logo
ಕನ್ನಡ ಸುದ್ದಿ  /  Nation And-world  /  Internet Goes Crazy After Nasa Shares Stunning Images Of Night Side Of The Earth

Earth At Night: ಇರುಳಿನ ಮಡಿಲಿಗೆ ಒರಗಿದ ವಸುಧೆ: ಕಾರ್ಗತ್ತಲಿನಲ್ಲೂ ಬೆಳಗುವ ಭವ್ಯ ಭಾರತ ನಿಮಗೆ ಕಾಣುವುದೇ?

Nikhil Kulkarni HT Kannada

Mar 24, 2023 04:33 PM IST

ಭೂಮಿ

  • ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಕತ್ತಲು ಆವರಿಸಿದ ಭೂಮಿಯ ಅದ್ಭುತ ಛಾಯಾಚಿತ್ರವೊಂದನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. ನಮ್ಮ ಗ್ರಹದಾದ್ಯಂತ ಮಾನವ ವಸಾಹತು ಮಾದರಿಗಳ ಸ್ಪಷ್ಟ ನೋಟವನ್ನು ಒದಗಿಸುವ ನಾಸಾದ ಈ ಚಿತ್ರ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಭೂಮಿ
ಭೂಮಿ (Verified Instagram)

ವಾಷಿಂಗ್ಟನ್:‌ ಸಕಲ ಜೀವ ರಾಶಿಗಳನ್ನು ಸಲುಹುತ್ತಿರುವ ಭೂಮಿ ಕೇವಲ ನಮ್ಮ ಸೌರವವ್ಯೂಹದ ವಿಶಿಷ್ಟ ಗ್ರಹ ಮಾತ್ರವಲ್ಲ, ಗೋಚರ ಬ್ರಹ್ಮಾಂಡದಲ್ಲೇ ಇದುವರೆಗೂ ಪತ್ತೆಹಚ್ಚಿರುವ ಜೀವ ಸಂಕುಲದ ಅಸ್ತಿತ್ವ ಹೊಂದಿರುವ ಏಕೈಕ ಗ್ರಹ. ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತಲು 24 ಗಂಟೆಗಳ ಅವಧಿ ತೆಗೆದುಕೊಳ್ಳುವ ವಸುಧೆ, ತನ್ನ ಅರ್ಧ ಪಾರ್ಶ್ಚವನ್ನು ಸೂರ್ಯ ರಶ್ಮಿಗೆ ಸಮರ್ಪಿಸಿದರೆ, ಇನ್ನರ್ಧ ಭಾಗವನ್ನು ಇರುಳಿನ ಮಡಿಲಿಗೆ ಸಮರ್ಪಿಸುತ್ತಾಳೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಭೂಮಿಯನ್ನು ಬಾಹ್ಯಾಕಾಶದಿಂದ ನೋಡುವ ಸಾಮರ್ಥ್ಯ ಪಡೆದಿರುವ ಆಧುನಿಕ ಮಾನವ, ವಸುಧೆಯ ಬೆಳಗಿನ ವೈಭವ ಮಾತ್ರವಲ್ಲದೇ ಇರುಳಿನ ಸೊಬಗನ್ನೂ ಏಕಕಾಲದಲ್ಲಿ ಸವಿಯಬಲ್ಲ. ಅದರಂತೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಕತ್ತಲು ಆವರಿಸಿದ ಭೂಮಿಯ ಅದ್ಭುತ ಛಾಯಾಚಿತ್ರವೊಂದನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ.

ನಮ್ಮ ಗ್ರಹದಾದ್ಯಂತ ಮಾನವ ವಸಾಹತು ಮಾದರಿಗಳ ಸ್ಪಷ್ಟ ನೋಟವನ್ನು ಒದಗಿಸುವ ನಾಸಾದ ಈ ಚಿತ್ರ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವ, ತನ್ನ ಬುದ್ಧಿಶಕ್ತಿಯಿಂದ ಈ ಗ್ರಹವನ್ನು ಹೇಗೆ ರೂಪಿಸಿದ್ದಾನೆ ಎಂಬುದಕ್ಕೆ ನಾಸಾದ ಈ ಚಿತ್ರ ಸಾಕ್ಷಿಯಾಗಿದೆ.

2016ರಲ್ಲೇ ಕ್ಲಿಕ್ಕಿಸಿದ ಭೂಮಿಯ ಕತ್ತಲು ಭಾಗದ ಈ ಅದ್ಭುತ ಚಿತ್ರದಲ್ಲಿ, ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತಿರುವ ಭೂಮಿಯ ಬಾಹ್ಯ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಯುರೋಪ್ ಮತ್ತು ಉತ್ತರ ಆಫ್ರಿಕಾದ ನಗರಗಳು ಹೇಗೆ ಕಾರ್ಗತ್ತಲಿನಲ್ಲೂ ವಿದ್ಯುತ್‌ ದೀಪಗಳಿಂದ ಬೆಳಗುತ್ತಿವೆ ಎಂಬುದನ್ನು ನಾವು ಈ ಚಿತ್ರದಲ್ಲಿ ನೋಡಬಹುದಾಗಿದೆ.

ನಾಸಾ ಹಂಚಿಕೊಂಡ ಈ ಅಪರೂಪದ ಛಾಯಾಚಿತ್ರದಲ್ಲಿ ಭಾರತವನ್ನು ಕೂಡ ಸ್ಪಷ್ಟವಾಗಿ ಗುರುತಿಸಬಹುದಾಗಿದ್ದು, ಕತ್ತಲ ರಾತ್ರಿಯಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ ಎಂದು ಬಹುತೇಕ ನೆಟ್ಟಿಗರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಸಾದ ಮಾಜಿ ವಿಜ್ಞಾನಿ ಮಿಗುಯೆಲ್ ರೋಮನ್, ನಗರೀಕರಣ, ಆರ್ಥಿಕ ಬದಲಾವಣೆಗಳು ಮತ್ತು ವಿದ್ಯುದೀಕರಣದ ಮೂಲಕ ಕಾಲಾನುಕ್ರಮದಲ್ಲಿ ನಡೆದ ಬದಲಾವಣೆಗಳನ್ನು ನಾವು ಮೇಲ್ವಿಚಾರಣೆ ಮಾಡಬಹುದು ಎಂದು ಹೇಳಿದ್ದಾರೆ. ಮಾನವ ತನ್ನ ಬುದ್ಧಿಮತ್ತೆಯಿಂದ ಭೂಮಿಯನ್ನು ಹೇಗೆ ರೂಪಿಸಿದ್ದಾನೆ ಮತ್ತು ಅದರ ಸ್ವರೂಪದ ಅಮೂಲಾಗ್ರ ಬದಲಾವಣೆಗೆ ಹೇಗೆ ಕಾರಣೀಭೂತನಾಗಿದ್ದಾನೆ ಎಂಬುದನ್ನು ಈ ಚಿತ್ರದ ಮೂಲಕ ತಿಳಿದುಕೊಳ್ಳಬಹುದು ಎಂದು ರೋಮನ್‌ ಅಭಿಪ್ರಾಯಪಟ್ಟಿದ್ದಾರೆ.

ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡ ಭೂಮಿಯ ಇರುಳಿನ ಭಾಗದ ಈ ಫೋಟೋವನ್ನು, ಕೇವಲ ಒಂದು ದಿನದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಬ್ರಹ್ಮಾಂಡದ ಈ ಅಪರೂಪದ 'ನೀಲಿ ವಜ್ರ' ನಮ್ಮ ಮನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಸಂಬಂಧಿತ ಸುದ್ದಿ

Earth's Rotation Day: ಇಂದು ಭೂಮಿ ತಿರುಗುವ ದಿನ, ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು?

ಇಂದು ಭೂಮಿಯ ತಿರುಗುವಿಕೆ ದಿನ (Earth's Rotation Day). ಪ್ರತಿವರ್ಷ ಜನವರಿ 8ರಂದು ಜಗತ್ತಿನಾದ್ಯಂತ ಭೂಮಿಯ ಚಲನೆ ದಿನ, ಭೂಮಿಯ ತಿರುಗುವಿಕೆ ದಿನವಾಗಿ ಆಚರಿಸಲಾಗುತ್ತದೆ. ಪ್ರತಿದಿನದಂತೆ ಈ ದಿನವೂ ತನ್ನ ಕಕ್ಷೆಯಲ್ಲಿ ಭೂಮಿ ಸಹಜವಾಗಿ ತಿರುಗುತ್ತಿದೆ. ಹೀಗಿದ್ದರೂ, ಈ ದಿನವನ್ನು ಏಕೆ ಭೂಮಿಯ ಚಲನೆ ದಿನವಾಗ ಆಚರಿಸಲಾಗುತ್ತದೆ? ಎಂಬ ಮಾಹಿತಿಯೊಂದಿಗೆ ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವುದನ್ನು ನಿಲ್ಲಿಸಿದರೆ ಏನಾಗಬಹುದು ಎಂಬ ಮಾಹಿತಿಯೂ ಇಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು