HDB Financial IPO: 10 ಸಾವಿರ ಕೋಟಿ ರೂ ಮೌಲ್ಯದ ಷೇರು ಮಾರಾಟ ಮಾಡಲಿದೆ ಎಚ್‌ಡಿಎಫ್‌ಸಿ ಬ್ಯಾಂಕ್; ಬೃಹತ್ ಐಪಿಒಗೆ ಸಿದ್ಧತೆ
HDB Financial IPO: ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸ್ ತನ್ನ ಸಾರ್ವಜನಿಕ ಷೇರು ವಿತರಣೆಗೆ ಸಿದ್ಧತೆ ನಡೆಸುತ್ತಿದೆ. ಈ ಹಣಕಾಸು ವರ್ಷದ ಕೊನೆಗೆ ಈ ಐಪಿಒ ಲಿಸ್ಟ್ ಆಗುವ ಸೂಚನೆ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ 10 ಸಾವಿರ ಕೋಟಿ ರೂ ಮೌಲ್ಯದ ಷೇರುಗಳನ್ನು ಈ ಐಪಿಒ ಮೂಲಕ ಮಾರಾಟ ಮಾಡಲಿದೆ.
ಬೆಂಗಳೂರು: ಆಫರ್ ಫಾರ್ ಸೇಲ್ (ಒಎಫ್‌ಎಸ್) ಮೂಲಕ ಸುಮಾರು 10 ಸಾವಿರ ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವುದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ. ಎಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್ ಲಿಮಿಟೆಡ್‌ನ ಬಹುನಿರೀಕ್ಷಿತ ಐಪಿಒ ಈ ಆರ್ಥಿಕ ವರ್ಷದೊಳಗೆ ಆರಂಭವಾಗುವ ಸೂಚನೆಯಿದೆ. ಫ್ರೆಶ್ ಇಶ್ಯೂ 2,500 ಕೋಟಿ ರೂಪಾಯಿ ಸೇರಿದಂತೆ ಒಟ್ಟು 12500 ಕೋಟಿ ರೂಪಾಯಿ ಗಾತ್ರದ ಬೃಹತ್ ಐಪಿಒ ಇದಾಗಿರಲಿದೆ.
ಈ ಹಣಕಾಸು ವರ್ಷದ ಅಂತ್ಯದಲ್ಲಿ ಈ ಸಾರ್ವಜನಿಕ ಷೇರು ವಿತರಣೆ ಪ್ರಕ್ರಿಯೆ ನಡೆಯುವ ಸೂಚನೆಯಿದೆ. ಮಾರುಕಟ್ಟೆ ಪರಿಸ್ಥಿತಿಗಳು, ನಿಯಂತ್ರಕರ ಅನುಮತಿ ಮತ್ತು ಇತರೆ ಅಂಶಗಳ ಆಧಾರದಲ್ಲಿ ಓಎಫ್‌ಎಸ್ ಹಾದಿ ಮೂಲಕ ಐಪಿಒ ಪ್ರಕ್ರಿಯೆ ನಡೆಸಲಾಗುವುದು ಎಂದು ಎಚ್‌ಡಿಎಫ್‌ಸಿ ತಿಳಿಸಿದೆ. ಐಪಿಒ ಬಳಿಕ ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸ್ ಕೆಲವೊಂದು ನಿಬಂಧನೆಗಳೊಂದಿಗೆ ತನ್ನ ಅಂಗಸಂಸ್ಥೆಯಾಗಿ ಉಳಿಯಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.
ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸ್ ಎ್ನುವುದು ರಿಟೇಲ್ ಮತ್ತು ಕಮರ್ಷಿಯಲ್ ವಿಭಾಗದ ಬ್ಯಾಂಕೇತರ ಹಣಕಾಸು ಕಂಪನಿಯಾಗಿದೆ. ವೈಯಕ್ತಿಕ ಸಾಲ, ,ವಾಹನ ಸಾಲ, ಆಸ್ತಿ ಮೇಲೆ ಸಾಲ ಸೇರಿದಂತೆ ವಿವಿಧ ಪ್ರಾಡಕ್ಟ್‌ಗಳನ್ನು ಎಚ್‌ಡಿಬಿ ಹೊಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ನಿಗದಿಪಡಿಸಿದಂತೆ ಷೇರುಪೇಟೆಯಲ್ಲಿ ಲಿಸ್ಟ್ ಆಗಲು ಬೇಕಾದ ಕಡ್ಡಾಯ ಅಗತ್ಯಗಳನ್ನು ಪೂರೈಸಲು ಈ ಐಪಿಒ ನೆರವಾಗಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಎಚ್‌ಡಿಬಿಯಲ್ಲಿ ಶೇಕಡ 94.64ರಷ್ಟು ಪಾಲು ಹೊಂದಿದೆ. ಈ ವರ್ಷ ಜುಲೈ ತಿಂಗಳಿನಲ್ಲಿಯೇ ಎಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್ ಅನ್ನು ಷೇರುಪೇಟೆಯಲ್ಲಿ ಲಿಸ್ಟ್ ಮಾಡುವ ಸೂಚನೆ ನೀಡಿತ್ತು ಆ ಸಮಯದಲ್ಲಿ ಆಡಳಿತ ಮಂಡಳಿ ಇದಕ್ಕೆ ಅನುಮತಿ ನೀಡಿತತು. ಸೆಪ್ಟೆಂಬರ್ ತಿಂಗಳಲ್ಲಿ ಆಡಳಿತ ಮಂಡಳಿಯು ಐಪಿಒಗೆ ಸಮ್ಮತಿ ನೀಡಿತ್ತು.
ಇದು ಇತ್ತೀಚಿನ ವರ್ಷದ ಬೃಹತ್ ಐಪಿಒ ಆಗಲಿದೆ. ಸದ್ಯ ಎಚ್‌ಡಿಬಿಯು ಐಪಿಒ ಲಿಸ್ಟಿಂಗ್‌ಗೆ ಸಂಬಂಧಪಟ್ಟಂತೆ ತಯಾರಿಯಲ್ಲಿ ತೊಡಗಿದೆ. ಜೆಫರೀಸ್, ಜೆಎಂ ಫೈನಾನ್ಶಿಯಲ್, ಮೋರ್ಗಾನ್ ಸ್ಟಾನ್ಲಿ ಮತ್ತು ನೋಮುರಾ ಸೇರಿದಂತೆ ಹಲವಾರು ಹೂಡಿಕೆ ಬ್ಯಾಂಕ್‌ಗಳನ್ನು ಸಲಹೆಗಾರರನ್ನಾಗಿ ನೇಮಿಸಿದೆ. ಬ್ಯಾಂಕ್ ಆಫ್ ಅಮೇರಿಕಾ, ಐಸಿಐಸಿಐ ಸೆಕ್ಯುರಿಟೀಸ್, ಆಕ್ಸಿಸ್ ಕ್ಯಾಪಿಟಲ್ ಮತ್ತು ಐಐಎಫ್‌ಎಲ್ ಮುಂತಾದ ಸಂಸ್ಥೆಗಳು ಈ ಐಪಿಒದಲ್ಲಿ ಪ್ರಮುಖ ಪಾತ್ರವಹಿಸಲಿವೆ. ಒಟ್ಟಾರೆ, ದೇಶ ಮತ್ತು ವಿದೇಶದ ಸಂಸ್ಥೆಗಳು ಈ ಐಪಿಒದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ.
ಈಗಾಗಲೇ ಎಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್‌ನ ಬೆಳವಣಿಗೆ ಉತ್ತಮವಾಗಿದೆ. 2023 ಹಣಕಾಸು ವರ್ಷದಲ್ಲಿ ಕಂಪನಿಯ ವ್ಯವಹಾರ 66 ಸಾವಿರ ಕೋಟಿಗೆ ತಲುಪಿ ಶೇಕಡ 17ರಷ್ಟು ಪ್ರಗತಿಯಾಗಿತ್ತು. ಕಂಪನಿಯ ಪರ್ಸನಲ್ ಲೋನ್, ವಾಹನ, ಸಣ್ಣ ವ್ಯಾಪಾರ ಸಾಲಗಳಿಗೆ ಹೆಚ್ಚಿನ ಬೇಡಿಕೆ ಇದೆ.