logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಮಾತುಕತೆ, ಬಗೆಹರಿದೀತೆ ಭಾರತ ಚೀನಾ ಗಡಿ ಗಲಾಟೆ, ಗಮನ ಸೆಳೆದ 5 ಅಂಶಗಳು

ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಮಾತುಕತೆ, ಬಗೆಹರಿದೀತೆ ಭಾರತ ಚೀನಾ ಗಡಿ ಗಲಾಟೆ, ಗಮನ ಸೆಳೆದ 5 ಅಂಶಗಳು

Umesh Kumar S HT Kannada

Dec 18, 2024 03:33 PM IST

google News

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯ ಕಡತ ಚಿತ್ರ. ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಯಿ ಮಾತುಕತೆ ನಡೆಯುತ್ತಿದ್ದು, ಅಲ್ಲಿ ಭಾರತ ಚೀನಾ ಗಡಿ ಗಲಾಟೆ ಬಗೆಹರಿದೀತೆ ಎಂಬ ಆಶಾಭಾವ ಸೃಷ್ಟಿಯಾಗಿದೆ.

  • Doval-Wang talks: ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಘರ್ಷ ವಿಶೇಷವಾಗಿ ಗಡಿ ವಿಚಾರದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಯಿ ಮಾತುಕತೆ ನಡೆಯುತ್ತಿದೆ. ಭಾರತ ಚೀನಾ ಗಡಿ ಗಲಾಟೆ ಬಗೆಹರಿಯಬಹುದಾ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮಾತುಕತೆಯ ಕಾರ್ಯಸೂಚಿಯಲ್ಲಿ ಗಮನಿಸಬಹುದಾದ 5 ಅಂಶಗಳಿವು.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯ ಕಡತ ಚಿತ್ರ. ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಯಿ ಮಾತುಕತೆ ನಡೆಯುತ್ತಿದ್ದು, ಅಲ್ಲಿ ಭಾರತ ಚೀನಾ ಗಡಿ ಗಲಾಟೆ ಬಗೆಹರಿದೀತೆ ಎಂಬ ಆಶಾಭಾವ ಸೃಷ್ಟಿಯಾಗಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯ ಕಡತ ಚಿತ್ರ. ಐದು ವರ್ಷಗಳ ಬಳಿಕ ದೋವಲ್‌ - ವಾಂಗ್ ಯಿ ಮಾತುಕತೆ ನಡೆಯುತ್ತಿದ್ದು, ಅಲ್ಲಿ ಭಾರತ ಚೀನಾ ಗಡಿ ಗಲಾಟೆ ಬಗೆಹರಿದೀತೆ ಎಂಬ ಆಶಾಭಾವ ಸೃಷ್ಟಿಯಾಗಿದೆ.

Doval-Wang talks: ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಮತ್ತು ಒಟ್ಟಾಗಿ ಕೆಲಸ ಮಾಡುವ ತನ್ನ ಬದ್ಧತೆಯನ್ನು ಚೀನಾ ಮಂಗಳವಾರ ಪುನರುಚ್ಚರಿಸಿದೆ. ಇದಾದ ಒಂದು ದಿನದ ನಂತರ, ಬುಧವಾರ (ಡಿಸೆಂಬರ್ 18) ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಬೀಜಿಂಗ್‌ನಲ್ಲಿ ನಡೆಯಲಿರುವ 23ನೇ ವಿಶೇಷ ಪ್ರತಿನಿಧಿಗಳ (ಎಸ್‌ಆರ್) ಸಭೆಯಲ್ಲಿ ಈ ಮಾತುಕತೆ ಆಯೋಜನೆಯಾಗಿದೆ. ಡಿಸೆಂಬರ್ 2019 ರ ನಂತರ ಮೊದಲ ಬಾರಿಗೆ ಈ ಸಭೆ ನಡೆಯುತ್ತಿದೆ. ಭಾರತದ ನಾಯಕರ ನಡುವೆ ಆಗಿರುವ ಮಹತ್ವದ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರಲು ಚೀನಾ ಸಿದ್ಧವಿದೆ. ಪರಸ್ಪರರ ಆಸಕ್ತಿಗಳು ಮತ್ತು ಕಾಳಜಿಗಳನ್ನು ಗೌರವಿಸುವುದು, ಸಂಭಾಷಣೆಯ ಮೂಲಕ ಪರಸ್ಪರ ನಂಬಿಕೆಯನ್ನು ಬಲಪಡಿಸುವುದು ಮತ್ತು ಪ್ರಾಮಾಣಿಕತೆ ಮತ್ತು ಉತ್ತಮ ನಂಬಿಕೆಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸುವುದು ಈ ಸಂವಾದದ ಉದ್ದೇಶವಾಗಿದೆ.

ಅಜಿತ್ ದೋವಲ್ ಮತ್ತು ವಾಂಗ್‌ ಯಿ ಮಾತುಕತೆ ವಿಶೇಷ

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ 23ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಅವರ ಮಾತುಕತೆಯಲ್ಲಿ ಪ್ರಸ್ತಾಪವಾಗುವ ವಿಚಾರಗಳಿವು

1) ಪೂರ್ವ ಲಡಾಖ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮತ್ತು ಗಸ್ತು ತಿರುಗುವ ಬಗ್ಗೆ ಅಕ್ಟೋಬರ್ 21 ರಂದು ಉಭಯ ದೇಶಗಳ ನಡುವೆ ನಡೆದ ಒಪ್ಪಂದದ ನಂತರ ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸುವುದು.

2) ಅಕ್ಟೋಬರ್ 24 ರಂದು ಬ್ರಿಕ್ಸ್ ಶೃಂಗಸಭೆಯ ಬದಿಯಲ್ಲಿ ರಷ್ಯಾದ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭೇಟಿಯ ಸಂದರ್ಭದಲ್ಲಿ ಸಾಧಿಸಿದ ಒಮ್ಮತದ ಆಧಾರದ ಮೇಲೆ ಬದ್ಧತೆಗಳನ್ನು ಗೌರವಿಸಲು ಸಿದ್ಧ ಎಂದು ಚೀನಾ ಮಂಗಳವಾರ ಹೇಳಿದೆ.

3) ಪರಸ್ಪರರ ನಂಬಿಕೆಯನ್ನು ಹೆಚ್ಚಿಸಲು, ನಮ್ಮ ಬದ್ಧತೆಗಳನ್ನು ಗೌರವಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲವಾದ ಮತ್ತು ಸುಸ್ಥಿರವಾಗಿ ಮುನ್ನಡೆ ಸಾಧಿಸುವುದು

4) ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ನಿರ್ವಹಣೆಯ ಬಗ್ಗೆ ಚರ್ಚಿಸಿ ಗಡಿ ಸಮಸ್ಯೆಯನ್ನು ಸಮಂಜಸ ರೀತಿಯಲ್ಲಿ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಭಾರತದ ವಿದೇಶಂಗ ಸಚಿವಾಲಯ ಹೇಳಿತ್ತು.

5) ಮಾತುಕತೆ ಮತ್ತು ಸಂವಹನ ಮತ್ತು ಪರಸ್ಪರ ನಂಬಿಕೆ ಮತ್ತು ಸಹಕಾರದ ಮೂಲಕ ಉಭಯ ನಾಯಕರ (ಮೋದಿ ಮತ್ತು ಜಿನ್‌ಪಿಂಗ್) ನಡುವಿನ ಪ್ರಮುಖ ಒಮ್ಮತವನ್ನು ಕಂಡುಕೊಳ್ಳಲು ಚೀನಾ ಬದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಹೇಳಿದ್ದರು.

ಭಾರತ - ಚೀನಾ ಗಡಿ ಗಲಾಟೆ, ರಾಜತಾಂತ್ರಿಕ ಸಂಬಂಧ

ವಿವಾದಿತ ಪೂರ್ವ ಲಡಾಖ್‌ನ ಲೈನ್ ಆಫ್ ಕಂಟ್ರೋಲ್‌ನಲ್ಲಿ ಉದ್ವಿಗ್ನ ವಾತಾವರಣ ಉಲ್ಬಣಗೊಳ್ಳುವಿಕೆ ಮತ್ತು ಸೇನೆಗಳ ಸ್ಥಳಾಂತರದ ಮುಂದಿನ ಹಂತದ ಕಡೆಗೆ ಚಲಿಸುವಾಗ ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿಯನ್ನು ಬಲಪಡಿಸಲು ಹೊಸ ಕ್ರಮಗಳನ್ನು ಈ ಮಾತುಕತೆ ಮೂಲಕ ಪರಿಗಣಿಸುತ್ತಾರೆ ಎಂದು ತಿಳಿಯಲಾಗಿದೆ. ಪಶ್ಚಿಮದ ಕಾರಕೋರಂ ಕಣಿವೆಯಂದ ಪೂರ್ವದ ಕಿಬುಥೂವರೆಗೆ ಎರಡೂ ಕಡೆಗಳಲ್ಲಿ ಸೇನೆ ಮತ್ತು ಯುದ್ಧೋಪಕರಣಗಳು ಜಮಾವಣೆಯಾಗಿವೆ. ಕ್ಸಿ ಜಿನ್‌ಪಿಂಗ್‌ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಪೂರ್ವ ವಲಯದಲ್ಲಿ ಮಧ್ಯಮ ಸಂಯೋಜಿತ ಸಶಸ್ತ್ರ ದಳಗಳ ನಿಯೋಜನೆಗೆ ಚೀನಾ ಸೇನೆ ಮುಂದಾಗಿತ್ತು ಎಂಬ ಅಂಶ ಗಮನಸೆಳೆದಿತ್ತು. ಈಗ ದೋವಲ್-ವಾಂಗ್ ಸಭೆಯ ಬಗ್ಗೆ ಮೋದಿ ಸರ್ಕಾರ ಏನೂ ಹೇಳಿಲ್ಲವಾದರೂ, ಇಬ್ಬರು ಹಿರಿಯ ಅಧಿಕಾರಿಗಳು ಗಡಿ ಗಲಾಟೆ ಇತ್ಯರ್ಥಕ್ಕೆ ಸೂಕ್ತ ಪರಿಹಾರದ ಪ್ರಸ್ತಾಪಗಳನ್ನು ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ