logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ, ಅಂಥದ್ದು ಏನಿದೆ ಅದರಲ್ಲಿ..

ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ, ಅಂಥದ್ದು ಏನಿದೆ ಅದರಲ್ಲಿ..

Umesh Kumar S HT Kannada

Feb 09, 2024 09:09 AM IST

google News

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ. (ಸಾಂಕೇತಿಕ ಚಿತ್ರ) ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ ಅಂಥದ್ದು ಏನಿದೆ ಅದರಲ್ಲಿ ಎಂಬುದರ ವಿವರ ಈ ವರದಿಯಲ್ಲಿದೆ.

  • ಸದ್ಯ ರಾಜಕೀಯ ವಲಯದಲ್ಲಿ ಶ್ವೇತ ಪತ್ರದ್ದೇ ಮಾತುಕತೆ. ಹಾಗಾದರೆ, ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ, ಅಂಥದ್ದು ಏನಿದೆ ಅದರಲ್ಲಿ, ಇಲ್ಲಿದೆ ಆ ಎಲ್ಲ ವಿವರ. 

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ. (ಸಾಂಕೇತಿಕ ಚಿತ್ರ) ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ ಅಂಥದ್ದು ಏನಿದೆ ಅದರಲ್ಲಿ ಎಂಬುದರ ವಿವರ ಈ ವರದಿಯಲ್ಲಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ. (ಸಾಂಕೇತಿಕ ಚಿತ್ರ) ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ ಅಂಥದ್ದು ಏನಿದೆ ಅದರಲ್ಲಿ ಎಂಬುದರ ವಿವರ ಈ ವರದಿಯಲ್ಲಿದೆ.

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಜನವರಿ 31ಕ್ಕೆ ಶುರುವಾಗಿದ್ದು ಫೆ.9 ತನಕ ನಿಗದಿಯಾಗಿತ್ತು. ಆದರೆ, ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅಧಿವೇಶನವನ್ನು ಒಂದು ದಿನ ವಿಸ್ತರಿಸುವುದಕ್ಕೆ ಅನುಮತಿ ಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದರು. ಇದರಂತೆ ಬಜೆಟ್ ಅಧಿವೇಶನ ಫೆ.10ರಂದು ಕೊನೆಯಾಗಲಿದೆ.

ಬಜೆಟ್ ಅಧಿವೇಶನ ಒಂದು ದಿನ ವಿಸ್ತರಣೆಯಾಗಿರುವುದು ಯಾಕೆ? ಕಾರಣ ಇಷ್ಟೆ - ಇದೇ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 2014ರ ಮೊದಲಿನ 10 ವರ್ಷ ಮತ್ತು ನಂತರದ 10 ವರ್ಷಗಳ ಆರ್ಥಿಕತೆಯ ಸ್ಥಿತಿಗತಿಗೆ ಸಂಬಂಧಿಸಿದ ಶ್ವೇತ ಪತ್ರ (White Paper) ಮಂಡಿಸಲಿದೆ ಎಂದು ವಿತ್ತ ಸಚಿವರು ಹೇಳಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಸ್ಪೀಕರ್‌ ಓಂಬಿರ್ಲಾ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇದಕ್ಕೆ ಸ್ಪೀಕರ್ ಒಪ್ಪಿಗೆಯನ್ನೂ ನೀಡಿದರು.

ಲೋಕಸಭೆಯಲ್ಲಿ ಅಧಿವೇಶನ ಒಂದು ದಿನ ವಿಸ್ತರಣೆಯಾಗಿರುವುದನ್ನು ಸ್ಪೀಕರ್ ಒಂ ಬಿರ್ಲಾ ಅವರು ಘೋಷಿಸಿದ್ದು,"ಗೌರವಾನ್ವಿತ ಸದಸ್ಯರು, ಗೌರವಾನ್ವಿತ ಸಂಸದೀಯ ವ್ಯವಹಾರಗಳ ಸಚಿವರು 17 ನೇ ಲೋಕಸಭೆಯ 15 ನೇ ಅಧಿವೇಶನವನ್ನು 2024 ರ ಫೆಬ್ರವರಿ 10 ರ ಶನಿವಾರದವರೆಗೆ ವಿಸ್ತರಿಸುವುದಕ್ಕೆ ಅವಕಾಶ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ" ಎಂದು ಹೇಳಿದರು.

ಈ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿದ್ದು, ವಿಶ್ಲೇಷಣೆಗಳು ಶುರುವಾಗಿವೆ. 2014ರ ಮೊದಲಿನ ಹತ್ತು ವರ್ಷ ಎಂದರೆ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಆಡಳಿತದ ಎರಡು ಅವಧಿ. ನಂತರದ 10 ವರ್ಷ ಎಂದರೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತ.

ಶ್ವೇತಪತ್ರ ಎಂದರೇನು, ಸಂಸತ್ತಿನಲ್ಲಿ ಅದನ್ನು ಮಂಡಿಸುತ್ತಿರುವುದು ಯಾಕಿರಬಹುದು?

ಶ್ವೇತಪತ್ರ ಎಂಬುದು ಸರ್ಕಾರದ ದಾಖಲೆ. ಬೆಂಬಲವನ್ನು ಪಡೆಯಲು ಮತ್ತು ಸಾರ್ವಜನಿಕ ಪ್ರತಿಕ್ರಿಯೆಯನ್ನು ಅಳೆಯಲು, ಅದೇ ರೀತಿ ಹೊಸ ನೀತಿಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸಲು ಶ್ವೇತ ಪತ್ರವನ್ನು ಪ್ರಸ್ತುತಪಡಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಬಿಳಿ ಹೊದಿಕೆಯಲ್ಲಿ ಕಟ್ಟಲಾಗುತ್ತದೆ.

ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಫೆ.1ರಂದು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2014 ರಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿತ್ತು ಎನ್ನುತ್ತ, ಇಂತಹ ಪರಿಸ್ಥಿತಿಗೆ ಹಿಂದಿನ ಸರ್ಕಾರದ "ದುರಾಡಳಿತ" ವನ್ನು ದೂಷಿಸಿದ್ದರು.

"2014 ರ (ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ) ತನಕದ ಅವಧಿಯಲ್ಲಿ ನಾವು ಎಲ್ಲಿದ್ದೆವು ಮತ್ತು ಈಗ ನಾವು ಎಲ್ಲಿದ್ದೇವೆ ಎಂಬುದನ್ನು ದೇಶದ ಮುಂದೆ ಇರಿಸುವುದಕ್ಕಾಗಿ ಕೇಂದ್ರ ಸರ್ಕಾರವು ಸದನದ ಮೇಜಿನ ಮೇಲೆ ಶ್ವೇತಪತ್ರವನ್ನು ಇರಿಸುತ್ತದೆ. ಈ ಶ್ವೇತ ಪತ್ರವನ್ನು ಹಿಂದಿನ ವರ್ಷಗಳ ದುರಾಡಳಿತದಿಂದ ಪಾಠಗಳನ್ನು ಕಲಿಯುವ ಉದ್ದೇಶದಿಂದ ಮಾತ್ರ ಮಂಡಿಸಲಾಗುತ್ತದೆ" ಎಂದು ಅವರು ಘೋಷಿಸಿದರು.

ಶ್ವೇತಪತ್ರವು ಹಣಕಾಸು ನೀತಿ, ವಿತ್ತೀಯ ನೀತಿ, ವ್ಯಾಪಾರ ನೀತಿ ಮತ್ತು ವಿನಿಮಯ ದರ ನೀತಿಯಂತಹ ವಿವಿಧ ಉಪವರ್ಗಗಳನ್ನು ಒಳಗೊಂಡಿರುವಾಗ ಭಾರತ ಸರ್ಕಾರದ ಒಟ್ಟಾರೆ ಆರ್ಥಿಕ ನೀತಿಯನ್ನು ವಿವರಿಸುತ್ತದೆ, ಮೌಲ್ಯಮಾಪನ ಮಾಡುತ್ತದೆ ಮತ್ತು ವಿಶ್ಲೇಷಿಸುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ