logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bank Recruitment: ಐಡಿಬಿಐ ಬ್ಯಾಂಕ್‌ನಲ್ಲಿ 1000 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಕೆಗೆ ನವೆಂಬರ್‌ 16 ಕೊನೆಯ ದಿನ

Bank Recruitment: ಐಡಿಬಿಐ ಬ್ಯಾಂಕ್‌ನಲ್ಲಿ 1000 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಕೆಗೆ ನವೆಂಬರ್‌ 16 ಕೊನೆಯ ದಿನ

Umesha Bhatta P H HT Kannada

Nov 08, 2024 04:53 PM IST

google News

ಭಾರತದ ಪ್ರಮುಖ ಬ್ಯಾಂಕ್‌ ಐಡಿಬಿಐ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    • IDBI Bank Recruitment: ಭಾರತದ ಪ್ರಮುಖ ವಹಿವಾಟು ನಡೆಸುವ ಬ್ಯಾಂಕ್‌ಗಳಲ್ಲಿ ಒಂದಾದ ಐಡಿಬಿಐ ಬ್ಯಾಂಕ್‌ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ವಿವರ ಇಲ್ಲಿದೆ. 
ಭಾರತದ ಪ್ರಮುಖ ಬ್ಯಾಂಕ್‌ ಐಡಿಬಿಐ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತದ ಪ್ರಮುಖ ಬ್ಯಾಂಕ್‌ ಐಡಿಬಿಐ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ದೆಹಲಿ: ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಅಧಿಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಬ್ಯಾಂಕ್ ನಲ್ಲಿ ಒಟ್ಟು 1,000 ಹುದ್ದೆಗಳು ಖಾಲಿಯಿದ್ದು, ಭರ್ತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕ್ ನ ಸೇಲ್ಸ್ ಹಾಗೂ ಆಪರೇಷನ್ಸ್ ವಿಭಾಗದ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ನವೆಂಬರ್ 16 ರೊಳಗೆ ಐಡಿಬಿಐ ಬ್ಯಾಂಕ್‌ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಮುಂದಿನ ತಿಂಗಳು ಆನ್‌ಲೈನ್‌ನಲ್ಲಿಯೇ ಪರೀಕ್ಷೆಗಳು ನಡೆಯಲಿದ್ದು, ಆ ದಿನಾಂಕಗಳನ್ನೂ ಪ್ರಕಟಿಸಲಾಗಿದೆ.

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಸೇಲ್ಸ್ ಹಾಗೂ ಆಪರೇಷನ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಹ ಪದವೀಧರರಿಗೆ ಅರ್ಜಿ ಆಹ್ವಾನಿಸಿದೆ.ಕೊನೆಯ ವರ್ಷದ ಪದವಿಯಲ್ಲಿರುವವರೂ ಸೇರಿದಂತೆ ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವವರು, ಬೇರೆ ಬ್ಯಾಂಕ್‌ ಗಳಲ್ಲಿ ಕೆಲಸ ಮಾಡುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳೇನೇನು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿ ಇದ್ದರೂ ಆಗಲಿದೆ.
  • ಅಭ್ಯರ್ಥಿಯು ಕಂಪ್ಯೂಟರ್ ನಿರ್ವಹಣೆಯ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಆಧಾರ್ ಕಾರ್ಡ್, ಎಸ್ಎಸ್ಎಲ್‌ಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಭಾವಚಿತ್ರ ಇನ್ನಿತ್ತರ ದಾಖಲೆಗಳನ್ನು ನೀಡುವುದು ವೆಬ್‌ಸೈಟ್‌ನಲ್ಲಿ ನಮೂದಿಸುವುದು ಕಡ್ಡಾಯ

    ಇದನ್ನೂ ಓದಿರಿ: HDB Financial IPO: 10 ಸಾವಿರ ಕೋಟಿ ರೂ ಮೌಲ್ಯದ ಷೇರು ಮಾರಾಟ ಮಾಡಲಿದೆ ಎಚ್‌ಡಿಎಫ್‌ಸಿ ಬ್ಯಾಂಕ್‌; ಬೃಹತ್‌ ಐಪಿಒಗೆ ಸಿದ್ಧತೆ

ವೇತನ ಎಷ್ಟು

  • ಸಂಬಳ ಮೊದಲ ವರ್ಷ – ತಿಂಗಳಿಗೆ ರೂ 29000.
  • ಎರಡನೇ ವರ್ಷ- ರೂ 31,300
  • ಆನಂತರ ಕೆಲಸ ಆಧರಿಸಿ ವೇತನ ಹೆಚ್ಚಳ

ಅರ್ಜಿ ಸಲ್ಲಿಕೆಗೆ ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸು: 20 ವರ್ಷಗಳು
  • ಗರಿಷ್ಠ ವಯಸ್ಸು: 25 ವರ್ಷಗಳು
  • ಸರ್ಕಾರದ ಮಾನದಂಡಗಳ ಪ್ರಕಾರ ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಉಂಟು.

ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

* ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿರಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ನಂತರ ಹಂತದಲ್ಲಿ ಇರಲಿದೆ. ಅಂತಿಮವಾಗಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಯನ್ನು ಬ್ಯಾಂಕ್‌ನಿಂದ ನಡೆಸಲಾಗುತ್ತದೆ.

ಅರ್ಜಿ ಯೊಂದಿಗೆ ಶುಲ್ಕ ಎಷ್ಟು ತುಂಬಬೇಕು

* ಬ್ಯಾಂಕ್‌ನ ಹುದ್ದೆಗೆ ಪರೀಕ್ಷೆ ಬರೆಯುವ ಬಯಸುವ ಸಾಮಾನ್ಯ ಅರ್ಹತೆ, ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1050 ಹಾಗೂ ಎಸ್‌ಸಿ / ಎಸ್ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ರೂ.250. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ

ಇದನ್ನೂ ಓದಿರಿ: Bank Jobs: ಎಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಕಡೆ ದಿನ, ಪರೀಕ್ಷೆ ಯಾವಾಗ

* ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 2024ರ ನವೆಂಬರ್‌ 16

* ಆನ್ ಲೈನ್ ಪರೀಕ್ಷೆ ದಿನಾಂಕ 2024ರ ಡಿಸೆಂಬರ್‌ 1

ಬ್ಯಾಂಕ್‌ನ ವೆಬ್‌ಸೈಟ್‌

idbibank.in

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ