧಾರಣೆ - Gold Rate Today

Gold Price Today: ಚಿನ್ನ ಬೆಳ್ಳಿ ಮೇಲಿನ ಆಕರ್ಷಣೆ, ಒಲವು ಹಿಂದೆಯೂ ಇತ್ತು, ಇಂದೂ ಇದೆ, ನಾಳೆಯೂ ಇರಬಹುದು. ಅದೊಂಥರಾ ಆಪದ್ಧನ. ಜನರಷ್ಟೇ ಅಲ್ಲ, ರಾಷ್ಟ್ರಗಳು ಕೂಡ ತಮ್ಮ ಅರ್ಥ ವ್ಯವಸ್ಥಯನ್ನು ಸುಭದ್ರವಾಗಿಡೋದಕ್ಕೆ ಇದೇ ಲೋಹಗಳನ್ನು ನೆಚ್ಚಿಕೊಂಡಿವೆ. ಹೀಗಾಗಿಯೇ ಚಿನ್ನ ಬೆಳ್ಳಿ ಧಾರಣೆ ಬಗ್ಗೆ ಕುತೂಹಲ ಸಹಜ. ಮಧ್ಯಪ್ರಾಚ್ಯ ಬಿಕ್ಕಟ್ಟು, ಇರಾನ್ - ಇಸ್ರೇಲ್ ಯುದ್ಧ ಪರಿಸ್ಥಿತಿ, ಜಾಗತಿಕ ಆರ್ಥಿಕ ಹಿಂಜರಿತದ ಕಾರಣ ಚಿನ್ನ ಬೆಳ್ಳಿ ದರ ಗಗನಮುಖಿಯಾಗಿವೆ. ಬೆಳ್ಳಿಯ ಬೆಲೆಯಂತೂ ಒಂದು ಕಿಲೋಗೆ 1 ಲಕ್ಷ ರೂಪಾಯಿ ಮೇಲೇರಿದ್ದು, ಚಿನ್ನವೂ ಅದೇ ದಾರಿಯಲ್ಲಿ ಸಾಗಿದೆ. ಇಂದು (ಅಕ್ಟೋಬರ್‌ 24) ಚಿನ್ನ ಬೆಳ್ಳಿ ಧಾರಣೆ ಹೀಗಿದೆ

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ ಬೆಳ್ಳಿ ಧಾರಣೆ ಇಂದು

ಭಾರತದ ಚಿನಿವಾರ ಪೇಟೆಯಲ್ಲಿ ಚಿನ್ನ ಬೆಳ್ಳಿ ಧಾರಣೆ ಇಂದು (ಅಕ್ಟೋಬರ್ 24)ಏರಿಕೆ ಆಗಿದೆ. ಚಿನ್ನದ ದರ ಗುರುವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 10 ರೂಪಾಯಿ ಏರಿದ್ದು, 80,080 ರೂಪಾಯಿ ತಲುಪಿದೆ ಎಂದು ಗುಡ್‌ರಿಟರ್ನ್ಸ್‌ ವೆಬ್‌ಸೈಟ್ ಮಾಹಿತಿ ನೀಡಿದೆ. ಇದೇ ರೀತಿ ಬೆಳ್ಳಿ ಬೆಲೆ ಒಂದು ಕಿಲೋಗೆ 100 ರೂಪಾಯಿ ಹೆಚ್ಚಾಗಿದ್ದು, 1,04,100 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ದರವೂ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. ಇಂದು ಈ ಆಭರಣ ಬಂಗಾರದ ಬೆಲೆ 73,410 ರೂಪಾಯಿ ಇದೆ.

ಬೆಂಗಳೂರು, ಮುಂಬಯಿ, ಕೋಲ್ಕತ, ಹೈದರಾಬಾದ್‌ಗಳಲ್ಲಿ ಅಪರಂಜಿ (24 ಕ್ಯಾರೆಟ್ ) ಚಿನ್ನದ ಬೆಲೆ 10 ಗ್ರಾಂಗೆ 80,080 ರೂಪಾಯಿ ಆಗಿದೆ. ದೆಹಲಿಯಲ್ಲಿ 80,230 ರೂಪಾಯಿ ಇದೆ. ಇನ್ನು ಆಭರಣ ಚಿನ್ನ (22 ಕ್ಯಾರೆಟ್‌) ದ ಬೆಲೆ ಕೋಲ್ಕತ, ಬೆಂಗಳೂರು, ಚೆನ್ನೈ, ಹೈದರಾಬಾದ್‌ಗಳಲ್ಲಿ 73,410 ರೂಪಾಯಿ ಮತ್ತು ದೆಹಲಿಯಲ್ಲಿ 73,560 ರೂಪಾಯಿ ಇದೆ. ಹಾಗೆಯೇ ಬೆಳ್ಳಿ ಬೆಲೆ 1 ಕಿಲೋಗೆ 1,04,100 ರೂಪಾಯಿ ಇದ್ದು, ಮುಂಬಯಿ, ಕೋಲ್ಕತ್ತ, ಅಹಮದಾಬಾದ್ ಸೇರಿ ವಿವಿಧೆಡೆದ ಇದೇ ಬೆಲೆ ಇದೆ. ಆದರೆ ಚೆನ್ನೈನಲ್ಲಿ 1,12,100 ರೂಪಾಯಿ ಇದೆ.

ಬೆಂಗಳೂರು ಚಿನಿವಾರ ಪೇಟೆಯಲ್ಲಿ ಬೆಳ್ಳಿ ಬಂಗಾರದ ಬೆಲೆ

ಅಖಿಲ ಭಾರತ ಸರಾಫಾ ಅಸೋಸಿಯೇಷನ್‌ನ ಪ್ರಕಾರ, ಸತತ ಆರನೇ ಅವಧಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೊಸ ದಾಖಲೆ ಬರೆದಿವೆ. ಹಬ್ಬ ಮತ್ತು ಮದುವೆ ಸೀಸನ್ ಆದ ಕಾರಣ ಬೆಲೆ ಏರಿಕೆ ಮುಂದುವರಿಯಲಿದೆ. ಆರು ದಿನಗಳಲ್ಲಿ ಅಂದರೆ ಅಕ್ಟೋಬರ್ 16 ರ ನಂತರ ಬೆಳ್ಳಿ ಬೆಲೆ 10,000 ರೂಪಾಯಿ ಮತ್ತು ಚಿನ್ನದ ಬೆಲೆ 10 ಗ್ರಾಂಗೆ 2,850 ರೂಪಾಯಿ ಹೆಚ್ಚಾಗಿದೆ.

ಬೆಂಗಳೂರು ಚಿನಿವಾರ ಪೇಟೆಯಲ್ಲಿ ಬುಧವಾರದ ವಹಿವಾಟಿನ ಕೊನೆಗೆ ಸ್ಟ್ಯಾಂಡರ್ಡ್‌ (99.5 ಪರಿಶುದ್ಧ) ಚಿನ್ನದ ದರ 10 ಗ್ರಾಂಗೆ 82,500 ರೂಪಾಯಿ ಮತ್ತು ಆಭರಣ ಚಿನ್ನ ( 22 ಕ್ಯಾರೆಟ್‌) ಬೆಲೆ 75,600 ರೂಪಾಯಿ ಇತ್ತು. ಬೆಳ್ಳಿ ಬೆಲೆ ಒಂದು ಕಿಲೋಗೆ 1,05,300 ರೂಪಾಯಿ ಇತ್ತು.

ರಾಯ್ಟರ್ಸ್‌ ವರದಿ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಬುಧವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ನಂತರ ಸ್ಥಿರವಾಗಿದೆ. ಇದು ಅಮೆರಿಕದ ಡಾಲರ್ ಮತ್ತು ಖಜಾನೆ ಬಾಂಡ್‌ಗಳ ಬೆಂಬಲ ಪಡೆದುಕೊಂಡಿದ್ದು, ಗುರುವಾರ ತಡ ನಸುಕಿನ ವೇಳೆ ಸ್ಪಾಟ್‌ ಚಿನ್ನದ ದರ ಪ್ರತಿ ಔನ್ಸ್‌ (28.3495 ಗ್ರಾಂ) 2,718.32 ಡಾಲರ್‌ ಇದ್ದರೆ, ಗೋಲ್ಡ್‌ ಫ್ಯೂಚರ್ಸ್‌ ದರ 2,718.32.10 ಡಾಲರ್ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ