RRB Recruitment: ರೈಲ್ವೆಯಲ್ಲಿ 7951 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ
RRB JE Recruitment 2024: ಭಾರತೀಯ ರೈಲ್ವೆಯಲ್ಲಿ ಜೂನಿಯರ್ ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 29ರ ಗುರುವಾರವೇ ಕೊನೆಯ ದಿನವಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ನಾಳೆಯಿಂದ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶ ಪಡೆಯುತ್ತಾರೆ.
ರೈಲ್ವೆ ನೇಮಕಾತಿ ಮಂಡಳಿ (Railway Recruitment Board - ಆರ್‌ಆರ್‌ಬಿ) ಜೂನಿಯರ್ ಎಂಜಿನಿಯರ್ಸ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (ಸಿಎಂಎ), ಕೆಮಿಕಲ್ ಸೂಪರ್ವೈಸರ್ಸ್ (ರಿಸರ್ಚ್), ಮೆಟಲರ್ಜಿಕಲ್ ಸೂಪರ್ವೈಸರ್ಸ್ (ರಿಸರ್ಚ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನೋಂದಣಿಗೆ ಇಂದೇ (ಆಗಸ್ಟ್ 29, ಗುರುವಾರ) ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು RRB ವೆಬ್‌ಸೈಟ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನವಾಗಿರುವುರಿಂದ ಈ ದಿನದ ಅಂತ್ಯದೊಳಗೆ ಸಲ್ಲಿಕೆಯಾದ ಅರ್ಜಿಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ.
ಖಾಲಿ ಹುದ್ದೆಗಳ ವಿವರ
ಆರ್‌ಆರ್‌ಬಿ ಭರ್ತಿ ಮಾಡುತ್ತಿರುವ ಒಟ್ಟು 7,951 ಹುದ್ದೆಗಳಲ್ಲಿ 17 ಹುದ್ದೆಗಳು ಆರ್‌ಆರ್‌ಬಿ ಗೋರಖ್‌ಪುರದಲ್ಲಿ ಸಿಗಲಿದೆ. ಇದರಲ್ಲಿ ಕೆಮಿಕಲ್ ಸೂಪರ್‌ವೈಸರ್ / ರಿಸರ್ಚ್ ಮತ್ತು ಮೆಟಲರ್ಜಿಕಲ್ ಸೂಪರ್‌ವೈಸರ್ / ರಿಸರ್ಚ್ ಹುದ್ದೆಗಳು ಸೇರಿವೆ. ಉಳಿದಂತೆ 7,934 ಹುದ್ದೆಗಳು ಜೂನಿಯರ್ ಎಂಜಿನಿಯರ್ ಅಥವಾ ಜೆಇ ಪೋಸ್ಟ್‌ಗಳಾಗಿವೆ. ವಿವಿಧ ಆರ್‌ಆರ್‌ಬಿಗಳಲ್ಲಿ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದ್ದು, ನಾಳೆ (ಆಗಸ್ಟ್ 30) ಈ ನೇಮಕಾತಿ ಪ್ರಕ್ರಿಯೆಗಾಗಿ ಅರ್ಜಿ ನಮೂನೆ ತಿದ್ದುಪಡಿ ವಿಂಡೋ ತೆರೆಯುತ್ತದೆ. ಇವತ್ತಿನವರೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಫಾರ್ಮ್‌ಗಳಲ್ಲಿ ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡಲು ಸೆಪ್ಟೆಂಬರ್ 8ರವರೆಗೆ ಸಮಯಾವಕಾಶ ನೀಡಲಾಗಿದೆ.
ವಯಸ್ಸಿನ ಮಿತಿ ಮತ್ತು ಅರ್ಹತಾ ಮಾನದಂಡಗಳು
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ಜನವರಿ 1ಕ್ಕೆ ಅನುಗುಣವಾಗುವಂತೆ ಕನಿಷ್ಠ 18 ವರ್ಷ ಮತ್ತು 36 ವರ್ಷ ಮೀರಿರಬಾರದು.
- ಅಭ್ಯರ್ಥಿಯು ಅನೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೂ, ಒಂದೇ ಫಾರ್ಮ್ ಅನ್ನು ಮಾತ್ರ ಸಲ್ಲಿಸಬಹುದು. ಇದಲ್ಲದೆ, ಅಭ್ಯರ್ಥಿಗೆ ಕೇವಲ ಒಂದು ಆರ್‌ಆರ್‌ಬಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದೆ.
- ಪ್ರತಿ ಹುದ್ದೆಗೆ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್‌ನಲ್ಲಿ ನೀಡಿರುವ ಆಯಾ ಹುದ್ದೆಗಳ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಅರ್ಜಿ ಶುಲ್ಕ
ಎಸ್‌ಸಿ, ಎಸ್‌ಟಿ, ಮಹಿಳಾ, ತೃತೀಯ ಲಿಂಗಿ, ಅಲ್ಪಸಂಖ್ಯಾತರು, ಮಾಜಿ ಸೈನಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂಪಾಯಿ. ಉಳಿದವರಿಗೆ500 ರೂ. ಇರಲಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಆರ್‌ಆರ್‌ಬಿ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸುತ್ತದೆ. ಇದರ ನಂತರ ದಾಖಲೆ ಪರಿಶೀಲನೆ (ಡಾಕ್ಯುಮೆಂಟ್ ವೆರಿಫಿಕೇಶನ್) ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ, 1/3 ರಷ್ಟು ನೆಗೆಟಿವ್ ಮಾರ್ಕ್ ಇರುತ್ತದೆ.
ಮೊದಲ ಸಿಬಿಟಿಯಲ್ಲಿ ಹಾಜರಾಗುವವರಿಗೆ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಈ ಅರ್ಜಿ ಶುಲ್ಕದ ಒಂದು ಭಾಗವನ್ನು ಮರುಪಾವತಿಸಲಾಗುವುದು ಎಂದು ಆರ್‌ಆರ್‌ಬಿ ತಿಳಿಸಿದೆ.
ಅರ್ಜಿ ಸಲ್ಲಿಸಲು ನೇರ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಉದ್ಯೋಗ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ