logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mozambique Boat Tragedy: ಮೊಜಾಂಬಿಕ್ ಸಮುದ್ರದಲ್ಲಿ ದೋಣಿ ಮುಳುಗಿ 90ಕ್ಕೂ ಅಧಿಕ ಮಂದಿ ಸಾವು; ಹಲವರು ನಾಪತ್ತೆ

Mozambique Boat Tragedy: ಮೊಜಾಂಬಿಕ್ ಸಮುದ್ರದಲ್ಲಿ ದೋಣಿ ಮುಳುಗಿ 90ಕ್ಕೂ ಅಧಿಕ ಮಂದಿ ಸಾವು; ಹಲವರು ನಾಪತ್ತೆ

Raghavendra M Y HT Kannada

Apr 08, 2024 01:27 PM IST

google News

130 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿರುವುದು

  • ದೋಣಿ ಮುಳುಗಿ 90ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ದುರಂತ ದಕ್ಷಿಣ ಆಫಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ದೋಣಿಯಲ್ಲಿ ಒಟ್ಟು 130 ಮಂದಿ ಇದ್ದರು.

130 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿರುವುದು
130 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿರುವುದು (Rep image )

ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್‌ನಲ್ಲಿ (Mozambique Boat Tragedy) ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಉತ್ತರ ಕರಾವಳಿಯಲ್ಲಿ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಘಟನೆ ಭಾನುವಾರ (ಏಪ್ರಿಲ್ 7) ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುರಂತದಲ್ಲಿ ಹಲವರು ನಾಪತ್ತೆಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ರಕ್ಷಣಾ ಪಡೆಗಳು ನಾಪತ್ತೆಯಾಗಿರುವವರಾಗಿ ಹುಡುಕಾಟ ನಡೆಸಿದ್ದಾರೆ. ಐವರು ಬದುಕುಳಿದವರನ್ನು ಪತ್ತೆಹಚ್ಚಿದ್ದಾರೆ. ಸುಮಾರು 130 ಜನರನ್ನು ಹೊತ್ತ ಮೀನುಗಾರಿಕಾ ದೋಣಿ ನಂಪುಲಾ ಪ್ರಾಂತ್ಯದ ದ್ವೀಪವನ್ನು ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ದೋಣಿಯಲ್ಲಿನ ಸಮಸ್ಯೆಯಿಂದಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ ಹೆಚ್ಚು ಜನರನ್ನು ಸಾಗಿಸುವ ಪ್ರಯತ್ನ ಮಾಡಲಾಗಿದೆ. ಅದಲ್ಲದೆ, ಮೀನುಗಾರರ ದೋಣಿಯಲ್ಲಿ ಇಂತಹ ಸಾಹಸ ಮಾಡಿರುವುದೇ ದುರಂತಕ್ಕೆ ಕಾರಣ. ಸುಮಾರು 91 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಅನೇಕ ಮಕ್ಕಳು ಸೇರಿದ್ದಾರೆ ಎಂದು ನಾಂಪುಲಾದ ರಾಜ್ಯ ಕಾರ್ಯದರ್ಶಿ ಜೈಮ್ ನೆಟೊ ಹೇಳಿದ್ದಾರೆ. ರಕ್ಷಣಾ ಸಿಬ್ಬಂದಿ ಐವರು ಬದುಕುಳಿದವರನ್ನು ಪತ್ತೆಹಚ್ಚಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವಾರು ಮಂದಿ ನಾಪತ್ತೆಯಾಗಿದ್ದು, ಅವರಿಗೆ ಹುಡುಕಾಟ ಮುಂದುವರಿದಿದೆ. ಆದರೆ ಸಮುದ್ರದ ಪರಿಸ್ಥಿತಿಗಳು ಕಾರ್ಯಾಚರಣೆ ಅಡ್ಡಿಯಾಗುತ್ತಿವೆ. ದೋಣಿ ದುರಂತಕ್ಕೆ ಕಾರಣವನ್ನು ತಿಳಿಯಲು ತನಿಖಾ ತಂಡವೂ ಕೆಲಸ ಮಾಡುತ್ತಿದೆ ಎಂದು ಎಂದು ನೆಟೊ ಹೇಳಿದ್ದಾರೆ.

ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದ ಮೊಜಾಬಿಂಕ್‌ನಲ್ಲಿ ಅಕ್ಟೋಬರ್‌ನಿಂದ ಈವರೆಗೆ ಸುಮಾರು 15,000 ಮಂದಿಗೆ ನೀರಿನಿಂದ ಹರಡುವ ರೋಗಗಳು ಕಾಣಿಸಿಕೊಂಡಿವೆ. ಈ ಪೈಕಿ 32 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ. ನಾಂಪುಲಾ ಅತಿ ಹೆಚ್ಚು ರೋಗ ಪೀಡಿತ ಪ್ರದೇಶವಾಗಿದ್ದು, ಒಟ್ಟು ಪ್ರಕರಣಗಳ ಮೂರನೇ ಒಂದು ಭಾಗ ಇಲ್ಲೇ ದಾಖಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಈ ಭಾಗದಲ್ಲಿ ಉತ್ತರದ ನೆರೆಯ ಕ್ಯಾಬೊ ಡೆಲ್ಗಾಡೊದಲ್ಲಿ ಜಿಹಾದಿಗಳ ದಾಳಿಗಳಿಂದಾಗಿ ಇಲ್ಲಿಂದ ಪಲಾಯನ ಮಾಡುವ ದೊಡ್ಡ ಸಂಖ್ಯೆಯೇ ಇದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮೊಜಾಂಬಿಕ್ ದ್ವೀಪಕ್ಕೆ ಸ್ಥಾನ

ಪೋರ್ಚುಗೀಸ್ ಪೂರ್ವ ಆಫ್ರಿಕಾದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಣ್ಣ ಹವಳದ ದ್ವೀಪವಾದ ಮೊಜಾಂಬಿಕ್ ದ್ವೀಪಕ್ಕೆ ಆರಂಭದಲ್ಲಿ ದೋಣಿ ಮಾತ್ರ ಹೋಗುತ್ತದೆ. ಭಾರತಕ್ಕೆ ಹೋಗುವ ಮಾರ್ಗದಲ್ಲಿನ ಒಂದು ವ್ಯಾಪಾರ ಕೇಂದ್ರವನ್ನು ಆರಂಭದಲ್ಲಿ ಅರಬ್ ವ್ಯಾಪಾರಿಗಳು ಬಳಸುತ್ತಿದ್ದರು. ಇದನ್ನು ಪ್ರಸಿದ್ಧ ಅನ್ವೇಷಕ ವಾಸ್ಕೋ ಡ ಗಾಮಾ ಪೋರ್ಚುಗಲ್ ಗೆ ಹಕ್ಕು ಸಾಧಿಸಿದರು. 1960 ರ ದಶಕದಲ್ಲಿ ನಿರ್ಮಿಸಲಾದ ಸೇತುವೆಯಿಂದ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಈ ದ್ವೀಪವನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೂ ಸೇರಿಸಿದೆ.

ದಕ್ಷಿಣ ಆಫ್ರಿಕಾ, ಎಸ್ವಾಟಿನಿ, ಜಿಂಬಾಬ್ವೆ, ಜಾಂಬಿಯಾ, ಮಲವಿ ಮತ್ತು ತಾಂಜಾನಿಯಾದ ಗಡಿಗಳನ್ನು ಹೊಂದಿರುವ ಮೊಜಾಂಬಿಕ್, 1975 ರಲ್ಲಿ ಸ್ವಾತಂತ್ರ್ಯ ಪಡೆಯುವವರೆಗೂ ಪೋರ್ಚುಗೀಸ್ ವಸಾಹತು ಆಗಿತ್ತು. 30 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಇದು ನಿಯಮಿತವಾಗಿ ವಿನಾಶಕಾರಿ ಚಂಡಮಾರುತಗಳಿಂದ ಭಾರಿ ಪ್ರಮಾಣದಲ್ಲಿ ಹಾನಿಗೊಳಲಾಗಿತ್ತು. ಮಾರ್ಚ್‌ನಲ್ಲಿ ದಕ್ಷಿಣ ಕಡಲತೀರದ ಬಳಿ ಅಕ್ರಮ ಮೀನುಗಾರಿಕೆ ಹಡಗು ಚಂಡಮಾರುತದ ಹೊಡೆತಕ್ಕೆ ಸಿಲುಕ್ಕಿತ್ತು. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.

ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನರು ಮೊಜಾಂಬಿಕ್‌ನಲ್ಲಿ ಬಡತನದಲ್ಲಿ ವಾಸಿಸುತ್ತಿದ್ದಾರೆ. 2010 ರಲ್ಲಿ ಕ್ಯಾಬೊ ಡೆಲ್ಗಾಡೊದಲ್ಲಿ ಪತ್ತೆಯಾದ ವಿಶಾಲವಾದ ನೈಸರ್ಗಿಕ ಅನಿಲ ನಿಕ್ಷೇಪಗಳ ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟಿಕೊಂಡಿದೆ. ಆದರೆ ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಉಗ್ರರರು 2017 ರಿಂದ ನಡೆಸಿದ ಬಂಡಾಯವು ಈ ದೇಶದ ಪ್ರಗತಿಯನ್ನು ಸ್ಥಗಿತಗೊಳಿಸಿದೆ. ಉಗ್ರರ ನಡುವಿನ ಹೋರಾಟ ಪ್ರಾರಂಭವಾದಾಗಿನಿಂದ 5,000 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಸುಮಾರು 10 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ಬೇರೆ ಕಡೆ ಆಶ್ರಯ ಪಡೆದಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ