G20 Summit: ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  G20 Summit: ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ

G20 Summit: ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ

African Union: ಸಬ್ಕಾ ಸಾಥ್ ಭಾವನೆಗೆ ಅನುಗುಣವಾಗಿ, ಆಫ್ರಿಕನ್ ಒಕ್ಕೂಟಕ್ಕೆ ಜಿ20ಯ ಶಾಶ್ವತ ಸದಸ್ಯತ್ವವನ್ನು ನೀಡಬೇಕು ಎಂದು ಭಾರತ ಪ್ರಸ್ತಾಪಿಸಿತ್ತು. ನಾವೆಲ್ಲರೂ ಈ ಪ್ರಸ್ತಾಪವನ್ನು ಒಪ್ಪಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಮೋದಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು.

ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ
ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ ಪಿಎಂ ಮೋದಿ

ನವದೆಹಲಿ: ಇಂದಿನಿಂದ ಎರಡು ದಿನಗಳ ಕಾಲ ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಫ್ರಿಕನ್ ಒಕ್ಕೂಟಕ್ಕೆ ಖಾಯಂ ಸದಸ್ಯತ್ವ ಘೋಷಿಸಿದ್ದಾರೆ.

G20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪಿಎಂ ಮೋದಿ, 1999 ರಲ್ಲಿ ರಚಿಸಿದ 55 ಸದಸ್ಯ ರಾಷ್ಟ್ರಗಳ ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ್ದಾರೆ. ಸಬ್ಕಾ ಸಾಥ್ (ಎಲ್ಲರೊಂದಿಗೆ) ಭಾವನೆಗೆ ಅನುಗುಣವಾಗಿ, ಆಫ್ರಿಕನ್ ಒಕ್ಕೂಟಕ್ಕೆ ಜಿ20ಯ ಶಾಶ್ವತ ಸದಸ್ಯತ್ವವನ್ನು ನೀಡಬೇಕು ಎಂದು ಭಾರತ ಪ್ರಸ್ತಾಪಿಸಿತ್ತು. ನಾವೆಲ್ಲರೂ ಈ ಪ್ರಸ್ತಾಪವನ್ನು ಒಪ್ಪಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಮೋದಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು.

ಜಿ20ಯ ಖಾಯಂ ಸದಸ್ಯತ್ವ ಪಡೆದು ತಮ್ಮ ಆಸನವನ್ನು ಅಲಂಕರಿಸಲು ಆಫ್ರಿಕನ್ ಒಕ್ಕೂಟದ ಮುಖ್ಯಸ್ಥರನ್ನು ಮೋದಿ ಆಹ್ವಾನಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಆಫ್ರಿಕನ್ ಯೂನಿಯನ್‌ನ ಪ್ರಸ್ತುತ ಅಧ್ಯಕ್ಷರಾಗಿರುವ ಕೊಮೊರೊಸ್ ಅಧ್ಯಕ್ಷ ಅಜಾಲಿ ಅಸ್ಸೌಮಾನಿ ಅವರನ್ನು ಆಸನಕ್ಕೆ ಕರೆದೊಯ್ದರು.

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ವಿಶ್ವವು ಯುದ್ಧದ ವಿಚಾರದಲ್ಲಿ ವಿಶ್ವಾಸ ಕೊರತೆಯ ಹೊಸ ಸವಾಲನ್ನು ಎದುರಿಸುತ್ತಿದೆ. ನಾವು ಕೋವಿಡ್‌ನಂತಹ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಸಾಧ್ಯವಾದರೆ, ಈ ನಂಬಿಕೆಯ ಕೊರತೆಯ ಸವಾಲನ್ನು ಸಹ ನಾವು ಗೆಲ್ಲಬಹುದು ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎಂದು ಇದೇ ವೇಳೆ ಮೋದಿ ಹೇಳಿದರು.

ಇದು ಹಳೆಯ ಸವಾಲುಗಳು ನಮ್ಮಿಂದ ಹೊಸ ಪರಿಹಾರಗಳನ್ನು ಬಯಸುತ್ತಿರುವ ಸಮಯ. ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು. ನಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಾ ಮುನ್ನಡೆಯಬೇಕು. 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್' ಎಂಬ ಮಂತ್ರವು ನಮಗೆಲ್ಲರಿಗೂ ಮಾರ್ಗದರ್ಶನ ನೀಡುವ ಬೆಳಕಾಗಬೇಕೆಂದರು.

ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು

Bharat vs India: ರಾಷ್ಟ್ರದ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ ದೇಶದ ಹೆಸರು ಇಂಗ್ಲಿಷ್​ ಅಕ್ಷರಗಳಲ್ಲಿ 'India' ಎಂದು ಇರುವ ಬದಲು 'Bharat' ಎಂದು ಇರುವುದು ಕಂಡು ಬಂದಿದೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ..

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.