Bank Jobs: ಎಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Bank Jobs: ಎಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿ

Bank Jobs: ಎಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ?, ಗಮನಿಸಿದ್ದು ತಡವಾದರೆ ಚಿಂತೆ ಬಿಡಿ. ಇನ್ನಾದರೂ ಇದೇ 14ರ ಒಳಗೆ ತಪ್ಪದೇ ಅರ್ಜಿ ಸಲ್ಲಿಸಿಬಿಡಿ. ಹೇಗೆ ಅಂತೀರಾ, ಇಲ್ಲಿದೆ ಆ ಎಲ್ಲ ವಿವರ.

ಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿಬಿಡಿ. (ಸಾಂಕೇತಿಕ ಚಿತ್ರ)
ಸ್‌ಬಿಐ ಸ್ಪೆಷಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ, ಮಿಸ್ ಆಯಿತಾ, ಚಿಂತೆ ಬಿಡಿ ಇದೇ 14ರೊಳಗೆ ಅರ್ಜಿ ಸಲ್ಲಿಸಿಬಿಡಿ. (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಈಗಾಗಲೇ ಪ್ರಕಟಿಸಿರುವ 1497 ಸ್ಪೆಷಲಿಸ್ಟ್‌ ಕೆಡರ್ ಆಫೀಸರ್ಸ್‌ (ಎಸ್‌ಸಿಒ) ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 14ರ ತನಕ ವಿಸ್ತರಿಸಿದೆ. ಸೆಪ್ಟೆಂಬರ್ 14ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಈಗ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ (sbi.co.in)ನಲ್ಲಿ ಆನ್‌ಲೈನ್ ಮೂಲಕ ಅಕ್ಟೋಬರ್ 14ರ ತನಕವೂ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೂ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೇ ದಿನ ಎಂದು ಎಸ್‌ಬಿಐ ಪ್ರಕಟಿಸಿತ್ತು.

ಎಸ್‌ಬಿಐ ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗಳ ವಿವರ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವಂತಹ 1497 ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗಳ ವಿವರ ಹೀಗಿದೆ -

ಯೋಜನಾ ನಿರ್ವಹಣೆ ಮತ್ತು ವಿತರಣೆ ವಿಭಾಗದ ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಹುದ್ದೆಗಳು 187

ಇನ್ಫ್ರಾ ಸಪೋರ್ಟ್‌ ಮತ್ತು ಕ್ಲೌಡ್ ಆಪರೇಷನ್ಸ್ ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) ಹುದ್ದೆಗಳು- 412

ನೆಟ್‌ವರ್ಕಿಂಗ್ ಆಪರೇಷನ್ಸ್‌ ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) ಹುದ್ದೆಗಳು - 80

ಐಟಿ ಆರ್ಕಿಟೆಕ್ಟ್ ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) ಹುದ್ದೆಗಳು- 27

ಮಾಹಿತಿ ಭದ್ರತೆ ಡೆಪುಟಿ ಮ್ಯಾನೇಜರ್ (ಸಿಸ್ಟಮ್ಸ್) ಹುದ್ದೆಗಳು- 7

ಸಹಾಯಕ ವ್ಯವಸ್ಥಾಪಕ (ಸಿಸ್ಟಮ್) ಹುದ್ದೆಗಳು: 784

ಎಸ್‌ಬಿಐ ಸ್ಪೆಷಲಿಸ್ಟ್‌ ಕೆಡರ್‌ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ- ಇಲ್ಲಿದೆ ಸರಳ ಹಂತಗಳು

1) ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ (sbi.co.in) ಭೇಟಿ ನೀಡಿ

2) ಮುಖಪುಟದಲ್ಲಿ ಲಭ್ಯವಿರುವ "ಕೆರಿಯರ್ಸ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ

3) ಎಸ್‌ಬಿಐ ಲೋಗೋ ಪಕ್ಕದಲ್ಲೇ ಇರುವ ಜಾಯಿನ್ ಎಸ್‌ಬಿಐ ಮೆನು ಕ್ಲಿಕ್ ಮಾಡಿ

4) ಅದರಲ್ಲಿ ಕರೆಂಟ್ ಓಪನಿಂಗ್ಸ್ ಅನ್ನು ಕ್ಲಿಕ್ ಮಾಡಿ

5) ಅಲ್ಲಿ “RECRUITMENT OF SPECIALIST CADRE OFFICERS ON REGULAR BASIS DEPUTY MANAGER (SYSTEMS) & ASSISTANT MANAGER (SYSTEM)” ಕ್ಲಿಕ್ ಮಾಡಿ. ಅದರಲ್ಲಿ ಜಾಹೀರಾತು ಮತ್ತು ಅಪ್ಲೈ ಆನ್‌ಲೈನ್ ಎಂಬ ಎರಡು ಲಿಂಕ್‌ಗಳು ಕಾಣುತ್ತವೆ.

6) ಜಾಹೀರಾತು ಪೂರ್ತಿಯಾಗಿ ಓದಿಕೊಂಡು ಅಪ್ಲೈ ಆನ್‌ಲೈನ್ ಕ್ಲಿಕ್ ಮಾಡಿ

7) ಹೊಸದಾಗಿ ಅರ್ಜಿ ಸಲ್ಲಿಸುವವರಾದರೆ ಎಸ್‌ಬಿಐ ಕೆರಿಯರ್ ಸೈಟ್‌ನಲ್ಲಿ ಖಾತೆ ತೆರೆದು ನಂತರ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಖಾತೆ ಹೊಂದಿದ್ದರೆ ಲಾಗಿನ್ ಆಗಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಒಬಿಸಿ ವರ್ಗಗಳ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಅಧಿಸೂಚನೆ - https://sbi.co.in/documents/77530/43947057/130924-DETAIL+ADV_GITC+REGULAR_SCO_2024-25_15.pdf/0cc2be40-6407-ecdb-3099-effd169f7709?t=1726224993068