Maharashtra, Jharkhand Results Live: ಮಹಾರಾಷ್ಟ್ರದಲ್ಲಿ ಬಿಜೆಪಿ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮತದಾರರ ಆಶೀರ್ವಾದ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra, Jharkhand Results Live: ಮಹಾರಾಷ್ಟ್ರದಲ್ಲಿ ಬಿಜೆಪಿ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮತದಾರರ ಆಶೀರ್ವಾದ

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶದ ಲೈವ್ ಅಪ್‌ಡೇಟ್‌

Maharashtra, Jharkhand Results Live: ಮಹಾರಾಷ್ಟ್ರದಲ್ಲಿ ಬಿಜೆಪಿ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮತದಾರರ ಆಶೀರ್ವಾದ

08:59 AM ISTNov 23, 2024 02:29 PM Rakshitha Sowmya
  • twitter
  • Share on Facebook
08:59 AM IST

Maharashtra, Jharkhand Assembly Election Results 2024 Live Updates: ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಪೈಪೋಟಿ ಇತ್ತು. ಇದೀಗ ಬಿಜೆಪಿ ಮುನ್ನಡೆ ಸಾಧಿಸಿದೆ.

Sat, 23 Nov 202407:40 AM IST

Maharashtra election result live: ಮಹಾರಾಷ್ಟ್ರದಲ್ಲಿ ಮಹಾಯುತಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಭಾರೀ ಮುನ್ನಡೆ ಸಾಧಿಸಿದ ಮಹಾಯುತಿ, 217 ಕ್ಷೇತ್ರಗಳಲ್ಲಿ ಎನ್‌ಡಿಯ ನೇತೃತ್ವದ ಮಹಾಯುತಿ ಮುನ್ನಡೆ ಸಾಧಿಸಿದೆ. ಮಹಾವಿಕಾಸ್‌ ಅಘಾಡಿ 54 ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದು ಉಳಿದ ಪಕ್ಷಗಳು 17 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Sat, 23 Nov 202404:59 AM IST

Jharkhand election result live: ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಮುನ್ನಡೆ

ಜಾರ್ಖಂಡ್‌ನ ಒಟ್ಟು 81 ಸ್ಥಾನಗಳಲ್ಲಿ ಕಾಂಗ್ರೆಸ್‌ 45 ಕ್ಷೇತ್ರಗಳ ಮುನ್ನಡೆ ಸಾಧಿಸಿದರೆ ಬಿಜೆಪಿ 33 ಸ್ಥಾನಗಳ ಮುನ್ನಡೆ ಸಾಧಿಸಿದೆ.

Sat, 23 Nov 202404:42 AM IST

Jharkhand election result live: ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಮುನ್ನಡೆ

Jharkhand election result live: ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜೆಎಂಎಂ 20, ಕಾಂಗ್ರೆಸ್ 10, ಆರ್‌ಜೆಡಿ 5, ಸಿಪಿಐ(ಎಂಎಲ್)(ಎಲ್) 2 ಸ್ಥಾನದಲ್ಲಿ ಅಂತರ ಕಾಯ್ದುಕೊಂಡಿವೆ. ಅತ್ತ ಎನ್‌ಡಿಎ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಬಿಜೆಪಿ 21, ಎಜೆಎಸ್‌ಯುಪಿ 1, ಜೆಡಿಯು 1 ಸ್ಥಾನದಲ್ಲಿ ಮುನ್ನಡೆ ಪಡೆದಿವೆ.

Sat, 23 Nov 202404:11 AM IST

Maharashtra election result live: ಮಹಾರಾಷ್ಟ್ರದಲ್ಲಿ ಮ್ಯಾಜಿಕ್‌ ನಂಬರ್‌ ದಾಟಿದ ಮಹಾಯುತಿ

ಮಹಾರಾಷ್ಟ್ರದಲ್ಲಿ ಮಹಾಯತಿ-ಮಹಾ ವಿಕಾಸ್‌ ಅಘಾಡಿ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಮಹಾಯುತಿ 162 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾವಿಕಾಸ್‌ ಅಘಾಡಿ 107 ಕ್ಷೇತ್ರಗಳಲ್ಲಿ ಮುಂದಿದೆ.

Sat, 23 Nov 202403:58 AM IST

Maharashtra election result live: ಬಾಬಾ ಸಿದ್ದಿಕಿ ಪುತ್ರ ಜೀಶಾನ್‌ ಮುನ್ನಡೆ

ಮಹಾರಾಷ್ಟ್ರದ ಬಾಂದ್ರಾ ಈಸ್ಟ್‌ನಲ್ಲಿ ಎನ್‌ಸಿಪಿಯ ಜೀಶಾನ್‌ ಸಿದ್ದಿಕಿ ಮುನ್ನಡೆ ಸಾಧಿಸಿದ್ದಾರೆ. ಜೀಶಾನ್‌, ಇತ್ತೀಚೆಗೆ ಹತ್ಯೆಯಾದ ಬಾಬಾ ಸಿದ್ದಿಕಿ ಅವರ ಪುತ್ರ. ಶಿವಸೇನೆಯ ವರುಣ್‌ ಸರ್‌ದೇಸಾಯಿ ಅವರನ್ನು ಜೀಶಾನ್‌ ಹಿಂದಿಕ್ಕಿದ್ದಾರೆ.

Sat, 23 Nov 202403:47 AM IST

Maharashtra election result live: ಮಹಾಯುತಿ-ಮಹಾ ವಿಕಾಸ್‌ ಅಘಾಡಿ ನಡುವೆ ಜಿದ್ದಾಜಿದ್ದಿ

ಮಹಾರಾಷ್ಟ್ರದಲ್ಲಿ ಎನ್‌ಡಿಎ ನೇತೃತ್ವದ ಮಹಾಯುತಿ 136 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್‌ ಅಘಾಡಿ 123 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚನೆ ಮಾಡಲು 145 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಅವಶ್ಯಕತೆ ಇದೆ. ಬಾರಾಮತಿಯಲ್ಲಿ ಒಂದೇ ಕುಟುಂಬದ ಅಜಿತ್‌ ಪವಾರ್‌, ಯುಗೇಂದ್ರ ಪವಾರ್‌ ನಡುವೆ ಭಾರೀ ಪೈಪೋಟಿ ನಡೆದಿದೆ.

Sat, 23 Nov 202403:06 AM IST

Maharashtra election result live: ಮಹಾರಾಷ್ಟ್ರದಲ್ಲಿ ಏಕ್‌ನಾಥ್‌ ಶಿಂಧೆ, ಆದಿತ್ಯ ಠಾಕ್ರೆ ಮುನ್ನಡೆ

ಮುಂಬೈ ವರ್ಲಿ ಕ್ಷೇತ್ರದಲ್ಲಿ ಆದಿತ್ಯ ಠಾಕ್ರೆ, ಧನ್ವರ್‌ನಲ್ಲಿ ಬಾಬಾರಾವ್‌ ಮರಾಂಡಿ, ಬಾಂದ್ರಾದಲ್ಲಿ ಜೀಶಾನ್‌ ಸಿದ್ದಿಕಿ , ನಾಗಪುರ ನೈರುತ್ಯ ಕ್ಷೇತ್ರದಲ್ಲಿ ದೇವೇಂದ್ರ ಫಡ್ನವೀಸ್‌, ಗಂಡೇ ಕ್ಷೇತ್ರದಲ್ಲಿ ಕಲ್ಪನಾ ಸೋರೆನ್‌, ಬರ್ಹೈತ್‌ನಲ್ಲಿ ಹೇಮಂತ್‌ ಸೊರೇನ್‌, ಕೊಪ್ರಿ-ಪಚ್ಪಕ್ಕಾಡಿಯಲ್ಲಿ ಏಕ್‌ನಾಥ್‌ ಶಿಂಧೆ ಮುನ್ನಡೆ ಸಾಧಿಸಿದ್ದಾರೆ.

Sat, 23 Nov 202404:40 AM IST

Maharashtra election result live: 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಮಹಾಯುತಿ ಮೈತ್ರಿಕೂಟ

ಬಾರಾಮತಿ ಕ್ಷೇತ್ರದಲ್ಲಿ ಅಜಿತ್‌ ಪವಾರ್‌ಗೆ ಹಿನ್ನಡೆ. ಮಹಾವಿಕಾಸ್‌ ಅಘಾಡಿಗೆ 18 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಯುತಿ ಮೈತ್ರಿಕೂಟ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ವರ್ಲಿ ಕೇತ್ರದಲ್ಲಿ ಆದಿತ್ಯ ಠಾಕ್ರೆಗೆ ಮುನ್ನಡೆ.

Sat, 23 Nov 202402:38 AM IST

Jharkhand election result live: ಜಾರ್ಖಂಡ್‌ನಲ್ಲಿ ಮತ ಎಣಿಕೆ ಆರಂಭ

ಜಾರ್ಖಂಡ್‌ನಲ್ಲಿ ಮತ ಎಣಿಕೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತೆಯೊಂದಿಗೆ ಸ್ಟ್ರಾಂಗ್‌ ರೂಮ್‌ ತೆಗೆದಿರುವ ಚುನಾವಣಾ ಸಿಬ್ಬಂದಿ ಮೊದಲು ಅಂಚೆ ಮತ ಎಣಿಕೆ ಆರಂಭಿಸಿದ್ದಾರೆ.

Sat, 23 Nov 202402:04 AM IST

Maharashtra election result live: ಮಹಾರಾಷ್ಟ್ರದಲ್ಲಿ 10 ಹೈ ವೋಲ್ಟೇಜ್‌ ಕ್ಷೇತ್ರಗಳು

ಮಹಾರಾಷ್ಟ್ರ ವಿಧಾನಸಭೆ 288 ಕ್ಷೇತ್ರಗಳ ಪೈಕಿ ಆಯ್ದ ಈ 10 ಕ್ಷೇತ್ರಗಳು ತಮ್ಮದೇ ಆದ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದು ಪ್ರಮುಖ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ. ಈ ಪೈಕಿ ವರ್ಲಿ, ಬಾರಾಮತಿ, ವಾಂದ್ರೆ ಈಸ್ಟ್‌, ನಾಗಪುರ ನೈಋತ್ಯ, ಕೊಪ್ರಿ-ಪಚ್ಪಖಾಡಿ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿವೆ. ಮಹಾರಾಷ್ಟ್ರ ಚುನಾವಣೆಯಲ್ಲಿ 288 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇಕಡ 66ರಷ್ಟು ಮತದಾನವೂ ಆಗಿದೆ. ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರ ಚುನಾವಣೆಯ ಸಮಗ್ರ ವಿಶ್ಲೇಷಣೆ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

Sat, 23 Nov 202401:13 AM IST

Jharkhand election result live: ಜಾರ್ಖಂಡ್‌ನಲ್ಲಿ ಈ ಹಿಂದೆ ಯುಪಿಎಗೆ ಗೆಲುವು

ಜಾರ್ಖಂಡ್‌ ರಾಜ್ಯ ರಚನೆಯಾಗಿ 24 ವರ್ಷ ಪೂರ್ಣಗೊಂಡು ಈಗ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಐದು ವಿಧಾನಸಭೆ ಚುನಾವಣೆ ಮುಗಿದು ಆರನೇ ಚುನಾವಣೆ ನಡೆದಿದೆ. ಹಿಂದಿನ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಹಿಂದಿನ ಚುನಾವಣೆಯಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್‌ ಮೈತ್ರಿಯೊಂದಿಗೆ 46 ಸ್ಥಾನ ಪಡೆದು ಯುಪಿಎ ಅಧಿಕಾರದಲ್ಲಿತ್ತು. ಅದರ ಹಿಂದಿನ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಜಾರ್ಖಂಡ್‌ ಚುನಾವಣಾ ಕಣದ ಸಂಪೂರ್ಣ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

Sat, 23 Nov 202412:42 AM IST

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ, ಮತ ಎಣಕೆ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್‌

ಭಾರತೀಯ ಚುನಾವಣಾ ಆಯೋಗವು ಇಂದು ಸಂಜೆ ಚುನಾವಣಾ ಫಲಿತಾಂಶ ಪ್ರಕಟಿಸಲಿದೆ. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಮೇಲ್ವಿಚಾರಕರು, ಸಹಾಯಕರು, ಸೂಕ್ಷ್ಮ ವೀಕ್ಷಕರು, ರಾಜಕೀಯ ಪಕ್ಷಗಳ ಏಜೆಂಟರ ಉಪಸ್ಥಿತಿಯಲ್ಲಿ ಮತ ಎಣಿಕೆ ಆರಂಭವಾಗಲಿದೆ.

ಹಂಚಿಕೊಳ್ಳಲು ಲೇಖನಗಳು

  • twitter