logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್‌ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್‌ಗೆ ಏನಾಯ್ತು? ಇಲ್ಲಿದೆ ವಿವರ

ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್‌ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್‌ಗೆ ಏನಾಯ್ತು? ಇಲ್ಲಿದೆ ವಿವರ

Praveen Chandra B HT Kannada

Dec 04, 2024 05:01 PM IST

google News

ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್‌ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್‌ಗೆ ಏನಾಯ್ತು? ಇಲ್ಲಿದೆ ವಿವರ (PTI Photo) (PTI12_02_2024_000355B)

    • Proba-3 mission: ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ 3 ಮಿಷನ್‌ ಇಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ನೆಗೆಯಬೇಕಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಈ ಲಾಂಚ್‌ ಅನ್ನು ಇಸ್ರೋ ನಾಳೆಗೆ ಮುಂದೂಡಿದೆ.
ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್‌ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್‌ಗೆ ಏನಾಯ್ತು? ಇಲ್ಲಿದೆ ವಿವರ
 (PTI Photo) (PTI12_02_2024_000355B)
ಇಸ್ರೋ ಪ್ರೊಬಾ -3 ಉಡ್ಡಯನ ಡಿಸೆಂಬರ್‌ 5ಕ್ಕೆ ಮುಂದೂಡಿಕೆ, ಸೌರ ಕರೋನಾ ಗಗನನೌಕೆ ಮಿಷನ್‌ಗೆ ಏನಾಯ್ತು? ಇಲ್ಲಿದೆ ವಿವರ (PTI Photo) (PTI12_02_2024_000355B) (PTI)

Proba-3 mission: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ (ESA) ಪ್ರೊಬಾ -3 ಮಿಷನ್‌ನ ಉಡಾವಣೆಯನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ, ಡಿಸೆಂಬರ್ 4ರಂದು ನಡೆಸಬೇಕಿದ್ದ ಈ ಮಿಷನ್‌ ಅನ್ನು ಡಿಸೆಂಬರ್‌ 5ಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿದೆ. ಹೊಸ ಉಡಾವಣಾ ಸಮಯವನ್ನು ಗುರುವಾರ, ಡಿಸೆಂಬರ್ 5 ರಂದು ಸಂಜೆ 4.12ಕ್ಕೆ ನಿಗದಿಪಡಿಸಲಾಗಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ -ಎಕ್ಸ್‌ಎಲ್‌) ರಾಕೆಟ್‌ ಮೂಲಕ ಈ ಉಡ್ಡಯನ ನಡೆಯಲಿದೆ. ಮಿಷನ್‌ನಲ್ಲಿ ಕಾಣಿಸಿದ ವೈಪರೀತ್ಯದಿಂದಾಗಿ ಉಡ್ಡಯನ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.

ಪ್ರೊಬಾ 3 ಮಿಷನ್‌ ಭಾರತಕ್ಕೆ ಮಹತ್ವದ್ದಾಗಿದೆ. ಇದದು ಇಎಸ್‌ಇ ಮತ್ತು ಇಸ್ರೋ ನಡುವಿನ ಐತಿಹಾಸಿಕ ಸಹಯೋಗವನ್ನು ಸೂಚಿಸುತ್ತದೆ. ಇದು 2001ರಲ್ಲಿ Proba-1 ಭೂ ವೀಕ್ಷಣಾ ಕಾರ್ಯಾಚರಣೆಯ ನಂತರ ಇವೆರಡು ಸಂಸ್ಥೆಗಳ ಮೊದಲ ಉಪಗ್ರಹ ಉಡಾವಣೆಯಾಗಿದೆ.

ಪ್ರೊಬಾ -3 ಎರಡು ಗಗನನೌಕೆಗಳನ್ನು ಒಳಗೊಂಡಿರುತ್ತದೆ. ಆಕಲ್ಟರ್ ಸ್ಪೇಸ್‌ಕ್ರಾಫ್ಟ್ (OSC) ಮತ್ತು ಕರೋನಾಗ್ರಾಫ್ ಸ್ಪೇಸ್‌ಕ್ರಾಫ್ಟ್ (CSC) ಎಂಬ ಈ ಎರಡು ಬಾಹ್ಯಾಕಾಶ ನೌಕೆಗಳು "ಸ್ಟ್ಯಾಕ್ಡ್ ಕಾನ್ಫಿಗರೇಶನ್"ನಲ್ಲಿ ಜತೆಯಾಗಿರುತ್ತವೆ. ಕೃತಕ ಸೌರ ಗ್ರಹಣಗಳನ್ನು ಅನುಕರಿಸಿ ಕಾರ್ಯನಿರ್ವಹಿಸುತ್ತದೆ. ಎರಡು ಉಪಗ್ರಹಗಳು ಹೆಚ್ಚು ಅಂಡಾಕಾರದ ಕಕ್ಷೆಗಳಲ್ಲಿ 150-ಮೀಟರ್ ದೂರದಲ್ಲಿ ಜತೆಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ನೌಕೆಗಳಾಗಿವೆ.

ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಜತೆ ಒಪ್ಪಂದವನ್ನು ಪಡೆದುಕೊಂಡಿರುವ ಇಸ್ರೋ ಈ ಮಿಷನ್‌ ಅನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್)ನ ವಾಣಿಜ್ಯ ವಿಭಾಗದ ಅಡಿಯಲ್ಲಿ ಲಾಂಚ್‌ ಮಾಡಲಾಗುತ್ತಿದೆ. ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ ರಾಕೆಟ್‌)ನ 61ನೇ ಹಾರಾಟವಾಗಿದೆ. ಹೆಚ್ಚು ತೂಕದ ಬಾಹ್ಯಾಕಾಶ ಮಿಷನ್‌ ಕೈಗೊಳ್ಳುವಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ ಹೆಸರುವಾಸಿಯಾಗಿದೆ. ಪ್ರೊಬಾ 3ಯು ವಿನೂತನ ಪ್ರಪ್ರಥಮ ಮಿಷನ್‌ ಆಗಿದೆ. ಎರಡು ಬಾಹ್ಯಾಕಾಶ ನೌಕೆಗಳು ಒಂದೇ ಸಂಯೋಜಿತ ಘಟಕಗಳಾಗಿ ಒಟ್ಟಿಗೆ ಹಾರುವ ಮಿಷನ್‌ ಇದಾಗಿದೆ. ಸೌರ ಕರೋನಾಗ್ರಾಫ್‌ ರಚಿಸಲು ಈ ಎರಡು ಬಾಹ್ಯಾಕಾಶ ನೌಕೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಕರೋನಾಗ್ರಾಫ್ ಸೂರ್ಯನ ಕರೋನವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಈಗಾಗಲೇ ಭಾರತವು ಸೌರ ಮಿಷನ್‌ ಕೈಗೊಂಡಿದೆ. ಆದಿತ್ಯ-L1 ಅನ್ನು ಸೆಪ್ಟೆಂಬರ್ 2023 ರಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ. ಇಸ್ರೋದ ಈ ಪರಿಣತಿಯನ್ನು ಮನಗಂಡು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಈ ಮಹತ್ವದ ಕೆಲಸವನ್ನು ನೀಡಿದೆ. ಪ್ರೋಬಾ 3 ಮೂಲಕ ವಿಜ್ಞಾನಿಗಳು ಸೌರ ಕರೋನಾವನ್ನು ಈ ಹಿಂದಿಗಿಂತ ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಲಿದ್ದಾರೆ. ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಮತ್ತು ಇತರ ಸೌರ ವಿದ್ಯಮಾನಗಳಿಗೆ ಅಮೂಲ್ಯವಾದ ಮಾಹಿತಿ ಇದರಿಂದ ದೊರಕಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ