G20 Declaration: ಜಿ20 ನಾಯಕರ ಒಮ್ಮತದ ನವದೆಹಲಿ ಘೋಷಣೆ ಅಂಗೀಕಾರ ಎಂದು ಘೋಷಿಸಿದ ಪ್ರಧಾನಿ ಮೋದಿ, ಭಾರತದ ಅಧ್ಯಕ್ಷತೆಗೆ ಮಹತ್ವದ ಜಯ
Sep 09, 2023 05:28 PM IST
ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ.
ಜಿ20 ನಾಯಕರ ಶೃಂಗದಲ್ಲಿ ಒಮ್ಮತ ಇಲ್ಲದೇ ಇದ್ದರೆ ಜಂಟಿ ಘೋಷಣೆ ಇರದು. ಆದರೆ, ಭಾರತದ ಅಧ್ಯಕ್ಷತೆಯ ಜಿ20 ಶೃಂಗದಲ್ಲಿ ಭಿನ್ನಮತ ಇದ್ದ ಉಕ್ರೇನ್ ರಷ್ಯಾ ಸಮರದ ವಿಚಾರದಲ್ಲೂ ಸದಸ್ಯರಲ್ಲಿ ಒಮ್ಮತ ಮೂಡಿದೆ. ಹೀಗಾಗಿ ಒಮ್ಮತದ ನವದೆಹಲಿ ಘೋಷಣೆಯನ್ನು ಸದಸ್ಯರು ಅಂಗೀಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿ: ಜಿ20 ಅಧ್ಯಕ್ಷ ಸ್ಥಾನವಹಿಸಿಕೊಂಡಿರುವ ಭಾರತದ (India's G20 presidency) ಮಟ್ಟಿಗೆ ನವದೆಹಲಿಯ ಜಿ20 ಶೃಂಗದ ಮೊದಲ ದಿನದ ಕಲಾಪ ಅತ್ಯಂತ ಮಹತ್ವದ್ದಾಗಿತ್ತು. ಸದಸ್ಯ ರಾಷ್ಟ್ರಗಳ ಒಮ್ಮತದೊಂದಿಗೆ ನವದೆಹಲಿ ಘೋಷಣೇಯನ್ನು ಜಿ20 ಶೃಂಗ ಶನಿವಾರ (ಸೆ.9) ಅಂಗೀಕರಿಸಿದೆ. ಸದಸ್ಯ ರಾಷ್ಟ್ರಗಳ ನಡುವಿನ ಒಮ್ಮತ ಮೂಡಿರುವುದು ಭಾರತದ ಮಟ್ಟಿಗೆ ಸಿಕ್ಕ ಮಹತ್ವದ ಗೆಲುವು ಎಂದು ಬಣ್ಣಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ಶೃಂಗ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡುತ್ತ, ನಿಮಗೊಂದು ಶುಭ ಸುದ್ದಿ ಹೇಳುತ್ತೇನೆ. ನಮ್ಮ ತಂಡಗಳ ಕಠಿಣ ಪರಿಶ್ರಮ ಮತ್ತು ನಿಮ್ಮ ಸಹಕಾರದೊಂದಿಗೆ ಜಿ20 ನ್ಯೂಡೆಲ್ಲಿ ಲೀಡರ್ಸ್ ಡಿಕ್ಲರೇಷನ್ (G20 New Delhi Leaders Summit Declaration) ಕುರಿತು ಒಮ್ಮತಕ್ಕೆ ಬರಲಾಗಿದೆ" ಎಂದು ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎರಡನೇ ಅವಧಿಯಲ್ಲ ಘೋಷಿಸಿದರು.
ಈ G20 ಘೋಷಣೆಯನ್ನು ಅಂಗೀಕರಿಸುವುದು ನನ್ನ ಪ್ರಸ್ತಾಪವಾಗಿದೆ. ಸದಸ್ಯರ ಅನುಮೋದನೆಯ ನಂತರ ಅದನ್ನು ಅಂಗೀಕರಿಸಲಾಗಿದೆ ಎಂದು ಮೋದಿ ಘೋಷಿಸಿದರು.
ಇದನ್ನೂ ಓದಿ| ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ
ಈ ಸಂದರ್ಭದಲ್ಲಿ, ನಮ್ಮ ಮಂತ್ರಿಗಳು, ಶೆರ್ಪಾಗಳು ಮತ್ತು ತಮ್ಮ ಕಠಿಣ ಪರಿಶ್ರಮದಿಂದ ಇದನ್ನು ಸಾಧ್ಯವಾಗಿಸಿದ ಎಲ್ಲಾ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಜಿ20 ಅಧ್ಯಕ್ಷ ಸ್ಥಾನ ಮತ್ತು ಕಾರ್ಯಸಾಧನೆ ವಿವರ ನೀಡಿದ ಪ್ರಧಾನಿ ಮೋದಿ
ಭಾರತದ ಜಿ 20 ಅಧ್ಯಕ್ಷ ಸ್ಥಾನವು ಜಿ-20 ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯದ್ದಾಗಿತ್ತು. 112 ಫಲಿತಾಂಶಗಳು ಮತ್ತು ಅಧ್ಯಕ್ಷೀಯ ದಾಖಲೆಗಳೊಂದಿಗೆ, ನಾವು ಹಿಂದಿನ ಅಧ್ಯಕ್ಷರ ಕಾರ್ಯಗಳನ್ನು ದ್ವಿಗುಣಗೊಳಿಸಿದ್ದೇವೆ ಎಂದು ಪಿಎಂ ಮೋದಿ ಹೇಳಿದರು.
ಸದಸ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿರುವ ಕಾರಣ ಆ ವಿಚಾರವಾಗಿ ಸದಸ್ಯರಲ್ಲಿ ಒಮ್ಮತವನ್ನು ಸಾಧಿಸುವುದು ಕಷ್ಟಕರವಾಗಿದೆ.
ಇದನ್ನೂ ಓದಿ| ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್ ಮತ್ತು ವರದಿ
ಜಿ-20 ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆ ಹೊಂದಿದ್ದ ಭಾರತದ ಜಿ 20 ಅಧ್ಯಕ್ಷ ಸ್ಥಾನದಲ್ಲಿ 73 ಫಲಿತಾಂಶಗಳು ಮತ್ತು 39 ಲಗತ್ತಿಸಲಾದ ದಾಖಲೆಗಳು (ಅಧ್ಯಕ್ಷತೆಯ ದಾಖಲೆಗಳು, ವರ್ಕಿಂಗ್ ಗ್ರೂಪ್ ಫಲಿತಾಂಶದ ದಾಖಲೆಗಳನ್ನು ಒಳಗೊಂಡಿಲ್ಲ) ಗಮನಸೆಳೆದಿವೆ.
ಜಿ20 ನಾಯಕರ ನವದೆಹಲಿ ಘೋಷಣೆಯ ಪಿಡಿಎಫ್ ಪ್ರತಿ ಇಲ್ಲಿದೆ..
ಜಿ20 ದೆಹಲಿ ಘೋಷಣೆ ಮತ್ತು ಉಕ್ರೇನ್ ವಿಚಾರದ ಹೊಸ ಪಠ್ಯ
ಜಿ20 ಶೆರ್ಪಾ ಮೀಟಿಂಗ್ ಹರಿಯಾಣದಲ್ಲಿ ಸೆ.3ರಿಂದ 6ರ ತನಕ ನಡೆಯಿತು. ಉಕ್ರೇನ್ ವಿಚಾರದಲ್ಲಿ ನಡೆದ ಮಾತುಕತೆಯಲ್ಲಿ ಘೋಷಣೆಯಲ್ಲಿದ್ದ ಪಠ್ಯದ ಬಗ್ಗೆ ಯಾವುದೇ ಒಮ್ಮತ ಮೂಡಿಸುವುದು ಅಲ್ಲಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಜಂಟಿ ಘೋಷಣೆ ಇಲ್ಲದೆ ಶೃಂಗ ಮುಗಿದುಬಿಡಬಹುದು ಎಂಬ ಕಳವಳ ವ್ಯಕ್ತವಾಗಿತ್ತು.
ಇದನ್ನೂ ಓದಿ| ಜಿ20 ಶೃಂಗಸಭೆಯಲ್ಲಿ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು
ಆ ರೀತಿಯ ಅಸ್ಪಷ್ಟ ನಿರ್ಣಯವನ್ನು ತೆಗೆದುಕೊಳ್ಳುವ ಬದಲು ಭಾರತವು, ಉಕ್ರೇನ್ ವಿಚಾರಕ್ಕೆ ಸಂಬಂಧಿಸಿ ಹೊಸ ಪಠ್ಯದ ಪ್ಯಾರಾವನ್ನು ಎಲ್ಲರಿಗೂ ನೀಡಿತು. ಅದನ್ನು ಜಿ20 ಗ್ರೂಪ್‌ನ ಎಲ್ಲ ನಾಯಕರೂ ಒಪ್ಪಿಕೊಂಡರು ಎಂದು ಸಭೆಯಲ್ಲಿ ಭಾಗಿಯಾಗಿದ್ದ ಜಿ7 ರಾಷ್ಟ್ರದ ಪ್ರತಿನಿಧಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿಯಾಗಿದೆ. '