ಜಾರ್ಖಂಡ್ ಚುನಾವಣಾ ಫಲಿತಾಂಶ: ಎನ್‌ಡಿಎ– ಇಂಡಿಯಾ ಒಕ್ಕೂಟದ ನಡುವೆ ತೀವ್ರ ಹಣಾಹಣಿ; ಹೀಗಿದೆ ಸದ್ಯದ ಚಿತ್ರಣ
Nov 23, 2024 10:25 AM IST
ಜಾರ್ಖಂಡ್ ಚುನಾವಣಾ ಫಲಿತಾಂಶ 2024
- Jharkhand Election results: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ನವೆಂಬರ್ 23) ಬೆಳಿಗ್ಗೆ 8 ಗಂಟೆಗೆ ಶುರುವಾಗಿದೆ. ಫಲಿತಾಂಶದ ಅಂತಿಮ ಹಂತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸದ್ಯ ಸ್ಥಿತಿಯಲ್ಲಿ ರಾಜ್ಯದಲ್ಲಿ ಇಂಡಿಯಾ ಒಕ್ಕೂಟ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಇಂಡಿಯಾ ಒಕ್ಕೂಟ 43 ಸ್ಥಾನ ಗಳಿಸಿದರೆ, ಎನ್‌ಡಿಎ 25ಕ್ಕೆ ಸ್ಥಾನ ಗಳಿಸಿದೆ.
Jharkhand Election results: ಜಾರ್ಖಂಡ್ ರಾಜ್ಯ ಉದಯವಾಗಿ 25 ವರ್ಷಗಳು ಕಳೆದಿವೆ. ಇಂದು (ನವೆಂಬರ್ 23) ಈ ರಾಜ್ಯದ 6ನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಪ್ರಾದೇಶಿಕ ಪಕ್ಷ ಜೆಎಂಎಂ ಹಾಗೂ ರಾಷ್ಟ್ರೀಯ ಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. 6ನೇ ವಿಧಾನಸಭಾ ಚುನಾವಣೆ ನವೆಂಬರ್ 13 ಹಾಗೂ ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಒಟ್ಟು 81 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇಂದು (ನವೆಂಬರ್ 23) ಮತದಾನದ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಜೆಎಂಎಂ ಮತ್ತೆ ಆಡಳಿತದ ಚುಕ್ಕಾಣಿಯ ಹಿಡಿಯುವುದೋ ಅಥವಾ ರಾಷ್ಟ್ರೀಯ ಪಕ್ಷ ಬಿಜೆಪಿ ತೆಕ್ಕೆಗೆ ಜಾರ್ಖಂಡ್ ಜಾರುವುದೋ ಎಂಬ ಕುತೂಹಲ ಎದುರಾಗಿದೆ. ಸದ್ಯ ಟ್ರೆಂಡ್ ಪ್ರಕಾರ ಜಾರ್ಖಂಡ್‌ನಲ್ಲಿ ಎನ್‌ಡಿ ಹಾಗೂ ಇಂಡಿಯಾ ಒಕ್ಕೂಟಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
24 ವರ್ಷಗಳ ಜಾರ್ಖಂಡ್ ರಾಜ್ಯ ರಾಜಕೀಯದಲ್ಲಿ ಅಸ್ಥಿರ ಬೆಳವಣಿಗೆಯನ್ನು ಗುರುತಿಸಬಹುದಾಗಿದೆ. ಈವರೆಗೆ ಈ ರಾಜ್ಯದಲ್ಲಿ 13 ಜನ ಮುಖ್ಯಮಂತ್ರಿಗಳಾಗಿದ್ದರು. ಇಷ್ಟೂ ಜನರಲ್ಲಿ ಸಂಪೂರ್ಣ ಅವಧಿಗೆ ಅಂದರೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದು ರಘುಬರ್ ದಾಸ್ ಎನ್ನುವುದು ಮಾತ್ರ. ಅಪಾರ ಖನಿಜ ಸಂಪನ್ಮೂಲಗಳನ್ನ ಹೊಂದಿರುವ ಜಾರ್ಖಂಡ್ 2000ನೇ ಇಸವಿಯಿಂದ ಬಿಹಾರದಿಂದ ಬೇರ್ಪಟ್ಟು ಸ್ವತಂತ್ರ್ಯ ರಾಜ್ಯವಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಇಲ್ಲಿನ ರಾಜಕೀಯದಲ್ಲಿ ಅಸ್ಥಿರತೆ ಎದುರಾಗುತ್ತಲೇ ಇದೆ. ರಾಜ್ಯವನ್ನು ಮುನ್ನಡೆಸಿದ 7 ಮುಖ್ಯಮಂತ್ರಿಗಳಲ್ಲಿ, ರಘುಬರ್ ದಾಸ್ ಮಾತ್ರ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಅಡೆತಡೆಯಿಲ್ಲದೆ ಪೂರ್ಣಗೊಳಿಸಿದರು.
ಜಾರ್ಖಂಡ್‌ನಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು ಬಿಜೆಪಿ ವಕ್ತಾರ ಪ್ರತುಲ್ ಶಾ ಡಿಯೋ ತಮ್ಮ ಪಕ್ಷಕ್ಕೆ ಗೆಲುವು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆಯ ಬಗ್ಗೆ ಮಾತನಾಡಿರುವ ಅವರು ‘ಈ ಎಣಿಕೆಯು ಸೊರೆನ್ ಸರ್ಕಾರದ ಆಡಳಿತದ ಅಂತ್ಯವನ್ನು ಸೂಚಿಸುತ್ತದೆ. ಹೇಮಂತ್ ಸೋರೆನ್ ಅವರ ಕಾಲ ಮುಗಿದಿದೆ ಮತ್ತು ಬಿಜೆಪಿ ಪ್ರಬಲ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲು ಸಜ್ಜಾಗಿದೆ ಎಂದು ಅವರು ಹೇಳಿದರು.