logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Govt Jobs; 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ, ಅರ್ಜಿ ಸಲ್ಲಿಸುವ ನೇರ ಲಿಂಕ್ ವಿವರ

Govt Jobs; 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ, ಅರ್ಜಿ ಸಲ್ಲಿಸುವ ನೇರ ಲಿಂಕ್ ವಿವರ

Umesh Kumar S HT Kannada

Sep 03, 2024 08:39 AM IST

google News

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ.. (ಸಾಂಕೇತಿಕ ಚಿತ್ರ)

  • CISF Constable Recruitment 2024; ಅರೆಸೇನಾ ಪಡೆ ಸೇರಬೇಕು ಎಂದು ಕನಸು ಕಾಣುತ್ತಿರುವವರಿಗೆ ಒಂದು ಸಿಹಿ ಸುದ್ದಿ. 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ ಗಮನಿಸಿ. ಕರ್ನಾಟಕದಲ್ಲೂ ಖಾಲಿ ಹುದ್ದೆಗಳಿದ್ದು ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಇದರ ವಿವರ ಇಲ್ಲಿದೆ.

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ.. (ಸಾಂಕೇತಿಕ ಚಿತ್ರ)
ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. 12ನೇ ಕ್ಲಾಸ್ ಸೈನ್ಸ್‌ ಮಾಡ್ಕೊಂಡವರಿಗೆ ಸಿಐಎಸ್‌ಎಫ್‌ನಲ್ಲಿ 1100ಕ್ಕೂ ಹೆಚ್ಚು ಹುದ್ದೆಗಳಿವೆ.. (ಸಾಂಕೇತಿಕ ಚಿತ್ರ)

ನವದೆಹಲಿ: ನೀವು ಸೈನ್ಸ್‌ನಲ್ಲಿ 12ನೇ ತರಗತಿ ಓದಿ ಪಾಸಾಗಿ, ಅರೆಸೇನಾ ಪಡೆ ಸೇರಿ ಕೆಲಸ ಮಾಡಬೇಕು ಎಂದು ಕಾಯ್ತಾ ಇದ್ರೆ ಇಲ್ಲಿದೆ ನೀವು ಕಾಯುವಿಕೆ ಕೊನೆಗೊಳಿಸುವ ಸುದ್ದಿ. ಹೌದು, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್‌) 1,100ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (CISF Constable Recruitment 2024 notification) ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ ಖಾಲಿ ಹುದ್ದೆಗಳೂ ಇವೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಂದು ಸೇರಿಸಿ 30 ದಿನಗಳ ಕಾಲಾವಕಾಶವಿದೆ.

ಈ ನೇಮಕ ಪ್ರಕ್ರಿಯೆಯಲ್ಲಿ ಒಟ್ಟು 1130 ಹುದ್ದೆಗಳಿದ್ದು, ಅವುಗಳ ಪೈಕಿ 466 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ, 114 ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS), 153 ಪರಿಶಿಷ್ಟ ಜಾತಿಗಳಿಗೆ (SC), 161 ಪರಿಶಿಷ್ಟ ಪಂಗಡಗಳಿಗೆ (ST) ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBC) 236 ಹುದ್ದೆಗಳು ಎಂದು ಕಾಯ್ದಿರಿಸಲಾಗಿದೆ. ಇದು ಸಿಐಎಸ್‌ಎಫ್‌ಗೆ ಸೇರಲು ವಿವಿಧ ಹಿನ್ನೆಲೆಯ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಇದು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ. ಅಂದ ಹಾಗೆ ಇದು ಪುರುಷ ಅಭ್ಯರ್ಥಿಗಳಿಗೆ ಸೀಮಿತವಾದ ಅವಕಾಶ.

ಗಮನಿಸಬೇಕಾದ ದಿನಾಂಕ ಮತ್ತು ಬೇಕಾದ ಅರ್ಹತೆ

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಹುದ್ದೆಗೆ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಆಗಸ್ಟ್ 30 ರಂದು ಶುರುವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ಸೆಪ್ಟೆಂಬರ್ 30. ಪರೀಕ್ಷೆಯ ದಿನಾಂಕ ಮತ್ತು ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕವನ್ನು ಸರಿಯಾದ ಸಮಯದಲ್ಲಿ ಪ್ರಕಟಿಸುವುದಾಗಿ ಸಿಐಎಸ್‌ಎಫ್‌ ತಿಳಿಸಿದೆ.

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12 ನೇ ತರಗತಿ ಉತ್ತೀರ್ಣರಾಗಿರಬೇಕು. ವಯಸ್ಸು 18 ವರ್ಷದಿಂದ 23 ವರ್ಷದೊಳಗಿರಬೇಕು. ಮೀಸಲಾತಿ ಹೊಂದಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.12ನೇ ತರಗತಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾಬ್ಯಾಸ ಹೊಂದಿರಬೇಕು. ಇದಕ್ಕೆ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಹೊಂದಿರಬೇಕು. ಇನ್ನು ಶಾರೀರಿಕ ಮಾನದಂಡಗಳ ಪೈಕಿ ಅಭ್ಯರ್ಥಿ 170 ಸೆಂಟಿ ಮೀಟರ್ ಎತ್ತರ ಹೊಂದಿದ್ದು, ಎದೆಯ ಸುತ್ತಳತೆ 80 ರಿಂದ 85 ಸೆಂಟಿಮೀಟರ್ ಇರಬೇಕು. ಕನಿಷ್ಠ ವಿಸ್ತರಣೆ 5 ಸೆಂಟಿ ಮೀಟರ್ ಉಲ್ಲೇಖಿಸಲಾಗಿದೆ.

ಇದು ಲೆವೆಲ್ 3 ಹುದ್ದೆಯಾಗಿದ್ದು ತಿಂಗಳಿಗೆ 21,700 ರೂಪಾಯಿಯಿಂದ 69,100 ರೂಪಾಯಿ ತನಕ ವೇತನ ಶ್ರೇಣಿ ಹೊಂದಿದೆ.

ಕರ್ನಾಟಕದಲ್ಲಿರುವ ಹುದ್ದೆಗಳೆಷ್ಟು, ನೇಮಕ ಪ್ರಕ್ರಿಯೆ ಹೇಗಿರುತ್ತೆ, ಅರ್ಜಿ ಸಲ್ಲಿಸುವುದು ಹೇಗೆ

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಹುದ್ದೆ ನೇಮಕ ಪ್ರಕ್ರಿಯೆ ಎರಡು ರೀತಿಯ ಶಾರೀರಿಕ ಪರೀಕ್ಷೆಗಳಿರುವುದನ್ನು ಉಲ್ಲೇಖಿಸಲಾಗಿದೆ. ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ) ನಡೆಯಲಿದೆ. ಅದಾಗಿ ದಾಖಲೆ ಪರಿಶೀಲನೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಈ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.

ದೇಶದಲ್ಲಿ ಸಿಐಎಸ್‌ಎಫ್‌ನ 1130 ಹುದ್ದೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ 33 ಹುದ್ದೆಗಳಿವೆ.

ಸಿಐಎಸ್‌ಎಫ್‌ ಕಾನ್‌ಸ್ಟೆಬಲ್‌ ನೇಮಕ 2024ಕ್ಕೆ ಅರ್ಜಿ ಸಲ್ಲಿಸುವುದು ಹೀಗೆ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂಪಾಯಿ ಪಾವತಿಸಬೇಕು. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಎಕ್ಸ್‌ ಮಿಲಿಟರಿಯವರಿಗೆ ಶುಲ್ಕ ವಿನಾಯಿತಿ ಇದೆ. ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 10 ರಿಂದ 12 ತನಕ ಅರ್ಜಿಯಲ್ಲಿ ತಿದ್ದುಪಡಿ ಇದ್ದರೆ ಮಾಡಬಹುದು. ತಿದ್ದುಪಡಿಗೆ 200 ರೂಪಾಯಿ ಶುಲ್ಕ ಪಾವತಿಸಬೇಕು.

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಫೈರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಲಿಂಕ್ - https://rb.gy/wspwix

ಸಿಐಎಸ್‌ಎಫ್‌ನ ಅಧಿಕೃತ ವೆಬ್‌ಸೈಟ್ - cisfrectt.in

ಅರ್ಜಿ ಸಲ್ಲಿಕೆಗೆ ನೇರ ಲಿಂಕ್ - https://cisfrectt.cisf.gov.in/ct_fire_2024/ct_fire_login.php

ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ಹೆಚ್ಚಿನ ಮಾಹಿತಿ ಅಥವಾ ಸಂದೇಹ ಪರಿಹರಿಸಿಕೊಳ್ಳಲು ಸಿಐಎಸ್‌ಎಫ್‌ ಕೊಟ್ಟಿರುವ ಸಹಾಯವಾಣಿ ಸಂಖ್ಯೆ 011-24366431/24307933 ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ಒಳಗಾಗಿ ಕರೆ ಮಾಡಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ