Delhi fire: ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ, 6 ನವಜಾತ ಶಿಶುಗಳ ಸಾವು
May 26, 2024 11:20 AM IST
ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಕಂಡು ಬಂದ ಬೆಂಕಿ.
- ರಾಜಧಾನಿ ದೆಹಲಿಯ ಮಕ್ಕಳ ಆಸ್ಪತ್ರೆಯೊಂದರಲ್ಲಿ( Delhi Children hospital Fire) ಶನಿವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಆರು ಮಕ್ಕಳು ಮೃತಪಟ್ಟಿವೆ.
ದೆಹಲಿ: ಗುಜರಾತ್‌ನ ರಾಜ್ ಕೋಟ್‌ನಲ್ಲಿ ಭಾರೀ ಅಗ್ನಿದುರಂತದ ನಡುವೆಯೇ ದೆಹಲಿ ನಗರದ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಆರು ನವಜಾತ ಶಿಶುಗಳು ಮೃತಪಟ್ಟಿವೆ. ಇನ್ನೂ ಆರು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಪೂರ್ವ ದೆಹಲಿಯ ವಿವೇಕ ವಿಹಾರ ಪ್ರದೇಶದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿಯಿಡೀ ಬೆಂಕಿಯನ್ನು ಆರಿಸುವ ಕೆಲಸ ನಡೆದಿದ್ದು, ಭಾನುವಾರ ಬೆಳಗ್ಗಿನ ಹೊತ್ತಿಗೆ ಪರಿಸ್ಥಿತಿ ತಹ ಬದಿಗೆ ಬಂದಿದೆ. ಕೆಲವು ಮಕ್ಕಳನ್ನು ರಕ್ಷಿಸಲಾಗಿದ್ದು, ಎಲ್ಲ ಮಕ್ಕಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದೆಹಲಿ ಪ್ರಮುಖ ಭಾಗವಾಗಿರುವ ವಿವೇಕ ಭಾಗ್‌ನ ಮಕ್ಕಳ ಆಸ್ಪತ್ರೆಯೊಂದರಲ್ಲಿ ಶನಿವಾರ ಮಧ್ಯರಾತ್ರಿ ಕಾಣಿಸಿಕೊಂಡಿತು. ಕೂಡಲೇ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದರೂ ಬೆಂಕಿ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದರು. ಎಂಟು ಅಗ್ನಿ ಶಾಮಕ ದಳದ ವಾಹನಗಳು ಏಕಕಾಲಕ್ಕೆ ಅಗ್ನಿ ನಂದಿಸಲು ಮುಂದಾದವು. ನೂರಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು. ಮಕ್ಕಳದ ಘಟಕದಲ್ಲಿ ನವಜಾತ ಶಿಶುಗಳೇ ಹೆಚ್ಚಿದ್ದವು. ಬೆಂಕಿಯಿಂದ ಆರು ಮಕ್ಕಳು ಮೃತಪಟ್ಟರೆ, ಇನ್ನೂ ಆರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ರಕ್ಷಣಾ ಸಿಬ್ಬಂದಿ ಭಾರೀ ಬೆಂಕಿ ನಡುವೆಯೂ ಒಳನುಗ್ಗಿ ಮಕ್ಕಳನ್ನು ರಕ್ಷಿಸಿ ಅವರನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದರು. ಹನ್ನೆರಡು ಮಕ್ಕಳನ್ನು ರಕ್ಷಿಸಿದರೆ ಗಂಭೀರವಾಗಿರುವ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನವಜಾತ ಶಿಶುಗಳನ್ನು ನಾನಾ ಕಾರಣಗಳಿಂದ ಎನ್ ಐಸಿಯುನಲ್ಲಿ ಇರಿಸಲಾಗುತ್ತದೆ. ಆ ಭಾಗದಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದು. ಅಲ್ಲಿ ತಾಯಂದರು ಇರಲಿಲ್ಲ. ಇನ್ನೊಂದು ಬ್ಲಾಕ್ ನಲ್ಲಿ ತಾಯಂದರು ಹಾಗೂ ಕುಟುಂಬದವರು ಇದ್ದರು.
ಇದನ್ನೂ ಓದಿರಿ: ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ, ಮಳೆಗೆಸೋರುವ, ಹೊಗೆ ಕಾರುವ ಬಸ್‌ಗಳು, ಇಲ್ಲಿವೆ ಆಯ್ದ 5 ಸೋಷಿಯಲ್ ಮೀಡಿಯಾ ಪೋಸ್ಟ್
ಮಕ್ಕಳನ್ನು ಕಳೆದುಕೊಂಡ ತಾಯಂದಿರು ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಂದಿರನ್ನು ಸಮಾಧಾನಪಡಿಸಲು ಹರಸಾಹಸಪಡಬೇಕಾಯಿತು.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಸಿಲೆಂಡರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡು ಅಗ್ನಿ ಕೆನ್ನಾಲಗೆ ಮಕ್ಕಳನ್ನು ಆಹುತಿ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಯಾವ ಕಾರಣಕ್ಕೆ ದುರ್ಘಟನೆ ನಡೆಯಿತು. ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಇದೆಯಾ ಎನ್ನುವುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲು ಆದೇಶಿಸಲಾಗಿದೆ. ಘಟನೆ ಕುರಿತು ದೆಹಲಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ಶನಿವಾರ ರಾತ್ರಿಯೇ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ದೆಹಲಿಯ ಶಹರದ ಭಾಗದ ವಸತಿ ಪ್ರದೇಶವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)