NIA recruitment: ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಲ್ಲಿ 40 ಹುದ್ದೆ, ಅರ್ಜಿ ಸಲ್ಲಿಕೆಗೆ ಏಪ್ರಿಲ್ 2 ಕಡೆಯ ದಿನ
Feb 18, 2024 04:30 PM IST
ಎನ್‌ಐಎ ದಲ್ಲಿ ನಾನಾ ಹುದ್ದೆಗೆ ನೇಮಕಾತಿ ನಡೆಯಲಿದೆ.
- ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಮೂರು ಹಂತದ 40 ನಾನಾ ಹುದ್ದೆಗಳಿಗೆ ಅರ್ಹರ ನೇಮಕ ಪ್ರಕ್ರಿಯೆ ನಡೆಯಲಿದ್ದು, ಏಪ್ರಿಲ್ 2 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಬೆಂಗಳೂರು: ದೇಶದ ಗೃಹ ಇಲಾಖೆಯಡಿ ಕಾರ್ಯ ನಿರ್ವಹಿಸುವ ಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ( NIA) ಪ್ರಮುಖ 40 ಗಳಿಗೆ ಅರ್ಜಿ ಆಹ್ವಾನಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಮತ್ತು ಯುಡಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ ಸಂಬಂಧ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 2 ತಿಂಗಳೊಳಗೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದರ ಪ್ರಕಾರ ಏಪ್ರಿಲ್ 2ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
- ಸಹಾಯಕ( assistant) ಹುದ್ದೆಯಲ್ಲಿ 7 ಸ್ಥಾನಗಳಿವೆ. ಕೇಂದ್ರ ಸರ್ಕಾರದ ಆರನೇ ಹಂತದ ಹುದ್ದೆಗಳಿವು. ವೇತನ ಶ್ರೇಣಿ 35400ರಿಂದ 112400 ರೂ. ನಿಗದಿಪಡಿಸಲಾಗಿದೆ.
- ಸ್ಟೇನೋಗ್ರಾಫರ್( Stenpgrapher) ಹುದ್ದೆಗೆ ಒಟ್ಟು 24 ಸ್ಥಾನಗಳನ್ನು ತುಂಬಲಾಗುತ್ತಿದೆ. ಇದೂ ಆರನೇ ಹಂತದ ಹುದ್ದೆ. ಇದಕ್ಕೂ ವೇತನ ಶ್ರೇಣಿ 35400ರಿಂದ 112400 ರೂ. ನಿಗದಿಪಡಿಸಲಾಗಿದೆ.
- ಪ್ರಥಮ ದರ್ಜೆ ಸಹಾಯಕ( Upper Division Clerk) ಹುದ್ದೆಯಲ್ಲಿ 9 ಸ್ಥಾನಗಳನ್ನು ತುಂಬಲು ಅವಕಾಶವಿದೆ. ನಾಲ್ಕನೇ ಹಂತದ ಹುದ್ದೆಯಿದು. ಇದಕ್ಕೆ ವೇತನ ಶ್ರೇಣಿ 25500 ರಿಂದ 81100 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿರಿ: ದ್ವಿಶತಕದ ಜೊತೆಗೆ ಸಿಕ್ಸರ್ನಲ್ಲೂ ಜೈಸ್ವಾಲ್ ವಿಶ್ವದಾಖಲೆ; ರೋಹಿತ್ ಹಿಂದಿಕ್ಕಿ ಕೊಹ್ಲಿ, ಅಕ್ರಂ ಸಾಲಿಗೆ ಸೇರಿ ಹಲವು ದಾಖಲೆ ಬರೆದ ಯಶಸ್ವಿ
ಅರ್ಹತಾ ಮಾನದಂಡಗಳು
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ಅರ್ಹ ಅಧಿಕಾರಿಗಳ ನಾಮನಿರ್ದೇಶನಗಳನ್ನು ಈ ಕೆಳಗಿನ ದಾಖಲೆಗಳೊಂದಿಗೆ ಎಸ್ಪಿ (ಎಡಿಎಂ), ಎನ್ಐಎ ಪ್ರಧಾನ ಕಚೇರಿ, ಸಿಜಿಒ ಕಾಂಪ್ಲೆ, ಲೋಧಿ ರಸ್ತೆ, ನವದೆಹಲಿ - 110003ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎನ್ಐಎ ಅಧಿಕೃತ ವೆಬ್ ಸೈಟ್ ಅನ್ನು ಪರಿಶೀಲಿಸಬಹುದು ಎಂದು ಎನ್‌ಐಎ ಎಸ್ಪಿಎಸ್.ಬಿ.ರಾಯ್‌ಮೇಧಿ ತಿಳಿಸಿದ್ದಾರೆ
ಮಾಹಿತಿಗೆ www.nia.gov.in/recruitment-notice.htm
ವಿಭಾಗ